ಡಿಎಂಡಿಕೆ-ಪಿಡಬ್ಲುಎಫ್ ಸಖ್ಯ: ವಿಜಯಕಾಂತ್ ಸಿಎಂ ಅಭ್ಯರ್ಥಿ
Update: 2016-03-23 23:46 IST
ಚೆನ್ನೈ, ಮಾ.22: ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಜೆ. ಜಯಲಲಿತಾರ ಎಡಿಎಂಕೆ ಹಾಗೂ ಎಂ.ಕರುಣಾನಿಧಿಯವರ ಡಿಎಂಕೆಗಳ ವಿರುದ್ಧ ಹೋರಾಡಲು ವಿಜಯಕಾಂತ್‌ರ ಡಿಎಂಡಿಕೆ ಹಾಗೂ ವೈಕೋ ನೇತೃತ್ವದ ಪೀಪಲ್ಸ್ ವೆಲ್ಫೇರ್ ಫ್ರಂಟ್‌ಗಳು (ಪಿಡಬ್ಲುಎಫ್) ಬುಧವಾರ ಕೈ ಜೋಡಿಸಿವೆ.
ಮೈತ್ರಿಕೂಟವು ನಟ-ರಾಜಕಾರಣಿ ವಿಜಯಕಾಂತ್‌ರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆರಿಸಿದೆ.
ಡಿಎಂಡಿಕೆ 124 ಸ್ಥಾನಗಳಿಗೆ ಸ್ಪರ್ಧಿಸಿದರೆ, ವೈಕೋರ ತಮಿಳುಪರ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ, ವಿಡುತಲೈ ಚಿರುತೈಗಳ್ ಕಚ್ಚಿ, ಸಿಪಿಐ, ಸಿಪಿಎಂಗಳ ಕೂಟವಾಗಿರುವ ಪಿಡಬ್ಲುಎಫ್, 110 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷಿಸಲಿದೆ.
ಈ ಕುರಿತು ಮುಖ್ಯಾಲಯದಲ್ಲಿ ಘೋಷಿಸಿದ ಮೈತ್ರಿಮಕೂಟದ ಹಿರಿಯ ನಾಯಕರಾದ ವೈಕೋ, ಜಿ.ರಾಮಕೃಷ್ಣನ್, ತೋಲ್ ತಿರುಮವಾಲವನ್, ಮುತ್ತರಸನ್ ಹಾಗೂ ವಿಜಯಕಾಂತ್ ಕ್ಯಾಮರಾಗಳ ಮುಂದೆ ಸಹಿ ಹಾಕಲಾದ ದಾಖಲೆಯೊಂದನ್ನು ಹಿಡಿದರು.