×
Ad

ತಂದೆಯನ್ನು ಹುಡುಕುತ್ತಾ ಪಂಜಾಬ್‌ನಿಂದ ಜಮ್ಮುವಿಗೆ ಬಂದ ಎಂಟು ವರ್ಷದ ಪೋರ

Update: 2016-03-23 16:34 IST

ಜಮ್ಮು, ಮಾರ್ಚ್23: ತಂದೆಯನ್ನು ಹುಡುಕುತ್ತಾ ಎಂಟು ವರ್ಷದ ಬಾಲಕ ಪಂಜಾಬ್‌ನಿಂದ ಜಮ್ಮುವಿಗೆ ತಲುಪಿದ ಘಟನೆ ವರದಿಯಾಗಿದೆ. ಕೆಲವು ದಿನಗಳಿಂದ ತಂದೆಯನ್ನು ಕಾಯುತ್ತಿದ್ದ ಬಾಲಕ,ಫೋನ್‌ಕೂಡ ಮಾಡದ್ದರಿಂದ ತಂದೆಯನ್ನು ಹುಡುಕಲು ಒಬ್ಬಂಟಿಯಾಗಿ ಹೊರಟು ಅಲೆದಾಡುತ್ತಾ ಜಮ್ಮುವಿಗೆ ಬಂದಿದ್ದನೆಂದು ವರದಿಯಾಗಿದೆ.

ರೈಲ್ವೆಸ್ಟೇಶನ್‌ನಲ್ಲಿ ಮಂಗಳವಾರದಂದು ಪುಟ್ಟಬಾಲಕನೊಬ್ಬ ಅಲೆದಾಡುತ್ತಿರುವುದನ್ನು ಗಮನಿಸಿದ್ದ ರೈಲ್ವೆ ಪ್ರೊಟೆಕ್ಷನ್ ಪೋರ್ಸ್(ಆರ್‌ಪಿಎಫ್) ಕಾನ್‌ಸ್ಟೇಬಲ್‌ವೊಬ್ಬರು ಮಗುವನ್ನು ಹತ್ತಿರ ಕರೆದು ಹೆಸರು_ ವಿಳಾಸ ಇತ್ಯಾದಿಯನ್ನು ಕೇಳಿದಾಗ ತಾನು ತಂದೆಯನ್ನು ಹುಡುಕುತ್ತಿದ್ದೇನೆಂದೂ ತಂದೆ ಜಮ್ಮುವಿನಲ್ಲಿ ಕೆಲಸಮಾಡುತ್ತಿದ್ದಾರೆಂದು ಆ ಪುಟ್ಟ ಬಾಲಕ ತಿಳಿಸಿದ್ದ. ಆ ನಂತರ ಬಾಲಕನನ್ನು ಸುರಕ್ಷಿತವಾಗಿ ಚೈಲ್ಡ್ ಲೈನ್‌ಗೆ ಪೊಲೀಸರು ಹಸ್ತಾಂತರಿಸಿದ್ದಾರೆ.

ಆರ್‌ಪಿಎಫ್ ಕಾನ್‌ಸ್ಟೇಬಲ್ ಮಗುವಿನ ಕುರಿತು ಮೇಲಧಿಕಾರಿಗಳಿಗೆ ತಿಳಿಸಿದಾಗ ಮಗುವನ್ನು ಠಾಣೆಗೆ ಕರೆದೊಯ್ಯಲು ಸೂಚಿಸಿದ್ದರು ತರುವಾಯ ಅಲ್ಲಿ ಬಾಲಕ ತನ್ನ ಹೆಸರು ಹರಪ್ರೀತ್ ಸಿಂಗ್, ಎಂಟು ವರ್ಷ ಮತ್ತು ತಂದೆಯ ಹೆಸರು ಗುರ್‌ಮೀತ್ ಸಿಂಗ್ ಎಂದು ತಿಳಿಸಿದ್ದಾನೆ. ಬಾಲಕನನ್ನು ಚೈಲ್ಡ್‌ಲೈನ್‌ಗೆ ಹಸ್ತಾಂತರಿಸಲಾಗಿದ್ದು ತಂದೆತಾಯಂದಿರ ಮಾಹಿತಿ ಸಿಕ್ಕಿದೊಡನೆ ಜಮ್ಮುವಿಗೆ ಕರೆಯಿಸಿಕೊಂಡು ಕಾನೂನು ಪ್ರಕ್ರಿಯೆಯಂತೆ ಅವರ ವಶಕೊಪ್ಪಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News