×
Ad

ವಿಶ್ವಕಪ್: ಇಂಗ್ಲೆಂಡ್ ಸೆಮಿಫೈನಲ್‌ಗೆ

Update: 2016-03-26 23:04 IST

ಮ್ಯಾಥ್ಯೂಸ್ ಹೋರಾಟ ವ್ಯರ್ಥ, ಶ್ರೀಲಂಕಾ ಔಟ್

 ಹೊಸದಿಲ್ಲಿ, ಮಾ.26: ರೋಚಕವಾಗಿ ಸಾಗಿದ ಟ್ವೆಂಟಿ-20 ವಿಶ್ವಕಪ್‌ನ ಗ್ರೂಪ್-1ರ ನಿರ್ಣಾಯಕ ಸೂಪರ್-10 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾವನ್ನು 10 ರನ್‌ನಿಂದ ಮಣಿಸಿ ಸೆಮಿಫೈನಲ್‌ಗೆ ತಲುಪಿದೆ.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 172 ರನ್ ಗುರಿ ಪಡೆದಿದ್ದ ಶ್ರೀಲಂಕಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.

ಲಂಕೆಯ ಪರ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್(ಔಟಾಗದೆ 73, 54ಎಸೆತ, 3 ಬೌಂಡರಿ, 6 ಸಿಕ್ಸರ್) ಅವರು ಕಪುಗಡೆರಾ(30) ಹಾಗೂ ತಿಸ್ಸಾರ(20)ರೊಂದಿಗೆ 5 ಹಾಗೂ 6ನೆ ವಿಕೆಟ್‌ಗೆ ಕ್ರಮವಾಗಿ 80 ಹಾಗೂ 42 ರನ್ ಸೇರಿಸಿ ಗೆಲುವಿಗಾಗಿ ಶ್ರಮಿಸಿದರು.

ಆದರೆ, ಶಿಸ್ತುಬದ್ಧ ಬೌಲಿಂಗ್ ನಡೆದ ಜೋರ್ಡನ್(4-28) ಹಾಗೂ ವಿಲ್ಲಿ(2-26) ಇಂಗ್ಲೆಂಡ್‌ಗೆ ರೋಚಕ ಗೆಲುವು ತಂದುಕೊಟ್ಟರು.

ಇಂಗ್ಲೆಂಡ್ 171/4: ಇದಕ್ಕೆ ಮೊದಲು ವಿಕೆಟ್‌ಕೀಪರ್ ಜೋಸ್ ಬಟ್ಲರ್‌ರ ಆಕರ್ಷಕ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧದ ಸೂಪರ್-10 ಪಂದ್ಯದಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News