ಮುಸ್ಲಿಮರು ದೇಶದ ಅವಿಭಾಜ್ಯ ಅಂಗ, ಅವರನ್ನು ಗುರಿ ಮಾಡುವ ಪ್ರಶ್ನೆಯೇ ಇಲ್ಲ
ಬ್ಯೂನಸ್ ಏರಿಸ್ : ಬ್ರಸ್ಸೆಲ್ಸ್ ದಾಳಿಯ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಮುಸ್ಲಿಮರನ್ನು ಪ್ರತ್ಯೇಕಿಸಬೇಕೆಂದು ಕೆಲ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಗಳು ಮುಂದಿಟ್ಟ ಬೇಡಿಕೆಯನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಸಾರಾಸಗಟಾಗಿ ತಿರಸ್ಕರಿಸಿದ್ದುಮುಸ್ಲಿಮರು ತಮ್ಮ ದೇಶದ ಅವಿಭಾಜ್ಯ ಅಂಗವೆಂದು ಹೇಳಿದ್ದಾರೆ.
ಅಮೆರಿಕಾದ ಮುಸ್ಲಿಂ ಸಮುದಾಯ ಯಶಸ್ಸು ಪಡೆದಿದೆಯಲ್ಲದೆ ದೇಶಾಭಿಮಾನಿಯಾಗಿದ್ದು ಹಾಗೂ ಏಕತೆಯನ್ನು ಕಾಪಾಡಿದೆಯೆಂದು ಒಬಾಮಾ ಪ್ರಶಂಸೆಯ ಮಾತುಗಳನ್ನೂ ಆಡಿದ್ದಾರೆ. ಇದೇ ಕಾರಣದಿಂದ ಮುಸ್ಲಿಮರ ಮೇಲೆ ಅಮೆರಿಕಾದಲ್ಲಿ ಹೆಚ್ಚು ದಾಳಿಗಳು ನಡೆದಿಲ್ಲವೆಂದೂ ಅವರು ಹೇಳಿದರು.
ಆರ್ಜೆಂಟಿನಾ ಭೇಟಿಯ ಸಂದರ್ಭ ಆಜೆಂಟಿನಾ ಅಧ್ಯಕ್ಷ ಮೌರಿಕಿಯೋ ಮಕ್ರಿ ಜತೆಸುದ್ದಿಗಾರರೊಂದಿಗೆ ಮಾತನಾಡಿದ ಒಬಾಮ ‘‘ಮುಸ್ಲಿಮರನ್ನು ಪ್ರತ್ಯೇಕಿಸುವ ಅಥವಾ ಅವರ ವಿರುದ್ಧ ತಾರತಮ್ಯ ನೀತಿ ಅನುಸರಿಸುವ ಯಾವುದೇ ಕ್ರಮ ತಪ್ಪು,’’ಎಂದು ಹೇಳಿದರು.
ಬ್ರಸ್ಸೆಲ್ಸ್ ದಾಳಿಕೋರರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಅಮೆರಿಕಾ ಬೆಲ್ಜಿಯಂಗೆ ಅಗತ್ಯ ಸಹಕಾರ ನೀಡುವುದಾಗಿಯೂ ಒಬಾಮ ಹೇಳಿದರು.
‘‘ಇಸ್ಲಾಮಿಕ್ ಸ್ಟೇಟನ್ನು ಮೊದಲುಸಿರಿಯಾದಿಂದಹಾಗೂ ನಂತರ ಇರಾಕ್‌ನಿಂದ ಓಡಿಸಿ ಆನಂತರ ಇಡೀ ಸಂಘಟನೆಯನ್ನೇ ನಾಶ ಮಾಡಲು ಅಮೆರಿಕಾತನ್ನ ಪ್ರಯತ್ನಗಳನ್ನು ಮುಂದುವರಿಸುವುದು,’’ ಎಂದರು ಒಬಾಮ.
ಅದೇ ಸಮಯ ಇಸ್ಲಾಮಿಕ್ ಉಗ್ರರ ದಾಳಿಗಳನ್ನುತಡೆಯುವುದು ಕಷ್ಟದ ಕೆಲಸವೆಂದು ಹೇಳಿದ ಒಬಾಮ ‘‘ಪ್ರಾಣ ತ್ಯಾಗ ಮಾಡಲು ಹಾಗೂ ಗುಂಪೊಂದರ ನಡುವೆ ನಡೆದು ಬಾಂಬ್ ಸ್ಫೋಟಿಸಲು ತಯಾರಿರುವ ಮಂದಿಯಿರುವ ಕೆಲವೇ ಕೆಲವು ಸಣ್ಣ ಗುಂಪುಗಳುಕಾರ್ಯನಿರ್ವಹಿಸುತ್ತಿರುವುದರಿಂದ ಅವರನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ,’’ ಎಂದು ಅಭಿಪ್ರಾಯ ಪಟ್ಟರು.