×
Ad

ಯಮನ್: ಬಂಡುಕೋರರಿಂದ 9 ಸೌದಿಗಳ ಬಿಡುಗಡೆ

Update: 2016-03-28 23:14 IST

ರಿಯಾದ್, ಮಾ. 28: ಯಮನ್ ರಾಜಧಾನಿ ಸನಾದ ನಿಯಂತ್ರಣವನ್ನು ಹೊಂದಿರುವ ಶಿಯಾ ಬಂಡುಕೋರರು, 109 ಯಮನಿಗಳಿಗೆ ಪ್ರತಿಯಾಗಿ ಒಂಬತ್ತು ಸೌದಿ ರಾಷ್ಟ್ರೀಯರನ್ನು ಬಿಡುಗಡೆ ಮಾಡಿದ್ದಾರೆ.
ಈ ವಿಷಯವನ್ನು ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ಅರೇಬಿಯ ನೇತೃತ್ವದ ಮಿತ್ರ ಪಡೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮುಂದಿನ ತಿಂಗಳು ನಿಗದಿಯಾಗಿರುವ ಶಾಂತಿ ಮಾತುಕತೆಗೆ ಪೂರ್ವಭಾವಿಯಾಗಿ ಈ ಬೆಳವಣಿಗೆ ನಡೆದಿದೆ.
 
ಎಪ್ರಿಲ್ 10ರ ಮಧ್ಯ ರಾತ್ರಿಯಿಂದ ಯುದ್ಧವಿರಾಮಕ್ಕೆ ಯುದ್ಧನಿರತರು ಒಪ್ಪಿದ್ದಾರೆ ಎಂದು ಕಳೆದ ವಾರ ವಿಶ್ವಸಂಸ್ಥೆಯ ರಾಯಭಾರಿ ಇಸ್ಮಾಯೀಲ್ ಔಲ್ದ್ ಶೇಖ್ ಅಹ್ಮದ್ ಘೋಷಿಸಿದ್ದರು. ಎಪ್ರಿಲ್ 18ರಂದು ಕುವೈತ್‌ನಲ್ಲಿ ಶಾಂತಿ ಮಾತುಕತೆ ನಡೆಸಲು ದಿನ ನಿಗದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News