×
Ad

ಹೂ ಇಸ್ ಭಾರತ್ ಮಾತಾ....???

Update: 2016-03-26 13:12 IST

ಇಂಗ್ಲೆಂಡ್ ನಿಂದ ಬಂದಿದ್ದ ಇಬ್ಬರು ಬೆಂಗಳೂರಿನ ಕಾಫೀ ಡೇ ಒಂದರಲ್ಲಿ ಕುಳಿತು ಲ್ಯಾಪ್ ಟಾಪ್ ವೀಕ್ಷಿಸುತ್ತಿದ್ದರು. ಅವರ ಮುಖದಲ್ಲಿ ತಕ್ಷಣ ಯಾವುದೋ ಕುತೂಹಲ ಅರಳಿತು ಮತ್ತು ನನ್ನನ್ನು ಕರೆದು ಕೇಳಿದರು ಹೂ ಇಸ್ ಭಾರತ ಮಾತಾ ? ಎಂದು. ಅವರ ಮಾತಿಗೆ ಉತ್ತರಿಸಲು ಆಗಲಿಲ್ಲ ಕಾರಣ ನಾನು ಭಾರತ ಮಾತೆಯ ವಿರೋಧಿಯಲ್ಲ ಹೊರತಾಗಿ ನನಗೆ ಇಂಗ್ಲಿಷ್ ಸರಿಯಾಗಿ ಬರುತ್ತಿರಲಿಲ್ಲ. ಆದರೆ ಅವರ ಎದುರಿಗೆ ಸಣ್ಣವನಾಗುವುದು ನನಗೆ ಇಷ್ಟವಿರಲಿಲ್ಲ. ನಾನು ಅವರಿಗೆ ಉತ್ತರಿಸಿದೆ ಚೆಕ್ ಇನ್ ಗೂಗ್ಲ್ ಎಂದು ತಿಳಿಸಿದೆ. ಓಹ್ ಓಕೆ ಎಂದರು.

ಸ್ವಲ್ಪ ಕಳೆದು ಅವರಿಗೆ ಏನೋ ಸಮಸ್ಯೆ ಕಾಡಿತು. ಮತ್ತೆ ಅವರು ನನ್ನನ್ನು ಕರೆದರು. ನಾನು ಅವರ ಬಳಿ ಹೋಗಲು ಸ್ವಲ್ಪ ಹಿಂಜರಿದೆ. ನನ್ನ ಭಾಗ್ಯ ಎಂಬಂತೆ ನಾನು ಕಾಯುತ್ತಿದ್ದ ನನ್ನ ಗೆಳೆಯ ಅಲ್ಲಿಗೆ ಬಂದ. ಅವನಿಗೆ ಇಂಗ್ಲಿಷ್ ಮಾತನಾಡಲು ಬರುತ್ತದೆ ಎಂದು ನನಗೆ ತಿಳಿದಿತ್ತು. ನಾನು ಅವನಲ್ಲಿ ಹೇಳಿದೆ ಆ ಇಂಗ್ಲಿಷ್ ನವರಿಗೆ ಏನೋ ಸಮಸ್ಯೆ ಇದೆ ಮಾತಾಡು ಎಂದು. ಗೆಳೆಯ ಅವರ ಬಳಿಗೆ ಹೋದ ಅವರ ಮಧ್ಯೆ ನಡೆದ ಸಂಭಾಷಣೆ ಹೀಗಿತ್ತು.

ವಿದೇಶಿ-  ಅವನು ಹೇಳಿದ ಭಾರತ್ ಮಾತಾ ಗೂಗಲಲ್ಲಿ ಸಿಗುತ್ತೇ ಎಂದು ನಾವು ಸರ್ಚ್ ಮಾಡುವಾಗ ಇಷ್ಟು ಭಾರತ್ ಮಾತಾ ಬಂತು. ಇದರಲ್ಲಿ ತುಂಬಾ  ಚಿತ್ರಗಳಿವೆ ಆದರೆ ಅದು ಯಾವುದೂ ಒಂದಕ್ಕೊಂದು ಸರಿ ಹೊಂದುವುದಿಲ್ಲ. ಇದರಲ್ಲಿ ಯಾರು ನಿಜವಾದ ಭಾರತ್ ಮಾತಾ ?


ಗೆಳೆಯ-  ಗೆಳೆಯ ಗೂಗಲ್ ನಲ್ಲಿರುವ ಪೋಟೊ ವನ್ನು ದಿಟ್ಟಿಸಿ ನೋಡಿದ ಹಾಗೇ ಉತ್ತರಿಸಿದ. ಅದರಲ್ಲಿ ಕೇಸರಿ ಭಾವುಟ ಹಿಡಿದು ಇರುವುದು ಬಿಜೆಪಿಯವರ  ಭಾರತ ಮಾತಾ. ಅದರಲ್ಲಿ ರಾಷ್ಟ್ರ ಧ್ವಜ ಹಿಡಿದಿರುವುದು ಕಾಂಗ್ರೆಸ್ ನವರ ಭಾರತ್ ಮಾತಾ ಹಾಗೇ ಅದರಲ್ಲಿ ಸಿಂಹದ ಮೇಲೆ ಕುಳಿತಿರುವುದು ಸಂಘಪರಿವಾರದ ಭಾರತ್ ಮಾತಾ.


ವಿದೇಶಿ-  ಹೋ ಐಸೀ ಒಟ್ಟು ಎಷ್ಟು ಭಾರತ್ ಮಾತಾ ಇದ್ದಾರೆ ?

ಗೆಳೆಯ-  ಭಾರತ್ ಮಾತಾ ಎಷ್ಟು ಬೇಕಾದರೂ ಮಾಡಬಹುದು. ಇದು ಪ್ರಜಾಪ್ರಭುತ್ವ ದೇಶ ಹಾಗಾಗಿ ಇಲ್ಲಿ ಜನರ ಸ್ವಾತಂತ್ರ್ಯವನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ.


ವಿದೇಶಿ-  ಹೂ ಇಸ್ ಓವೈಸಿ. ಈಗ ಅವನದೇ ಚರ್ಚೆ ಆಗ್ತಾ ಇದೆ ಅಲ್ವಾ

ಗೆಳೆಯ- ಅವರಿಗೆ ಭಾರತ ಮಾತೆಯನ್ನು ಸಂವಿಧಾನದಲ್ಲಿ ಕೊಡಬೇಕಂತೆ. ಸಂವಿದಾನದಲ್ಲಿ ಭಾರತ ಮಾತೆ ಇಲ್ಲ. ಹಾಗೇ ಚರ್ಚೆ ನಡೆಯುತ್ತಿದೆ.

ವಿದೇಶಿ-  ಒಂದು ಪಿಕ್ಸ್ ಭಾರತ ಮಾತಾ ಮಾಡಲು ಆಗುದಿಲ್ಲವೇ ?


ಗೆಳೆಯ- ಈ ದೇಶದಲ್ಲಿ ಪಿಕ್ಸ್ ಅಂಥ ಯಾವುದೂ ಮಾಡಲು ಆಗುವುದಿಲ್ಲ. ಇಲ್ಲಿ ವಿರೋಧ ಪಕ್ಷಗಳಿವೆ. ಇಲ್ಲಿ ಸ್ಲೋಗೋನ್ ಹಾಗೂ ವಿವಾದಗಳಿಗೆ ಮಾತ್ರವೇ ಪ್ರಾಶಸ್ತ್ಯ.

ವಿದೇಶಿ-  ವಾಟ್ ಇಸ್ ದ ಅಚ್ಚೇ ದಿನ್ ?


ಗೆಳೆಯ-  ಅಚ್ಛೆ ಅಂದರೆ ಒಳ್ಳೆಯದು. ದಿನ್ ಅಂದರೆ ದಿನ. ಆದರೆ ಯಾರಿಗೇ ಎಂದು ಸ್ಪಷ್ಟವಾಗಿ ಹೇಳಲಿಲ್ಲ. ಇನ್ನು ಎಲ್ಲರಿಗೂ ಎಂದು ಹೇಳಿದರೆ ಅದನ್ನು ಕಾಂಗ್ರೆಸ್ ಮತ್ತು ಮಾರ್ಕಿಸ್ಟ್ ಹಾಗೇ ಬುದ್ದಿಜೀವಿಗಳು ಒಪ್ಪುವುದಿಲ್ಲ. ಅವರನ್ನು ಬಿಟ್ಟು ಅಚ್ಛೆ ದಿನ್ ಯಾರಿಗೆ ಬೇಕಾದರು ಹೇಳಬಹುದು.

ವಿದೇಶಿ- ಮೋದಿಜಿ ಇಸ್ ವೆರಿ ಪವರ್ಫುಲ್ ನವ್ ರೈಟ್...?

ಗೆಳೆಯ- ಪ್ರಧಾನ ಮಂತ್ರಿ ಅಂದ ಮೇಲೆ ಎಲ್ಲಾ ದೇಶದಲ್ಲೂ ಪವರ್ ಫುಲ್ ಇರ್ತಾರೆ. ಈ ಮೊದಲು ಮನಮೋಹನ್ ಸಿಂಗ್ ಸ್ವಲ್ಪ ಮಾತಾಡ್ತಾ ಇದ್ರು ಹೆಚ್ಚು ಕೆಲಸ ಮಾಡ್ತಾ ಇದ್ರು. ಈವಾಗ ಇವರು ಹೆಚ್ಚು ಮಾತಾಡ್ತಾರೆ ಮೀಡಿಯಾಗಳಲ್ಲಿ ಕೆಲಸ ಆಗ್ತಾ ಇದೆ.

ವಿದೇಶಿ- ಭಾರತ್ ಮಾತಾ ಜೈ ಅಂತ ನಾವು ಹೇಳುವುದಾದರೆ ?


ಗೆಳೆಯ- ನೀವು ಮೀಡಿಯಾದ ಎದುರು ಹೇಳಿದರೆ ಬಹಳ ಉತ್ತಮ ಆಗ ಅವರು  ಜನರಿಗೆ ವಿದೇಶಿಯರು ಕೂಡಾ ಹೇಳ್ತಾರೆ ನಮಗೆ ಹೇಳಲು ಯಾಕೆ ಸಾಧ್ಯವಿಲ್ಲ ಅಂತ ಸ್ಪೆಶಲ್ ಸ್ಟೋರಿ ಮಾಡ್ತಾರೆ.

ವಿದೇಶಿ-  ನಾವು ಯಾವ ಭಾರತ ಮಾತೆಗೆ ಜೈ ಹೇಳಬೇಕು ?

ಗೆಳೆಯ-  ನೀವು ಯಾವ ಧರ್ಮದವರು?

ವಿದೇಶಿ-  ಕ್ರಿಶ್ಚಿಯನ್
 

ಗೆಳೆಯ-  ಇಲ್ಲೇ ಒಂದು ಚರ್ಚ್ ಸ್ಟ್ರೀಟ್ ಅಂಥ ಇದೆ. ಅಲ್ಲಿ ಒಂದು ಚರ್ಚ್ ಇದೆ. ಅಲ್ಲಿನ ಫಾದರ್ ಗೆ ಹೋಗಿ ಕೇಳಿ ಅವರು ಉತ್ತರಿಸುತ್ತಾರೆ.

ವಿದೇಶಿ-   ಅದು ಯಾಕೆ?
ಗೆಳೆಯ- ಇಲ್ಲಿ ಸಂವಿಧಾನದಲ್ಲಿ ಇಲ್ಲದ್ದನ್ನು ಮೌಲ್ವಿಗಳು, ಸ್ವಾಮೀಜಿಗಳು ಮತ್ತು ಬಿಷಪರು ಹೇಳ್ಬೇಕು..........

Writer - ಹನೀಫ್ ಪುತ್ತೂರು

contributor

Editor - ಹನೀಫ್ ಪುತ್ತೂರು

contributor

Similar News