ಚೀನಾ: ಚಲಿಸುತ್ತಲೇ ಕ್ರಿಮಿನಲ್‌ಗಳ ಮುಖ ಸ್ಕಾನ್ ಮಾಡುವ ವಾಹನ

Update: 2016-03-25 14:17 GMT

ಬೀಜಿಂಗ್, ಮಾ. 25: ಟಾಪ್ ಮೇಲೆ ಕ್ಯಾಮರಗಳನ್ನು ಹೊಂದಿರುವ ಹಾಗೂ ಮುಖವನ್ನು ಸ್ಕಾನ್ ಮಾಡುವ ಪೊಲೀಸ್ ಕಾರನ್ನು ಚೀನಾದ ವಿಶ್ವವಿದ್ಯಾಲಯವೊಂದು ಅಭಿವೃದ್ಧಿಪಡಿಸಿದೆ. ಕ್ರಿಮಿನಲ್‌ಗಳನ್ನು ಬೆನ್ನಟ್ಟಿ ಹಿಡಿಯುವಲ್ಲಿ ಈ ವಾಹನಗಳು ಪೊಲೀಸರಿಗೆ ನೆರವಾಗುತ್ತವೆ.

ಸಿಚುವಾನ್ ಪ್ರಾಂತದಲ್ಲಿರುವ ಇಲೆಕ್ಟ್ರಾನಿಕ್ ಸಯನ್ಸ್ ಆ್ಯಂಡ್ ಟೆಕ್ನಾಲಜಿ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿರುವ ಈ ಗುಪ್ತಚರ ವಾಹನವನ್ನು ಪೂರ್ವ ಝೆಜಿಯಾಂಗ್ ಪ್ರಾಂತದಲ್ಲಿ ಜೂನ್ ತಿಂಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ವಿಶ್ವವಿದ್ಯಾನಿಲಯ ಹೇಳಿದೆ.

ಕಾರಿನ ಟಾಪ್‌ನಲ್ಲಿ ಅಳವಡಿಸಲಾಗಿರುವ ಕ್ಯಾಮರಗಳು, ಗಂಟೆಗೆ 120 ಕಿ.ಮೀ. ವೇಗದಲ್ಲಿ ಹೋಗುತ್ತಿರುವ ವಾಹನಗಳಲ್ಲಿರುವ ವ್ಯಕ್ತಿಗಳ ಮುಖಗಳನ್ನು 60 ಮೀಟರ್ ತ್ರಿಜ್ಯದ ವ್ಯಾಪ್ತಿಯಲ್ಲಿ ಸೆರೆಹಿಡಿಯಬಲ್ಲದು.

ಬಳಿಕ ಈ ಚಿತ್ರಗಳನ್ನು ಪೊಲೀಸ್ ಮಾಹಿತಿಕೋಶಕ್ಕೆ ಕಳುಹಿಸಲಾಗುವುದು ಹಾಗೂ ಹೋಲಿಕೆಗಳು ಕಂಡುಬಂದರೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಲಾಗುವುದು.

ಇದರ ಇತರ ಉಪಯೋಗಗಳೆಂದರೆ, ವಾಹನಗಳ ಮಾಹಿತಿಯನ್ನು ಪಡೆದುಕೊಳ್ಳುವುದು ಹಾಗೂ ತನ್ನ ವ್ಯಾಪ್ತಿಯಲ್ಲಿ ಬರುವ ಮೊಬೈಲ್ ಫೋನ್‌ಗಳನ್ನು ಗುರುತಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News