×
Ad

ಮುಸ್ಲಿಮರಿಂದ 'ಲಾಂಗ್‌ಲಿವ್ ಬೆಲ್ಜಿಯಂ' ಘೋಷಣೆ

Update: 2016-03-26 12:11 IST

ಬ್ರಸಲ್ಸ್, ಮಾ.26: ಬ್ರಸಲ್ಸ್‌ನ ಗ್ರಾಂಡ್ ಮಸೀದಿಯಲ್ಲಿ ಶುಕ್ರವಾರದ ನಮಾಝ್ ಗಾಗಿ ಸೇರಿದ್ದ ಮುಸ್ಲಿಮರು ಮಸೀದಿಯ ಹೊರಗಡೆ ಅಲ್ಲಾಹು ಅಕ್ಬರ್ ಜೊತೆಗೆ ಲಾಂಗ್‌ಲಿವ್ ಬೆಲ್ಜಿಯಂ ಎಂಬ ಘೋಷಣೆಯನ್ನು ಕೂಗಿದರು.

ಪಟ್ಟಣದಲ್ಲಿ ಭಯೋತ್ಪಾದಕ ದಾಳಿಯ ನಂತರ ತೀವ್ರವಾದದ ವಿರುದ್ಧ ಹೋರಾಡುವ ನಿರ್ಧಾರಕ್ಕೆ ಮುಸ್ಲಿಮರು ಬಂದಿದ್ದಾರೆ.

ಇಮಾಮ್ ಮುಹಮ್ಮದ್ ಗಲಾಯೇ ಮೊದಲು "ಕಾರ್ಯಾಚರಣೆ ನಡೆಸುವ ಸಮಯ ಸಂಜಾತವಾಗಿದೆ. ಇಂದು ನಾವು ಬಯೋತ್ಪಾದನೆಯ ವಿರುದ್ಧ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ" ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಬೆಲ್ಜಿಯಂ ಮತ್ತು ಯುರೋಪಿಯನ್ ಯೂನಿಯನ್‌ನ ಧ್ವಜ ಪಟ್ಟಣದ ಮುಖ್ಯ ಮಸೀದಿಯ ಪ್ರವೇಶದ್ವಾರದಲ್ಲಿ ಹಾರಾಡಿಸಲಾಗಿತ್ತು. ಈ ಮಸೀದಿ ಯುರೋಪಿಯನ್ ಯೂನಿಯನ್ ಮುಖ್ಯ ಕಚೇರಿ ಮತ್ತು ಹಲವು ದೂತವಾಸಗಳ ಸಮೀಪದಲ್ಲಿದೆ.

ಇಮಾಮರು "ಅಪರಾಧಿಗಳು ಅಕ್ಷಮ್ಯ ಅಪರಾಧ ಮಾಡಿದ್ದಾರೆ ಮತ್ತು ನಾವು ಅವರಿಗೆ ನೀವೇನು ಮಾಡಿದ್ದೀರಿ ಅದು ಇಸ್ಲಾಮ್‌ನ ವಿರುದ್ಧವಾಗಿದೆ ಎಂದು ತಿಳಿಸಲು ಹೊರಟಿದ್ದೇವೆ. ನಿಮ್ಮ ಕೃತ್ಯಕ್ಕೂ ಇಸ್ಲಾಮ್‌ಗೂ ಯಾವುದೇ ಸಂಬಂಧವಿಲ್ಲ" ಎಂದು ಹೇಳಿದ್ದಾರೆ. ಮತ್ತು ಶುಕ್ರವಾರದ ಪ್ರವಚನ ಇಂದಿನ ವಿದ್ಯಮಾನಗಳಿಗೆ ಸಂಬಂಧಿಸಿರಲಿದೆ ಎಂದು ಹೇಳಿದ್ದರು.

ಬೆಲ್ಜಿಯಂ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಸೆನೆಗಲ್ ಸಂಜಾತ ಇಮಾಮ್‌ರು ಜನರು ಗಾಯಾಳುಗಳಿಗೆ ರಕ್ತದಾನ ನೀಡಬೇಕೆಂದು ಕರೆ ನೀಡಿದ್ದಾರೆ. ಈ ಭಯೋತ್ಪಾದಕ ದಾಳಿಯಲ್ಲಿ ಮೂವತ್ತೊಂದು ಮಂದಿ ಮೃತರಾಗಿ ಸುಮಾರು ಮುನ್ನೂರು ಮಂದಿ ಗಾಯಗೊಂಡಿದ್ದರು. ನಮಾಝ್ ನಂತರ ಮುಸ್ಲಿಮರು ಮಸೀದಿ ಬಳಿಯ ಪಾರ್ಕ್‌ನ ಹೊರಗೆ ಒಟ್ಟುಗೂಡಿ ಲಾಂಗ್‌ಲಿವ್ ಬೆಲ್ಜಿಯಂ ಘೋಷಣೆ ಕೂಗಿದರು. ಆನಂತರ ಇಮಾಮರ ಮುಂದಾಳುತ್ವದಲ್ಲಿ ಮಾಲಬಿಕ್ ಮೆಟ್ರೊ ಸ್ಟೇಶನ್ ಹೋಗಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News