ಐಡಿಬಿಐ ಮಲ್ಯರಿಗೆ 900 ಕೋಟಿ ರೂ. ಸಾಲ ಯಾಕೆ ನೀಡಿತು?: ಎರಡು ಕುತೂಹಲಕರ ಟಿಪ್ಪಣಿಗಳು
ಹೊಸದಿಲ್ಲಿ, ಮಾ.23: ಸರಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕ್ ವಿಜಯ ಮಲ್ಯರ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ರೂ. 900 ಕೋಟಿ ಸಾಲವನ್ನು ಕೊಟ್ಟಾಗಲೇ ಸಂಸ್ಥೆಯು ಭಾರೀ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿತ್ತು. ಈ ಸಾಲವನ್ನು 2009ರಲ್ಲಿ ನೀಡಲಾಗಿತ್ತು. ಆ ವರ್ಷ ಮಾರ್ಚ್‌ನಲ್ಲಿ ವಿಮಾನ ಸಂಸ್ಥೆಯು ಸುಮಾರು ರೂ. 1,600 ಕೋಟಿ ನಷ್ಟವನ್ನು ಘೋಷಿಸಿತ್ತು.
ಐಡಿಬಿಐಯಲ್ಲಿ ಆಂತರಿಕ ಟಿಪ್ಪಣಿಯೊಂದು ಆ ನಷ್ಟವನ್ನು ಸೂಚಿಸಿತ್ತು. ಇನ್ನೊಂದು ಟಿಪ್ಪಣಿಯು ಐಶಾರಾಮಿ ವಿಮಾನ ಸಂಸ್ಥೆಯ ಬಗ್ಗೆ ಧನಾತ್ಮಕವಾಗಿ ಹೊಗಳಿತ್ತು. ಕಿಂಗ್ ಫಿಶರ್‌ನ ಬ್ರಾಂಡ್ ವೌಲ್ಯವನ್ನು ಪ್ರಧಾನವಾಗಿ ಬಿಂಬಿಸಿದ (ಮಲ್ಯ ಇದೇ ಹೆಸರಿನ ಬಿಯರ್‌ನಿಂದ ಹೆಚ್ಚಿನ ಸಂಪತ್ತು ಗಳಿಸಿದ್ದಾರೆ) ಟಿಪ್ಪಣಿಯು, ಈ ಬ್ರಾಂಡನ್ನು ಒಟ್ಟಿಗೆ ಖಾತ್ರಿ ನೀಡಲಾಗಿದೆ ಎಂದಿತ್ತು. (ಇದರಿಂದಾಗಿ ಮಲ್ಯರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯಲು ಸಾಧ್ಯವಾಯಿತು). ಅದು ಮಲ್ಯರ ಮದ್ಯ ಕಂಪೆನಿಯು ನೀಡಿದ್ದ ಕಾರ್ಪೊರೇಟ್ ಗ್ಯಾರಂಟಿಯ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿತ್ತು. ಯುನೈಟೆಡ್ ಬ್ರುವರೀಸ್‌ನಂತಹ ಕಂಪೆನಿಗಳಲ್ಲಿ ಅದರ ಪಾಲು ಹಲವು ನೂರು ಕೋಟಿಗಳಿವೆ.
ಮೊದಲ ಟಿಪ್ಪಣಿಯ ಕಳವಳವನ್ನು ತಳ್ಳಿಹಾಕಿದ್ದ ಬ್ಯಾಂಕ್ ಅಧಿಕಾರಿಗಳು ಎರಡನೆಯ ಟಿಪ್ಪಣಿಯನ್ನು ರೂ. 900 ಕೋಟಿ ಸಾಲ ನೀಡಲು ಉಪಯೋಗಿಸಿದ್ದರು ಎಂದಿರುವ ತನಿಖೆದಾರರು, ಮಲ್ಯ ಐಡಿಬಿ ಸಾಲದ ಒಂದು ಭಾಗವನ್ನು ಕಾನೂನು ಬಾಹಿರವಾಗಿ ವಿದೇಶಕ್ಕೆ ಕಳುಹಿಸಿದ್ದರೆಂದು ತಿಳಿಸಿದ್ದಾರೆ.
ಈ ಹಣವನ್ನು ವಿದೇಶಗಳಲ್ಲಿ ತನ್ನ ವಿಮಾನಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ನಿಲ್ಲಿಸಿದ್ದ ಶುಲ್ಕ ಬಾಕಿ ತೀರಿಸಲು ಹಾಗೂ ವಿಮಾನ ಕಾರ್ಯಾಚರಣೆಗಳಿಗೆ ತಗಲಿದ ಇತರ ನೈಜ ವೆಚ್ಚಗಳಿಗಾಗಿ ಬಳಸಲಾಗಿದೆಯೆಂದು ಈ ತಿಂಗಳ ಆರಂಭದಲ್ಲಿ ಲಂಡನ್‌ಗೆ ಪಲಾಯನ ಮಾಡಿರುವ ಮಲ್ಯ ಪ್ರತಿಪಾದಿಸಿದ್ದರು.
ಆದರೆ, ಐಡಿಬಿಐ ಸಾಲವು ಎರಡು ತನಿಖೆಗಳಿಗೆ ಅರ್ಹವಾಗಿದೆ. ಆರ್ಥಿಕ ಅಪರಾಧಗಳ ವಿರುದ್ಧ ಹೋರಾಡುತ್ತಿರುವ ಜಾರಿ ನಿರ್ದೇಶನಾಲಯವು ಹಣ ಚೆಲುವೆ ಆರೋಗ್ಯದ ಕುರಿತು ತನಿಖೆ ನಡೆಸುತ್ತಿದೆ. ಇನ್ನೊಂದೆಡೆ ಸಿಬಿಐ, ಸಾಕಷ್ಟು ಭದ್ರತೆಯಿಲ್ಲದ ಸಾಲವನ್ನು ಮಲ್ಯರಿಗೆ ನೀಡುವಲ್ಲಿ ಬ್ಯಾಂಕ್ ಅಧಿಕಾರಿಗಳೂ ಶಾಮೀಲಾಗಿದ್ದಾರೆಯೇ ಎಂಬ ಕುರಿತು ತನಿಖೆ ನಡೆಸುತ್ತಿದೆ. 9 ಸಾವಿರ ಕೋ.ರೂ.ಗಳಷ್ಟು ಸಾಲ ಬಾಕಿ ಮಾಡಿರುವುದಕ್ಕಾಗಿ ಭಾರತಕ್ಕೆ ಬೇಕಾಗಿರುವ ಮಲ್ಯ, ಕಳೆದ ವಾರ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದೆದುರು ಹಾಜರಾಗಲು ನಿರಾಕರಿಸಿದ್ದರು.
ಎಪ್ರಿಲ್‌ವರೆಗೆ ಸಮಯಾವಕಾಶ ಯಾಚಿಸಿದ್ದರು. ಅವರಿಗೆ ಮುಂಬೈ ಇ.ಡಿಯ ಮುಂದೆ ಹಾಜರಾಗುವಂತೆ ನೀಡಲಾಗಿರುವ ಎರಡನೆ ಸಮನ್ಸ್‌ಗೆ ಇದುವರೆಗೆ ಉತ್ತರ ಬಂದಿಲ್ಲ.
ಅವರ ಅನುಪಸ್ಥಿತಿಯಲ್ಲಿ ತನಿಖೆದಾರರು ಆ ಎರಡು ಟಿಪ್ಪಣಿಗಳನ್ನು ತಯಾರಿಸಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸುವಂತೆ ಐಡಿಬಿಐಗೆ ಸೂಚಿಸಿದ್ದಾರೆ. ಮಲ್ಯರಿಗೆ ಸಾಲ ಮಂಜೂರು ಮಾಡುವಲ್ಲಿ ಬ್ಯಾಂಕ್‌ನ ಮೇಲಧಿಕಾರಿಗಳ ಅಥವಾ ಹೊರಗಿನವರ ಒತ್ತಡವಿತ್ತೇ ಎಂದು ಅವರ ವಿಚಾರಣೆಯಿಂದ ತಿಳಿದುಕೊಳ್ಳುವುದು ತನಿಖೆದಾರರ ಉದ್ದೇಶವಾಗಿದೆ.
ಐಡಿಬಿಐಯ ಆಗಿನ ವರಿಷ್ಠ ಯೋಗೇಶ್ ಅಗರ್ವಾಲರ ವಿಚಾರಣೆ ಈಗಾಗಲೇ ನಡೆದಿದೆ. ಮೂರು ಕಂತುಗಳಲ್ಲಿ ರೂ. 900 ಕೋಟಿ ಸಾಲ ನೀಡಿದ ಬಳಿಕ ಮಲ್ಯರೊಂದಿಗೆ ನಡೆದಿದ್ದ ಸರಣಿ ಭೇಟಿಗಳ ಬಗ್ಗೆ ವಿವರ ನೀಡುವುದರಿಂದ ಅವರು ನುಣುಚಿಕೊಂಡಿದ್ದಾರೆಂದು ಮೂಲಗಳು ಹೇಳಿವೆ. ಐಡಿಬಿಐಯ ಗಾತ್ರದ ಬ್ಯಾಂಕೊಂದು ಹಿರಿಯ ಕಾರ್ಯವಾಹಿಯೊಬ್ಬನ ಆದೇಶದಂತೆ ಚೆಕ್‌ಗಳನ್ನು ಹಾಗೂ ಶಿಲ್ಕನ್ನು ಬರಿದುಮಾಡಲು ಸಾಧ್ಯವಿಲ್ಲವೆಂದು ಅಗರ್ವಾಲ್ ಹೇಳಿದ್ದರೆಂದು ವರದಿಯಾಗಿದೆ. ತನ್ನ ನಿರ್ಧಾರ ಸರಿಯಾದುದಾಗಿತ್ತೆಂಬುದಕ್ಕೆ ಪುರಾವೆಯಾಗಿ ಅವರು, ತಾನು ಬ್ಯಾಂಕ್‌ನಿಂದ ನಿರ್ಗಮಿಸಿದ ಬಳಿಕ ಬಂದ ತನ್ನ ಉತ್ತರಾಧಿಕಾರಿಯೂ ಮಲ್ಯರಿಗೆ ನೀಡಿದ್ದ ಸಾಲದ ಬಗ್ಗೆ ಪ್ರಶ್ನೆಯೆತ್ತಿರಲಿಲ್ಲ ಎಂಬುದನ್ನು ಬೆಟ್ಟು ಮಾಡಿದ್ದಾರೆಂದು ಹೇಳಲಾಗಿದೆ.