ರಾಹುಲ್ ಗಾಂಧಿ, ಶಶಿ ತರೂರು ವಿರುದ್ಧ ದೇಶದ್ರೋಹಿ ಸಂಚು: ನ್ಯಾಯಾಲಯಕ್ಕೆ ದೂರು
ವಾರಣಾಸಿ, ಮಾ.26: ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ರನ್ನು ಭಗತ್‌ಸಿಂಗ್ ಮತ್ತು ಭಗವಾನ್ ಕೃಷ್ಣರಿಗೆ ಹೋಲಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ವಿವಾದಾಸ್ಪದ ಸಂಸತ್ ಸದಸ್ಯ ಶಶಿ ತರೂರ್ ವಿರುದ್ಧ ಶುಕ್ರವಾರ ಇಲ್ಲಿನ ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ನ್ಯಾಯಾಲಯವು ಅರ್ಜಿಯನ್ನು ಸ್ವೀಕರಿಸಿದ್ದು ಅರ್ಜಿದಾರರ ಕುರಿತು ಆಲಿಕೆಯನ್ನು ಎಪ್ರಿಲ್ 24ಕ್ಕಿರಿಸಿದೆ ಎಂದು ವರದಿಯಾಗಿದೆ. ವರದಿಯಾಗಿರುವ ಪ್ರಕಾರ ಅರ್ಜಿಯಲ್ಲಿ ಕಾಂಗ್ರೆಸ್ ಶಶಿ ತರೂರು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ರನ್ನು ಶಹೀದ್ ಭಗತ್ ಸಿಂಗ್ ಗೆ ಹೋಲಿಸಿದ್ದು ಇದು ದೇಶದಲ್ಲಿ ಅರಾಜಕತೆಯನ್ನು ಹೆಚ್ಚಿಸುವಂತಹದಾಗಿದೆ ಎಂದು ದೂರಲಾಗಿದೆ ಎಂದು ವರದಿಗಳು ತಿಳಿಸಿವೆ.
ಶಹೀದ್ ಭಗತ್ ಸಿಂಗ್‌ರ ಜೊತೆಗೆ ಭಗವಾನ್ ಕೃಷ್ಣನಿಗೂ ಕನ್ಹಯ್ಯಾ ಕುಮಾರ್‌ರನ್ನು ಹೋಲಿಸಲಾಗಿದೆ ಇದು ದೇಶದ ಅಖಂಡತೆ, ಏಕತೆ ಮತ್ತು ಪ್ರಭುತ್ವಕ್ಕೆ ವಿರುದ್ಧವಾಗಿದೆಯೆಂದೂ ಅರ್ಜಿಯಲ್ಲಿ ದೂರಲಾಗಿದೆ. ಇನ್ನೊಂದೆಡೆ ರಾಹುಲ್ ಗಾಂಧಿ ದೇಶದ್ರೋಹಿ ಕಾರ್ಯಗಳನ್ನು ನಿರಂತರ ಬೆಂಬಲಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಸೂಚಿಸಲಾಗಿದ್ದು ಇಬ್ಬರು ರಾಜಕಾರಣಿಗಳ ವಿರುದ್ಧ ಐಪಿಸಿ ಕಲಂ 124(ಎ) ದೇಶದ್ರೋಹ,ಮಾನಹಾನಿ,ಧಾರ್ಮಿಕ ಭಾವನೆಗೆ ಹಾನಿಯೊಡ್ಡಿದ ಸಂಚು ರಚಿಸಿದ್ದಾರೆಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.