×
Ad

ಮಲ್ಲಾರು ಗ್ರಾಮಸ್ಥರೇ ಎಚ್ಚರಗೊಳ್ಳಿ

Update: 2016-03-23 23:08 IST

ಮಾನ್ಯರೆ, ಇತ್ತೀಚೆಗೆ ಕಾಪು ಪೇಟೆಯನ್ನೇ ದೃಷ್ಟಿಯಲ್ಲಿರಿಸಿಕೊಂಡು ಅದಕ್ಕೆ ಸಂಬಂಧಪಟ್ಟ ಬಿಲ್ಡರ್‌ಗಳ ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಮಣಿದು, ಕಾಪು ಕ್ಷೇತ್ರದ ಶಾಸಕ ಕಂ ನಗರಾಭಿವೃದ್ಧಿ ಸಚಿವರು ಕಾನೂನಿನ ತೊಡಕನ್ನು ನೀಗಿಸುವ ಸಲುವಾಗಿ ಸಂಪೂರ್ಣ ಕೃಷಿ ಗ್ರಾಮವಾದ ಮಲ್ಲಾರನ್ನು ಕೈಗಾರಿಕಾ ಪ್ರದೇಶವೆಂದು ಘೋಷಿಸಿ ಕಾಪುವಿನೊಂದಿಗೆ ಸೇರಿಸಿ ಕೊಂಡು ಪುರಸಭೆಯನ್ನಾಗಿಸಿದರು. ಆವಾಗಲೇ, ಮುಂದೆ ಆಗುವ ದುಷ್ಪರಿಣಾಮದ ಬಗ್ಗೆ ಕೆಲವೊಂದು ಬುದ್ಧಿಜೀ ವಿಗಳು ಪತ್ರಿಕಾ ಮತ್ತು ದೃಶ್ಯ ಮಾಧ್ಯಮದ ಮೂಲಕ ಗ್ರಾಮಸ್ಥರಿಗೆ ತಿಳುವಳಿಕೆಯನ್ನು ಮೂಡಿಸುವ ಕೆಲಸ ಮಾಡಿ ದರು. ಆದರೆ ಅಭಿವೃದ್ಧಿ ಆಗುವುದಾದರೆ ಯಾಕೆ ಅಡ್ಡಿಪಡಿಸಬೇಕೆಂದು ತಿಳಿದುಕೊಂಡ ಗ್ರಾಮಸ್ಥರು ಈ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆದ್ದರಿಂದ ಯಾವುದೇ ಹೆಚ್ಚಿನ ಪ್ರತಿರೋಧವಿಲ್ಲದೆ ಪುರಸಭೆಯು ಅಸ್ತಿತ್ವಕ್ಕೆ ಬಂತು.

ಇದಾದ ಆರು ತಿಂಗಳಲ್ಲಿಯೇ ಹಲವು ಸಮಸ್ಯೆಗಳು ಎದುರಾಗತೊಡಗಿದವು.
ಇದರೊಂದಿಗೆ ಇದೀಗ ಇಡೀ ಪುರಸಭೆ ವ್ಯಾಪ್ತಿಗೆ ಒಳಪಟ್ಟ ಕೊಳಚೆ ನೀರಿನ ಸಂಗ್ರಹದ ತೊಟ್ಟಿಯನ್ನು ಮಲ್ಲಾರು ಗ್ರಾಮದಲ್ಲಿ ಅಳವಡಿಸಲಾಗುತ್ತದೆ ಎಂದು ಸಚಿವರು ತಿಳಿಸಿರುತ್ತಾರೆ. ಇದಕ್ಕೆ ಗುರುತಿಸಿರುವ ಭಾಗವು ಮಳೆಗಾಲದಲ್ಲಿ ಹರಿದು ಹೋಗುವ ತೋಡಿನ ಬಳಿಯಿದ್ದು, ಈ ತೋಡು ಮಳೆ ಮುಗಿದ ಕೂಡಲೇ ಅಡ್ಡ ಕಟ್ಟಿ ನೀರು ಉಳಿಯುವಂತೆ ಮಾಡಿ ಕೃಷಿಗೆ ಬಳಸುತ್ತಿದ್ದು, ಮುಂದಿನ ದಿವಸಗಳಲ್ಲಿ ಕೊಳಚೆ ನೀರು ಇದರೊಂದಿಗೆ ಬೆರೆತು ಯಾರೂ ಉಪಯೋಗಿಸದಂತಾಗುವುದು ಮತ್ತು ಸುತ್ತ ಮುತ್ತಲಿನ ಬಾವಿಗಳಿಗೆ ಸೇರಿಕೊಂಡು ಕುಡಿಯಲು ಉಪಯೋಗಿಸದಂತಾಗುವುದು. ಆದ್ದರಿಂದ ಮಲ್ಲಾರು ಗ್ರಾಮದ ಗ್ರಾಮಸ್ಥರೇ, ದುರ್ಗಂಧ ಸೂಸಲಿರುವ, ರೋಗಗಳನ್ನು ಹರಡಲಿರುವ, ಕೊಳಚೆ ನೀರಿನ ಸಂಗ್ರಹದ ತೊಟ್ಟಿಯು ನಮ್ಮ ಗ್ರಾಮದಲ್ಲಿ ಅಳವಡಿಸಲು ಎಷ್ಟು ಮಾತ್ರಕ್ಕೂ ಅವಕಾಶ ಕೊಡದೆ ಈಗಿಂದಲೇ ಎಚ್ಚರಗೊಂಡು ಮುಂದೆ ಬರಬೇಕಾಗಿದೆ.

Writer - -ಅನ್ವರ್ ಅಲಿ, ಕಾಪು.

contributor

Editor - -ಅನ್ವರ್ ಅಲಿ, ಕಾಪು.

contributor

Similar News