×
Ad

ನದಿಯಲ್ಲಿ ಕೊಚ್ಚಿ ಹೋದ ಮಗ, ಸುದ್ದಿ ತಿಳಿದ ತಾಯಿಗೆ ಹೃದಯಾಘಾತ!: ಊರನ್ನೇ ಶೋಕಕ್ಕೆ ದೂಡಿದ ಅವರಿಬ್ಬರ ಸಾವು!

Update: 2016-03-26 15:35 IST

ಕೊಚ್ಚಿ, ಮಾಚ್.26: ಇಬ್ಬರ ಅಕಾಲಿಕ ಮರಣ ಇಡೀ ಊರಿಗೆ ದು:ಖವನ್ನು ತಂದು ಕೊಟ್ಟ ಘಟನೆ ವರದಿಯಾಗಿದೆ. ಆಮೂಲಕ ಕುಟುಂಬವೊಂದರ ಜೀವನಾಧಾರವೇ ಮುರಿದು ಬಿದ್ದಿದೆ. ಪುತ್ರ ಹೊಳೆಯಲ್ಲಿ ಕೊಚ್ಚಿಹೋಗಿ ಮೃತನಾದರೆ ಈ ಸುದ್ದಿ ತಿಳಿದ ಅಮ್ಮ ಹೃದಯಘಾತದಿಂದ ನಿಧನಾರಾಗಿದ್ದಾರೆ.
ಎಲೂರು ಹೊಸ ರಸ್ತೆ ಕೋಟಕುನ್ನಿಲ್ ಕನ್ನಿಕ್ಕಚ್ಚೇರಿ ಪರಂಬಿಲ್ ಲಾಲು ಎಂಬವರ ಮಗ ಸಚಿನ್(19) ಲಾಲುರ ಪತ್ನಿ ಸಜ(48) ಮೃತರಾದ ದುರ್ದೈವಿಗಳು ಎಂದು ವರದಿಯಾಗಿದೆ. ದು:ಖ ಶುಕ್ರವಾರದಂದೇ ಈ ಕುಟುಂಬಕ್ಕೆ ದುಃಖ ದಿನಗಳಾಗಿವೆ.ಮಗ ಸಚಿನ್ ನೀರುಪಾಲಾಗಿ ಮೃತನಾಗಿದ್ದಾನೆಂಬ ಸುದ್ದಿ ಕೇಳಿಸಿಕೊಂಡು ಪ್ರಜ್ಞೆ ಕಳಕೊಂಡ ಸಜಾರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾದರೂ ಜೀವವುಳಿಯಲಿಲ್ಲ.

ಸಂಜೆ ಸಮಯ ಕಳೆಯಲಿಕ್ಕಾಗಿ ಸಚಿನ್ ಗೆಳೆಯರೊಂದಿಗೆ ಹೊಳೆಬದಿಗೆ ಹೋಗಿದ್ದರು. ಆ ಸಂದರ್ಭದಲ್ಲಿ ಹೊಳೆಯಲ್ಲಿ ಈಜಾಡುವ ಮನಸ್ಸಾಗಿತ್ತು. ಅವರೆಲ್ಲ ಹೊಳೆಗೆ ಸ್ನಾನ ಮಾಡಲು ಇಳಿದರು. ಸಚಿನ್ ಈಜಾಡುತ್ತಿದ್ದಾಗ ದಿಢೀರನ್ ಹೊಳೆಯ ಸುಳಿಯಲ್ಲಿ ಸಿಲುಕಿ ಕೊಚ್ಚಿಹೋಗಿದ್ದನೆನ್ನಲಾಗಿದೆ. ಕುಟ್ಟಿಕ್ಕರ ಸೇತವೆ ಸಮೀಪದಲ್ಲಿ ಈ ಘಟನೆ ನಡೆಯಿತು. ಎಲೂರಿನ ಅಣೆಕಟ್ಟಿನಿಂದ ನೀರು ಬಿಟ್ಟ ಕಾರಣದಿಂದ ದಿಢೀರನೆ ನೀರು ಹೆಚ್ಚಲು ಕಾರಣವಾಗಿತ್ತು. ಸುಳಿಯಲ್ಲಿ ಸಿಲುಕಿದ ಸಚಿನ್‌ನನ್ನು ರಕ್ಷಿಸಲು ಗೆಳೆಯರು ಪ್ರಯತ್ನಿಸಿದರು ಸಾಧ್ಯವಾಗಿರಲಿಲ್ಲ. ಕೂಡಲೇ ಎಲೂರು ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು. ಪೊಲೀಸರು ಮತ್ತು ಏರ್‌ಪೋರ್ಸ್ ಬಂದರೂ ಸಂಜೆ ಆರುಗಂಟೆವರೆಗೂ ಹುಡುಕಾಟ ನಡೆಸಿದರೂ ಸಚಿನ್ ಪತ್ತೆಯಾಗಿರಲಿಲ್ಲ.

 ಈ ನಡುವೆ ಸಚಿನ್‌ನ ಮೃತದೇಹ ಹರಿದು ಬರುತ್ತಿರುವುದು ಹೊಳೆಯಲ್ಲಿ ಗಾಳ ಹಾಕುತ್ತಿರುವವರಿಗೆ ಕಂಡು ಬಂದಿತ್ತು. ಇವರು ಬೊಬ್ಬೆ ಹಾಕಿದಾಗ ಕೆಲವರು ಈಜಾಡಿ ಮೃತದೇಹವವನ್ನು ದಡಕ್ಕೆ ತಂದಿದ್ದರು. ಮೃತದೇಹವನ್ನು ಅಲುವಾ ಜಿಲ್ಲಾಸ್ಪತ್ರೆಯ ಮೋರ್ಚರಿಯಲ್ಲಿರಿಸಿ ನಂತರ ಬಂಧುಗಳಿಗೆ ಬಿಟ್ಟು ಕೊಡಲಾಗಿದೆ.
ಮಗ ಮೃತನಾದ ಸುದ್ದಿ ತಿಳಿದ ಅಮ್ಮ ಪ್ರಜ್ಞೆ ಕಳಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಬದುಕಿ ಉಳಿಯಲಿಲ್ಲ. ಇಬ್ಬರ ಅಂತ್ಯಸಂಸ್ಕಾರವನ್ನು ರಾತ್ರೆಯೇ ನಡೆಸಲಾಯಿತು. ಅಲುವ ಖಾಸಗಿ ಬ್ಯಾಂಕೊಂದರಲ್ಲಿ ನೌಕರನಾಗಿದ್ದ ಸಚಿನ್ ಕುಟುಂಬಕ್ಕೆ ಏಕ ಆಧಾರವಾಗಿದ್ದನೆನ್ನಲಾಗಿದೆ. ಸಚಿನ್ ಊರವರಿಗೂ ಗೆಳೆಯರಿಗೂ ಪ್ರಿಯ ವ್ಯಕ್ತಿಯಾಗಿದ್ದುದ್ದು ಸಚಿನ್ ಅಗಲಿಕೆ ಹೆಚ್ಚಿನ ದುಃಖಕ್ಕೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News