ಶ್ರೀ ರವಿಶಂಕರ್‌ ಗುರೂಜಿ , ಸೈನಾ ನೆಹ್ವಾಲ್ ಸೇರಿದಂತೆ 56 ಮಂದಿ ಸಾಧಕರಿಗೆ ಪದ್ಮಪ್ರಶಸ್ತಿ ಪ್ರದಾನ

Update: 2016-03-28 11:51 GMT


ಹೊಸದಿಲ್ಲಿ, ಮಾ.28: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಇಂದು 2016ನೆ ಸಾಲಿನ ದೇಶದ ಉನ್ನತ ನಾಗರಿಕ ಪುರಸ್ಕಾರವಾಗಿರುವ ಪದ್ಮಪ್ರಶಸ್ತಿ ಪ್ರದಾನ ಮಾಡಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ 56 ಮಂದಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಿಲಯನ್ಸ್‌ ಇಂಡಸ್ಟ್ರೀಸ್‌ನ ಸ್ಥಾಪಕರಾದ ಧಿರೋ ಬಾಯ್‌ ಅಂಬಾನಿ,ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಜಗಮೋಹನ್‌, ಆರ್ಟ್‌ ಆಫ್‌ ಲಿವಿಂಗ್‌ನ ಸ್ಥಾಪಕರಾದ ಶ್ರೀ ರವಿಶಂಕರ್‌ ಗುರೂಜಿ  ಭಾರತ-ಅಮೆರಿಕ ಅರ್ಥಶಾಸ್ತ್ರಜ್ಞ ಅವಿನಾಶ್‌ ಕಮಾಲಾಕರ್‌ ದೀಕ್ಷಿತ್‌, ಖ್ಯಾತ ನೃತ್ಯಗಾರ್ತಿ ಯಮಿನಿ ಕೃಷ್ಣ ಮೂರ್ತಿ ಸೇರಿದಂತೆ ಐದು ಮಂದಿಗೆ  ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್ ಸೇರಿದಂತೆ ಎಂಟು ಮಂದಿಗೆ ಪದ್ಮಭೂಷಣ, ನಟ ಅಜಯ್ ದೇವಗನ್‌ ಸೇರಿದಂತೆ ೪೩  ಮಂದಿ  ಪದ್ಮಶ್ರೀ ಪ್ರಶಸ್ತಿ ಪಡೆದರು.
ಕಳೆದ ಜನವರಿ 26ರಂದು ಗಣರಾಜ್ಯ ದಿನದ ಅಂಗವಾಗಿ  ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಕೊಡುಗೆ ನೀಡಿರುವ  ಒಟ್ಟು 112ಮಂದಿ  ಸಾಧಕರನ್ನು ಪದ್ಮಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು.
ಪದ್ಮಪ್ರಶಸ್ತಿಗೆ ಆಯ್ಕೆಯಾಗಿರುವ ಸೂಪರ್‌ ಸ್ಟಾರ್‌ ರಜನಿಕಾಂತ್, ನಟಿ ಪ್ರಿಯಾಂಕ ಚೋಪ್ರಾ ಮತ್ತು ಟೆನಿಸ್‌ ತಾರೆ ಸಾನಿಯಾ  ಮಿರ್ಝಾ ಮತ್ತಿತರರು ಮುಂದಿನ ತಿಂಗಳು ನಡೆಯಲಿರುವ ಪ್ರತ್ಯೇಕ ಸಮಾರಂಭರಲ್ಲಿ ಪ್ರಶಸ್ತಿ ಸ್ವೀಕರಿಸಲಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News