ಆಸಿಯಾ ಅಂದ್ರಾಬಿ ಪಕ್ಷದಿಂದ ಶ್ರೀನಗರದಲ್ಲಿ ಪಾಕ್ ಧ್ವಜಾರೋಹಣ
Update: 2016-03-23 23:47 IST
ಶ್ರೀನಗರ, ಮಾ.22: ಪಾಕಿಸ್ತಾನ ದಿನಾಚರಣೆಯ ದಿನವಾದ ಬುಧವಾರ ಆಸಿಯಾ ಅಂದ್ರಾಬಿ ನೇತೃತ್ವದ ಪ್ರತ್ಯೇಕತಾವಾದಿ ದುಖ್ತಾರನ್-ಎ-ಮಿಲ್ಲತ್ (ಡಿಇಎಂ) ಸಂಘಟನೆಯು ಶ್ರೀನಗರದ ಹಲವು ಕಡೆಗಳಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಿದೆ.
ಸಿವಿಲ್ ಲೈನ್ ಹಾಗೂ ಲಾಲ್ ಚೌಕ್ ಸಹಿತ ಹಲವೆಡೆ ಡಿಇಎಂ ಕಾರ್ಯಕರ್ತರು ಪಾಕಿಸ್ತಾನದ ಧ್ವಜ ಹಾರಿಸಿದರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಬಳಿಕ ಧ್ವಜಗಳನ್ನು ತೆರವುಗೊಳಸಿದ್ದಾರೆ.
ಅಂದ್ರಾಬಿಯ ಪಕ್ಷವು ಪ್ರತಿ ವರ್ಷ ಪಾಕಿಸ್ತಾನ ದಿನಾಚರಣೆಯಂದು ಹಾಗೂ ಪಾಕಿಸ್ತಾನದ ಸ್ವಾತಂತ್ರ ದಿನದಂದು ಪಾಕಿಸ್ತಾನದ ಧ್ವಜವನ್ನು ಹಾರಿಸುತ್ತಿದೆ.
ಕಳೆದ ವರ್ಷ ಪಾಕಿಸ್ತಾನದ ಧ್ವಜಾರೋಹಣ ಮಾಡಿದುದಕ್ಕಾಗಿ ಅಂದ್ರಾಬಿಯ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯನ್ವಯ ಮೊಕದ್ದಮೆ ದಾಖಲಿಸಲಾಗಿತ್ತು.