×
Ad

ಕುಲಭೂಷಣ್‌ರನ್ನು ಇನ್ನೊಬ್ಬ ಸರಬ್ಜಿತ್ ಮಾಡಬೇಡಿ: ಸರಬ್ಜಿತ್‌ರ ಸಹೋದರಿ ದಲ್‌ಬೀರ್ ಕೌರ್ ಆಗ್ರಹ

Update: 2016-03-27 11:49 IST

ಹೊಸದಿಲ್ಲಿ, ಮಾರ್ಚ್.27: ಪಾಕಿಸ್ತಾನದಲ್ಲಿ ಬಂಧಿತರಾದ ರಾ ಬೇಹುಗಾರರೆನ್ನಲಾದ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಮೋದಿ ಸರಕಾರ ಉಚಿತಕ್ರಮ ಕೈಗೊಳ್ಳಬೇಕೆಂದು ಸರಬಜಿತ್‌ ಸಿಂಗ್‌ರ ಸಹೋದರಿ ದಲ್‌ಬೀರ್ ಕೌರ್ ಆಗ್ರಹಿಸಿದ್ದಾರೆ. ಈ ಹಿಂದೆ ಸರಬಜಿತ್‌ರನ್ನು ಕೂಡ ಭಾರತೀಯ ಬೇಹುಗಾರನೆಂದೇ ಆರೋಪಿಸಿ ಪಾಕಿಸ್ತಾನ ಸರಕಾರ ಬಂಧಿಸಿತ್ತು ಮತ್ತು ಅವರು ದುಷ್ಕರ್ಮಿಗಳಿಂದ ಹಲ್ಲೆಗೊಳಗಾದುದರಿಂದ ಮರಣ ಸಂಭವಿಸಿತ್ತು ಎಂದು ಸರಬಜೀತ್ ಸಹೋದರಿ ನೆನಪಿಸಿದ್ದಾರೆ. ವಿದೇಶ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಭೇಟಿಯಾಗುವ ಮೊದಲು ಮಾತಾಡುತ್ತಾ "ಬಹುಶಃ ಇನ್ನೊಬ್ಬ ಸರಬಜೀತ್ ಆಗುವರೆನ್ನುವುದು ಕೆಟ್ಟ ಭಾವನೆಯೇ ಇರಬಹುದು. ಇದನ್ನು ನಾವು ಪುನರುಚ್ಚರಿಸಬಾರದು. ಸರಕಾರ ಕುಲಭೂಷಣ್ ರಾ ಏಜೆಂಟ್ ಎಂಬುದನ್ನು ನಿರಾಕರಿಸಿದೆ. ಅವರ ಕುಟುಂಬಿಕರೂ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಇದಕ್ಕಿಂತ ಬೇರೇನು ಬೇಕು? ಜನರು ಈ ಮಾತಿನೊಂದಿಗೆ ಮುಂದೆ ಹೋಗಬೇಕು. ಹಾಗೂ ಕುಲಭೂಷಣ್‌ರನ್ನು ಇನ್ನೊಬ್ಬ ಸರಬಜೀತ್ ಆಗಗೊಡಬಾರದು ಎಂಬುದನ್ನು ದೃಢಗೊಳಿಸಬೇಕು. ಪಾಕ್ ಅಧ್ಯಕ್ಷ ಅಸಿಫ್ ಅಲಿಜರ್ದಾರಿ 2012ರಲ್ಲಿ ಅಜ್ಮೀರ್‌ಗೆ ಭೇಟಿನೀಡಿದ್ದಾಗ ಖಲೀಲ್ ಚಿಸ್ತಿಯ ಬಿಡುಗಡೆಗೊಂಡಂತೆ" ಎಂದು ದಲ್‌ಬೀರ್ ಕೌರ್ ಹೇಳಿದ್ದಾರೆ.

ಪ್ರಧಾನಿ ಮೋದಿ ಪಾಕಿಸ್ತಾನದೊಂದಿಗೆ ದೋಸ್ತಿಗೆ ಮೊದಲು ಭಾರತದ ಪ್ರತಿಯೊಬ್ಬ ನಾಗರಿಕರ ನೆನಪು ಇಟ್ಟುಕೊಳ್ಳುವುದು ಉತ್ತಮವೇ ಆಗಿದೆ. ಆದರೆ ಹೀಗೆ ತಡ ಆಗುವ ಮೊದಲು ಏನಾದರು ಮಾಡಬೇಕು. ಯಾಕೆಂದರೆ ಪಾಕಿಸ್ತಾನದೊಂದಿಗೆ ವಿಶ್ವಾಸ ವಿರಿಸುವುದೆಂದರೆ ತಾವೆ ಸ್ವಯಂ ವಂಚನೆಗೊಳಗಾದಂತೆ ಎಂದಿರುವ ದಲ್‌ಬೀರ್ ಕೌರ್ ಪಾಕಿಸ್ತಾನದ ಜೈಲಲ್ಲಿರುವ 87 ನಾಗರಿಕರು ಮತ್ತು ಭಾರತದ ಜೈಲಲ್ಲಿರುವ 44 ಪಾಕಿಸ್ತಾನಿ ನಾಗರಿಕರ ಪಟ್ಟಿಯನ್ನು ಸುಷ್ಮಾ ಸ್ವರಾಜ್‌ಗೆ ನೀಡುವುದಾಗಿ ತಿಳಿಸಿದ್ದಾರೆ.

ಸರಬಜಿತ್‌ ಸಿಂಗ್ ಪಾಕಿಸ್ತಾನದಲ್ಲಿ ತಾನೊಬ್ಬ ರೈತ ಮತ್ತು ಗಡಿಯ ಸಮೀಪ ತನ್ನ ಮನೆ ಇದೆ ಎಂದು ಹೇಳಿದ್ದರು. ಅವರು ತಪ್ಪಿ ಗಡಿಯನ್ನು ದಾಟಿದ್ದೇನೆ ಎಂದರೂ ಅವರನ್ನು ಬಂಧಿಸಿ 1991ರಲ್ಲಿ ಗಲ್ಲು ಶಿಕ್ಷೆ ಘೋಷಿಸಲಾಗಿತ್ತು. ನಂತರ ಅದನ್ನು ಶಿಕ್ಷೆ ಪ್ರಮಾಣ ಕಡಿಮೆ ಗೊಳಿಸಲಾಗಿತ್ತು. ಆನಂತರ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಲಾಹೋರ್ ಆಸ್ಪತ್ರೆಯಲ್ಲಿ ಮೃತರಾಗಿದ್ದರು. ಈಗ ಪಾಕಿಸ್ತಾನ ಬೇಹುಗಾರ ಎಂದು ಬಂಧಿಸಲಾಗಿರುವ ಕುಲಭೂಷಣ್ ಜಾಧವ್‌ರ ತಂದೆ ಮುಂಬೈಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸಮಾಡಿದ್ದರು ಮತ್ತು ಸಹಾಯಕ ಪೊಲೀಸ್ ಆಯುಕ್ತರಾಗಿ ನಿವೃತ್ತರಾಗಿದ್ದರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಕುಲ್‌ಭೂಷಣ್‌ರ ತಂದೆ ಎಂಟು ವರ್ಷಗಳ ಮೊದಲು ಸಹಾಯಕ ಪೊಲೀಸ್ ಆಯುಕ್ತ ಪದದಿಂದ ಸೇವಾ ನಿವೃತ್ತಿಗೊಂಡಿದ್ದರು. 2002ರಲ್ಲಿ ಬಾಂದ್ರದಲ್ಲಿ ಬಾಲಿವುಡ್ ನಟ ಸಲ್ಮಾನ್‌ರ ಹಿಟ್ ಆಂಡ್ ರನ್ ಪ್ರಕರಣ ದಾಖಲಾದಾಗ ಠಾಣೆಯ ಉಸ್ತುವಾರಿ ಕುಭೂಷಣ್‌ರ ಚಿಕ್ಕಪ್ಪ ಸುಭಾಶ್‌ರದ್ದಾಗಿತ್ತು. ಕುಲಭೂಷಣ್ ಕುಟುಂಬಕ್ಕೆ ಅವರ ಬಂಧನದ ಸುದ್ದಿ ಸಂಜೆಯ ವೇಳೆಗೆ ಮಾಧ್ಯಮಗಳಲ್ಲಿ ವರದಿಯಾದ ಮೇಲೆ ಗೊತ್ತಾಗಿತ್ತು. ಮೂಲಗಳ ಪ್ರಕಾರ ತನ್ನದೇ ವ್ಯವಹಾರವನ್ನು ಸ್ಥಾಪಿಸಲಿಕ್ಕಾಗಿ ನೌಕಾ ಸೇನೆಯಿಂದ ಸ್ವಇಚ್ಛೆಯ ನಿವೃತ್ತಿಯನ್ನು ಕುಲಭೂಷಣ್ ಪಡೆದುಕೊಂಡಿದ್ದರು. ಮತ್ತು ತನ್ನ ವ್ಯವಹಾರದ ನಿಮಿತ್ತ ಜಗತ್ತಿನಾದ್ಯಂತ ಪ್ರವಾಸ ಮಾಡುತ್ತಿದ್ದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News