ಭಟ್ಕಳ: ರಂಗಭೂಮಿ ಕಲಾವಿದರ ವೇದಿಕಯಿಂದ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

Update: 2016-03-28 11:55 GMT

ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಭಾನುವಾರದಂದು ಭಟ್ಕಳದ ಶ್ರೀ ಗುರು ತಾಲೂಕಾ ರಂಗಭೂಮಿ ಕಲಾವಿದರ ವೇದಿಕೆಯ ವತಿಯಿಂದ ತಾಲೂಕಾ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾತು.
ತಾಲೂಕಿನಲ್ಲಿಕಳೆದ 3 ವರ್ಷದಿಂದಕಲಾವಿದರನ್ನುಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಟ್ಟಿಕೊಂಡ ಶ್ರೀ ಗುರು ತಾಲೂಕಾ ರಂಗಭೂಮಿ ಕಲಾವಿದರ ವೇದಿಕೆಯಾಗಿದೆ. ಕಲಾವಿದರನ್ನುಉಳಿಸಿ ಬೆಳೆಸುವ ಉದ್ದೇಶದ ಜೊತೆಗೆ ಸಮಾಜಮುಖಿ ಕೆಲಸಲದಲ್ಲು ಸಹ ತಮ್ಮನ್ನುತಾವು ತೊಡಗಿಸಿಕೊಂಡಿದೆ.ಈ ನಿಟ್ಟಿನಲ್ಲಿವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಭಾನುವಾರದಂದು ಭಟ್ಕಳದ ಶ್ರೀ ಗುರು ತಾಲೂಕಾ ರಂಗಭೂಮಿ ಕಲಾವಿದರ ವೇದಿಕೆಯ ವತಿಯಿಂದತಾಲೂಕಾ ಸರ್ಕಾರಿಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಲಾಯಿತು. ಈ ಸಂಧರ್ಬದಲ್ಲಿ ಶ್ರೀ ಗುರು ತಾಲೂಕಾ ರಂಗಭೂಮಿ ಕಲಾವಿದರ ವೇದಿಕೆಯ ಅಧ್ಯಕ್ಷರಾದ ಅಶೋಕ ಮಹಾಲೆ ಮಾತನಾಡಿ
ಮೊದಲ ಬಾರಿಗೆ ಇಂತಹ ಸಮಾಜಮುಖಿ ಕೆಲಸವನ್ನು ನಮ್ಮ ಕಲಾವಿದರ ವೇದಿಕೆಯಿಂದ ಮಾಡಿದ್ದು, ಇನ್ನು ಮುಂದೆ ಆರ್ಥಿಕವಾಗಿ ಸದೃಡರಾದಲ್ಲಿ ಇನ್ನು ಹೆಚ್ಚಿನ ಸಾಮಾಜಿಕ ಕೆಲಸವನ್ನು ಮಾಡುತ್ತವೆ. ಹಾಗು ರೋಗಿಗಳ ಆರೋಗ್ಯದಲ್ಲಿ ಚೇತರಿಕೆ ಪಡೆದು ಸಂತೋಷದ ಜೀವನ ಸಾಗಿಸಲು ಇನ್ನುವುದು ನಮ್ಮ ವೇದಿಕೆಯ ಆಶಯವಾಗಿದೆ.
ಬಡಕಲಾವಿದರ ಶ್ರೇಯಸ್ಸಿಗಾಗಿ ಮುಂದಿನ ಜೀವನಕ್ಕಾಗಿಸರ್ಕಾರದಿಂದ ಯಾವುದಾದರೂ ಸವಲತ್ತು ಇಂತಹ ಸಾಮಾಜಿಕ ಕೆಲಸದಲ್ಲಿ ಸೇವೆ ಸಲ್ಲಿಸುವ ಕಲಾವಿದರ ವೇದಿಕೆಗೆ ಸಿಕ್ಕರೆ ಮತ್ತಷ್ಟು ಸಹಾಯವಾಗಲಿದ್ದು, ಸರ್ಕಾರ ಹಾಗು ಸ್ಥಳಿಯ ಜನಪ್ರತಿನಿಧಿಗಳು ಈ ಬಗ್ಗೆ ಸ್ವಲ್ಪಚಿಂತನೆ ನಡೆಸಬೇಕಾಗಿದೆ.
ಈ ಸಂಧರ್ಭಧಲ್ಲಿಕಲಾವಿದರ ವೇದಿಕೆಯ ಕಾರ್ಯದರ್ಶಿಯಾದ ಮಂಜುನಾಥಎನ್.ನಾಯ್ಕ, ಉಪಾಧ್ಯಕ್ಷರಾದ ಕೆ.ಆರ್.ನಾಯ್ಕ, ಗೌರವ ಸಲಹೆಗಾರರಾದ ಶ್ರೀಧರ ಬಿ. ನಾಯ್ಕ, ಸದಸ್ಯರಾದನಾಗರಾಜ ಪಟಗಾರ, ವೆಂಕಟೇಶ ನಾಯ್ಕ, ದೇವ ನಾಯ್ಕ, ನಜೀರ್‌ಜಾದೂಗಾರ, ರವಿ ನಾಯ್ಕ, ಮಂಜುನಾಥಎಲ್. ನಾಯ್ಕಜಾಲಿ ಹಾಗು ಮುಂತಾದ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News