ಕನ್ಹಯ್ಯ ಮೇಲೆ ‘ಶೂ’ ಎಸೆತ

Update: 2016-03-24 18:24 GMT

ಹೈದರಾಬಾದ್, ಮಾ.24: ದೇಶಾದ್ಯಂತದ ವಿಶ್ವವಿದ್ಯಾನಿಲಯಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದೆಯೆಂದು ಸರಕಾರವನ್ನು ಆರೋಪಿಸಿದ, ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಕುಮಾರ್ ಮೇಲೆ ಹೈದರಾಬಾದ್‌ನಲ್ಲಿಂದು ಶೂ ಎಸೆಯಲಾಗಿದೆ. ಸುದ್ದಿಗೋಷ್ಠಿಯಲ್ಲಿ ಕೋಲಾಹಲ ಆರಂಭವಾದುದರಿಂದ ಪೊಲೀಸರು ಪ್ರತಿಭಟನಾಕಾರನನ್ನು ತೆರವುಗೊಳಿಸಿದ್ದಾರೆ.

ವಿದ್ಯಾರ್ಥಿಗಳನ್ನು ಹಾಗೂ ಪ್ರಾಧ್ಯಾಪಕರನ್ನು ಗುರಿಯಿರಿಸುತ್ತಿರುವ ವಿಧಾನದಲ್ಲಿ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೂ, ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾನಿ ಲಯಕ್ಕೂ ಸಾಮ್ಯವಿದೆ. ವಿಶ್ವವಿದ್ಯಾನಿಯಗಳ ಮೇಲೆ ಗಂಭೀರ ದಾಳಿ ನಡೆಯುತ್ತಿದೆಯೆಂದು ಹೈದರಾಬಾದ್‌ನಲ್ಲಿ ನಡೆದ ವಿಚಾರಗೋಷ್ಠಿಯೊಂದರಲ್ಲಿ ಕನ್ಹಯ್ಯಿ ಆರೋಪಿಸಿದರು. ಹೈದರಾಬಾದ್ ವಿವಿಯ ಆವರಣ ಪ್ರವೇಶಿಸಲು ನಿನ್ನೆ ಅವರಿಗೆ ಅವಕಾಶ ನೀಡಿರಲಿಲ್ಲ.

ವಿದ್ಯಾರ್ಥಿಗಳು ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆಂದು ಹೇಳುವುದು ಸರಿಯಲ್ಲ. ಐಐಟಿ-ಚೆನ್ನೈ, ಫರ್ಗ್ಯೂಸನ್, ಎಫ್‌ಟಿಐಐಗಳಲ್ಲಿ ಇಂತಹದೇ ಘಟನೆಗಳು ಹೇಗೆ ನಡೆದವು? ಕ್ಯಾಂಪಸ್‌ಗಳು ಯಾಕೆ ಯುದ್ಧವಲಯಗಳಾಗುತ್ತಿವೆ? ಆಂತರಿಕ ಭದ್ರತೆಗೆ ಈ ರೀತಿ ನಡೆಯಲು ಯಾರು ಆದೇಶಿಸುತ್ತಿದ್ದಾರೆಂಬ ತಾರ್ಕಿಕ ಪ್ರಶ್ನೆಯನ್ನು ತಾನು ಕೇಳಬೇಕಾಗಿದೆಯೆಂದು, ಕಳೆದ ಕೆಲವು ತಿಂಗಳುಗಳಿಂದ ದೇಶಾದ್ಯಂತದ ವಿಶ್ವವಿದ್ಯಾನಿಲಯಗಳಲ್ಲಿ ಭುಗಿಲೆದ್ದರುವ ಅಶಾಂತಿಯನ್ನುಲ್ಲೇಖಿಸಿ ಕನ್ಹಯ್ಯಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News