ಈ ವಿಶೇಷ ಪಟ್ಟಿಯಲ್ಲಿ ಭಾರತ ಯಾವುದೇ ನಗರಕ್ಕೆ ಸ್ಥಾನವಿಲ್ಲ !
ನ್ಯೂಯಾರ್ಕ್ ಮತ್ತು ಲಾಸ್ ಏಂಜಲೀಸ್ ನಗರಗಳು ರ್ಯಾಂಕಿಂಗಿನಲ್ಲಿ ಸ್ಥಾನಗಳನ್ನು ವೃದ್ಧಿಸಿಕೊಂಡಿವೆ. ಲಂಡನ್ ಟಾಪ್ ಟೆನ್ ಒಳಗೆ ಬಂದಿದೆ. ಆದರೆ ಇಂದಿಗೂ ಜಗತ್ತಿನ ಅತೀ ದುಬಾರಿ ನಗರವೆಂದರೆ ಸಿಂಗಾಪುರ. ಜೀವನಶೈಲಿಯಲ್ಲಿ ಅತೀ ದುಬಾರಿ ನಗರ ಯಾವುದು ಎಂದು 2016ರಲ್ಲಿ ಇಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ನಡೆಸಿದ ಸಮೀಕ್ಷೆಯಲ್ಲಿ ಸತತ ಮೂರನೇ ವರ್ಷ ಸಿಂಗಾಪುರ ಪ್ರಥಮ ಸ್ಥಾನ ಪಡೆದಿದೆ. ಆದರೆ ಭಾರತದ ನಗರಗಳಿಗೆ ಈ ಪಟ್ಟಿಯಲ್ಲಿ ಸ್ಥಾನವಿಲ್ಲ.
ಆದರೆ ಸಿಂಗಾಪುರ ಮತ್ತು ಇತರ ನಗರಗಳ ನಡುವಿನ ಅಂತರ ಕಡಿಮೆಯಾಗುತ್ತಾ ಬಂದಿವೆ. ಜ್ಯೂರಿಚ್, ಸ್ವಿಜರ್ಲಾಂಡ್ ಮತ್ತು ಹಾಂಗ್ ಕಾಂಗ್‌ಗಳು ಎರಡನೇ ಸ್ಥಾನದಲ್ಲಿವೆ. ಹಾಂಗ್ ಕಾಂಗ್ ಕಳೆದ 12 ತಿಂಗಳಲ್ಲಿ ಏಳನೇ ಸ್ಥಾನದಿಂದ ದ್ವಿತೀಯ ಸ್ಥಾನಕ್ಕೆ ಜಿಗಿದಿದೆ. ಲಂಡನ್, ನ್ಯೂಯಾರ್ಕ್ ಮತ್ತು ಲಾಸ್ ಏಂಜಲೀಸ್ ಕ್ರಮವಾಗಿ ಆರನೇ, ಏಳನೇ ಮತ್ತು ಎಂಟನೇ ಸ್ಥಾನಕ್ಕೆ ಏರಿವೆ.
ನ್ಯೂಯಾರ್ಕ್ 2002ರ ನಂತರ ಅತೀ ಎತ್ತರದ ಸ್ಥಾನ ಪಡೆದಿದೆ. ಕಳೆದ ಐದು ವರ್ಷಗಳಲ್ಲಿ 2011ರ ನಂತರ 42 ಸ್ಥಾನಗಳನ್ನು ಏರಿದೆ. ವಾರಕ್ಕೆ ಎರಡು ಬಾರಿ ಮಾಡುವ ಸಮೀಕ್ಷೆಯಲ್ಲಿ 133 ದುಬಾರಿ ನಗರಗಳನ್ನು ಹೆಸರಿಸಲಾಗುತ್ತದೆ. ಸಿಂಗಾಪುರದ ಸಾರಿಗೆ ವ್ಯವಸ್ಥೆಯೂ ಅತೀ ದುಬಾರಿ ಎಂದಿದೆ ಸಮೀಕ್ಷೆ. ಆದರೆ ಸರಕು ಸರಂಜಾಮಲ್ಲಿ ಹಾಂಗ್ ಕಾಂಗ್ ಮತ್ತು ಟೋಕಿಯೋಗೆ ಹೋಲಿಸಿದರೆ ಬೆಲೆ ಕಡಿಮೆ ಇದೆ. ದುಬಾರಿ ನಗರಗಳಲ್ಲಿ ಭಾರತಕ್ಕೆ ಸ್ಥಾನವಿಲ್ಲದೆ ಇದ್ದರೂ ಅಗ್ಗದ ನಗರಗಳಲ್ಲಿದೆ.
ಏಷ್ಯಾದ ಆರು ಅತೀ ಅಗ್ಗದ 133 ನಗರಗಳಲ್ಲಿ ಭಾರತದ ಮೆಟ್ರೋ ಸಿಟಿಗಳಿವೆ.
ಅತೀ ಅಗ್ಗದ ನಗರಗಳ ಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿರುವ ನಾಲ್ಕು ಭಾರತದ ನಗರಗಳೆಂದರೆ ನವದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈ. ಝಾಂಬಿಯಾದ ರಾಜಧಾನಿ ಲುಸಾಕ ಜಗತ್ತಿನಲ್ಲೇ ಅತೀ ಅಗ್ಗದ ನಗರ. 126ನೇ ಸ್ಥಾನದಲ್ಲಿ ನವದೆಹಲಿ, 127ನೇ ಸ್ಥಾನದಲ್ಲಿ ಚೆನ್ನೈ, 131ನೇ ಸ್ಥಾನದಲ್ಲಿ ಮುಂಬೈ, 132ರಲ್ಲಿ ಬೆಂಗಳೂರು ನಗರಗಳಿವೆ.