×
Ad

‘ಮೋದಿ ದೇವರ ವರ’: ಆರೆಸ್ಸೆಸ್‌ಗೆ ಮುಜುಗರ

Update: 2016-03-23 23:58 IST

ಹೊಸದಿಲ್ಲಿ, ಮಾ.23: ಮೋದಿ ಭಾರತಕ್ಕೆ ದೇವರು ಕೊಟ್ಟ ವರ ಎಂದು ಬಿಜೆಪಿ ನಾಯಕರು ಹೊಗಳಿರುವುದು ಆರೆಸ್ಸೆಸ್ ಕೆಂಗಣ್ಣಿಗೆ ಕಾರಣವಾಗಿದೆ.

 ರಾಜಸ್ಥಾನದ ನಾಗೂರ್‌ನಲ್ಲಿ ಇತ್ತೀಚೆಗೆ ನಡೆದ ಆರೆಸ್ಸೆಸ್ ಪ್ರತಿನಿಧಿ ಸಭೆಯ ಬಳಿಕ, ಮಂಗಳವಾರ ಆರೆಸ್ಸೆಸ್ ವರಿಷ್ಠರು ಬಿಜೆಪಿ ಮುಖಂಡರ ಜತೆ ಚರ್ಚೆ ನಡೆಸಿದರು. ಇದು ಸಭೆಯ ಫಲಿತಾಂಶಗಳ ಬಗ್ಗೆ ಪಕ್ಷಕ್ಕೆ ಮಾಹಿತಿ ನೀಡುವ ಔಪಚಾರಿಕ ಸಭೆಯಾಗಿತ್ತು ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ. ಪಕ್ಷದ ಅಧ್ಯಕ್ಷ ಅಮಿತ್ ಸೇರಿದಂತೆ ಇತರ ಮುಖಂಡರಿಗೆ ರಾಷ್ಟ್ರೀಯತೆಯ ವಿಚಾರ ಮುಂದುವರಿಸುವ ಜತೆಗೆ ಅಭಿವೃದ್ಧಿಯ ಕಡೆಗೂ ಗಮನ ಕೊಡುವಂತೆ ಕೇಸರಿ ಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಕೇಂದ್ರ ಸಚಿವ ವೆಂಕಯ್ಯನಾಯ್ಡು, ಮೋದಿಯನ್ನು ದೇವರ ವರ ಎಂದು ಬಣ್ಣಿಸಿರುವ ಬಗ್ಗೆಯೂ ಅಸಂತೋಷ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ. ವ್ಯಕ್ತಿಪೂಜೆಗಿಂತ ಸಂಘಟನೆ ಶ್ರೇಷ್ಠ ಎಂಬ ಸಂದೇಶವನ್ನು ರವಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News