×
Ad

ಭಾರತದ ಕ್ಷಿಪಣಿ ಪರೀಕ್ಷೆಗೆ ಆತಂಕ ವ್ಯಕ್ತಪಡಿಸಿದ ಅಮೆರಿಕ!

Update: 2016-03-25 16:07 IST

ಅಮೆರಿಕ,ಮಾರ್ಚ್.25:ಭಾರತವು ಇತ್ತೀಚೆಗೆ ಬಾಲೆಸ್ಟಿಕ್ ಮಿಸೈಲ್ ಅಗ್ನಿಯನ್ನು ಪರೀಕ್ಷಿಸಿದ ಕುರಿತು ಅಮೆರಿಕ ಆತಂಕ ವ್ಯಕ್ತಪಡಿಸಿದ್ದು ಇಂತಹ ಕಾರ್ಯಗಳಿಂದ ಪರಮಾಣು ಸುರಕ್ಷೆಯ ಭೀತಿ ಹೆಚ್ಚಲಿದೆ ಮತ್ತು ಅದರಿಂದಾಗಿ ವಲಯದ ಭದ್ರತೆ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಿದೆ. ವಿದೇಶ ಸಚಿವಾಲಯದ ವಕ್ತಾರ ಮಾರ್ಕ್ ಟೋನರ್ ಪತ್ರಕರ್ತರನ್ನುದ್ದೇಶಿಸಿ "ನಾವು ಯಾವುದೇ ಪರಮಾಣು ಮತ್ತು ಮಿಸೈಲ್ ಪರೀಕ್ಷೆಯ ಬಗ್ಗೆ ಚಿಂತಿತವಾಗಿದ್ದೇವೆ. ಅದರಿಂದ ಪರಮಾಣು ಸುರಕ್ಷಿತತೆಗೆ ಅಪಾಯ ಎದರುರಾಗಲಿದೆ ಅಥವಾ ಪರಮಾಣುವಿಗೆ ಸಂಬಂಧಿಸಿದ ಬಳಕೆಗಿರುವ ಸೀಮೆ ಕಡಿಮೆಯಾಗಲಿದೆ" ಎಂದು ಹೇಳಿದ್ದಾರೆ.

ಭಾರತ ಇತ್ತೀಚೆಗೆ ಬಾಲಿಸ್ಟಿಕ್ ಮಿಸೈಲ್ ಪರೀಕ್ಷೆ ನಡೆಸಿರುವುದರ ಕುರಿತು ಪ್ರಶ್ನಿಸಿದಾಗ ಟೋನರ್ ಪ್ರತಿಕ್ರಿಯಿಸುತ್ತಾ" ಆದ್ದರಿಂದ ನಾವು ಪರಮಾಣು ಅಸ್ತ್ರಗಳನ್ನು ಹೊಂದಿರುವ ಎಲ್ಲ ದೇಶಗಳಿಗೆ ಅವರ ಮಿಸೈಲ್ ಮತ್ತು ಪರಮಾಣು ಸಾಮರ್ಥ್ಯದ ಬಗ್ಗೆ ಸಂಯಮದಿಂದಿರಲು ವಿನಂತಿಸುತ್ತೇವೆ" ಎಂದರಲ್ಲದೆ ಹೊಸದಿಲ್ಲಿ ವಿದೇಶ ಸಚಿವಾಲಯಕ್ಕೆ ತಮ್ಮ ಆತಂಕನ್ನು ತಿಳಿಸಿದ್ದೇವೆ ಎಂದೂ ತಿಳಿಸಿದ್ದಾರೆ.

 ಟೋನರ್ ಮತ್ತೊಮ್ಮೆಗುರುವಾರದಂದು ಈ ವಿಚಾರವನ್ನು ಪ್ರಸ್ತಾಪಿಸಿದ್ದು"ನಾವು ಆಂತಂಕಿತರಾಗಿದ್ದೇವೆ" ಎಂದು ಪುನರುಚ್ಚರಿಸಿದ್ದಾರೆ. ಅಮೆರಿಕ ಭಾರತದ ಮಿಸೈಲ್ ಪರೀಕ್ಷೆಯ ಕುರಿತು ಆತಂಕಗೊಂಡಿದೆಯೇ ಎಂದು ಪ್ರಶ್ನಿಸಿದಾಗ ವಲಯದ ಸುರಕ್ಷೆ ವಿಷಯದಲ್ಲಿ ನಾವು ಇಂತಹ ಕ್ರಮಗಳಿಂದ ಚಿಂತಿತರಾಗಿದ್ದೇವೆ ಎಂದು ಉದ್ಗರಿಸಿದ್ದಾರೆ. ವಿದೇಶ ಸಚಿವಾಲಯದ ಹಿರಿಯ ಅಧಿಕಾರಿಯು ಇದಕ್ಕೆ ತದ್ವಿರುದ್ಧ ಪ್ರತಿಕ್ರಿಯೆಯನ್ನು ನೀಡಿದ್ದರು. ಟೋನರ್ ಅಮೆರಿಕಾ ಭಾರತದ ಬಾಲೆಸ್ಟಿಕ್ ಮಿಸೈಲ್ ಕಾರ್ಯಕ್ರಮದ ತನ್ನ ವಿಷಾದವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದಾಗ ಹಿರಿಯ ಅಧಿಕಾರಿ ಹೌದೆಂದು ಒಪ್ಪಿಕೊಂಡಿದ್ದಾರೆಂದು ವರದಿಯಾಗಿದೆ.

ಒಂದು ದಿವಸ ಮೊದಲು ಟೋನರ್ ಈ ವಿಷಯದಲ್ಲಿ ಅಮೆರಿಕದ ದ್ವಿಪಕ್ಷೀಯ ಮಾತುಕತೆಯ ವಿಚಾರವನ್ನು ತಳ್ಳಿಹಾಕಿದ್ದರು."ನಾನು ಭಾರತ ಮತ್ತು ನಮ್ಮ ದ್ವಿಪಕ್ಷೀಯ ಮಾತುಕತೆಯ ಕುರಿತು ಏನೂ ಹೇಳಲು ಬಯಸುವುದಿಲ್ಲ. ಆದರೆ ನಾವು ವಲಯದಲ್ಲಿ ಅಸ್ಥಿರ ಚಟುವಟಿಕೆಗಳನ್ನು ನಿರುತ್ತೇಜಿಸುತ್ತೇವೆ" ಎಂದು ಹೇಳಿದ್ದಾರೆ. ಭಾರತವು ಇತ್ತೀಚೆಗೆ ಪರಮಾಣು ಆಯುಧವನ್ನು ಒಯ್ಯಬಲ್ಲ ಸ್ವದೇಶಿ ನಿರ್ಮಿತ ನಾಲ್ಕು ಬಾಲೆಸ್ಟಿಕ್ ಮಿಸೈಲ್‌ಗಳ್ನು ಯಶಸ್ವಿಯಾಗಿ ಪರೀಕ್ಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News