ಬೆಲ್ಜಿಯಂನಲ್ಲಿ ಸಿಲುಕಿಕೊಂಡಿದ್ದ 242 ಭಾರತೀಯರು ವಾಪಸ್
Update: 2016-03-25 11:56 IST
ಬ್ರಸೆಲ್ಸ್ , ಮಾ.25: ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ನ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ತ್ರಿವಳಿ ಬಾಂಬ್ ಸ್ಫೋಟದ ಬಳಿಕ ಸಿಲುಕಿಕೊಂಡಿದ್ದ ಭಾರತದ ನಾಗರಿಕರ ಪೈಕಿ 242 ಮಂದಿ ಇಂದು ಬೆಳಗ್ಗೆ ಭಾರತಕ್ಕೆ ವಾಪಸಾಗಿದ್ದಾರೆ.
ಜೆಟ್ ಏರ್‌ವೇಸ್‌ನ ವಿಮಾನದಲ್ಲಿ ಇವರೆಲ್ಲ ಆಂಸ್ಟರ್ಡ್ಯಾಮ್ ನಿಂದ ವಾಪಸಾದರು.
ಬ್ರಸೆಲ್ಸ್ ನಲ್ಲಿ ಸಿಲುಕಿಕೊಂಡಿದ್ದ ಇವರನ್ನು ಹಾಲೆಂಡ್ ರಾಜಧಾನಿ ಆಂಸ್ಟರ್ಡ್ಯಾಮ್ ಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಂದ ಜೆಟ್ ವಿಮಾನದ ಮೂಲಕ ಭಾರತೀಯರು ವಾಸಸಾಗಿದ್ದಾರೆ.
ವಿಮಾನ ನಿಲ್ದಾಣ ಮತ್ತು ಮೆಟ್ರೊ ರೈಲು ನಿಲ್ದಾಣವೊಂದರಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿದ್ದು ಕನಿಷ್ಠ 34ಮಂದಿ ಬಲಿಯಾಗಿದ್ದರು.200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.