×
Ad

ವಿರಾಟ ಆಟಕ್ಕೆ ಆಸೀಸ್ ಶರಣು : ಭಾರತ ಸೆಮಿಫೈನಲ್‌ಗೆ

Update: 2016-03-27 23:02 IST

 ಮೊಹಾಲಿ, ಮಾ.27: ವಿರಾಟ್ ಕೊಹ್ಲಿ(ಔಟಾಗದೆ 82,51 ಎಸೆತ, 9 ಬೌಂಡರಿ, 2 ಸಿಕ್ಸರ್) ಅವರ ಆಕರ್ಷಕ ಬ್ಯಾಟಿಂಗ್‌ನ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಸೆಮಿ ಫೈನಲ್‌ಗೆ ತಲುಪಲು 161 ರನ್ ಗುರಿ ಪಡೆದಿದ್ದ ಭಾರತ 19.1 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ರನ್ ಬಾರಿಸಿತು.

ಭಾರತ ಒಂದು ಹಂತದಲ್ಲಿ 18 ಎಸೆತಗಳಲ್ಲಿ 39 ರನ್ ಗಳಿಸಬೇಕಾಗಿತ್ತು. ಫಾಕ್ನರ್ ಎಸೆದ 18ನೆ ಓವರ್‌ನಲ್ಲಿ 19 ರನ್ ಗಳಿಸಿದ ಭಾರತ ಪಂದ್ಯದ ದಿಕ್ಕನ್ನು ಬದಲಿಸಿತು. ಕೊಹ್ಲಿ ಇದೇ ಓವರ್‌ನಲ್ಲಿ 2 ಬೌಂಡರಿ, 1 ಸಿಕ್ಸರ್ ಸಿಡಿಸಿದರು.

5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 67 ರನ್ ಸೇರಿಸಿದ ಕೊಹ್ಲಿ ಹಾಗೂ ಧೋನಿ(ಔಟಾಗದೆ 18) ತಂಡಕ್ಕೆ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು. ವಿರಾಟ್ ಕೊಹ್ಲಿ(82) ಹಾಗೂ ಯುವರಾಜ್ ಸಿಂಗ್(13)4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 45 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.

ರೋಹಿತ್ ಶರ್ಮ(12), ಶಿಖರ್ ಧವನ್(13) ಹಾಗೂ ಸುರೇಶ್ ರೈನಾ(10) ಮತ್ತೊಮ್ಮೆ ವಿಫಲರಾದರು. ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಫಿಂಚ್(43) ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News