ಗುಜರಾತ್ ಅಂಗನವಾಡಿಗಳಲ್ಲಿ ಶೌಚಾಲಯ, ಕುಡಿಯುವ ನೀರಿಲ್ಲ
Update: 2016-03-28 23:24 IST
ಅಹ್ಮದಾಬಾದ್, ಮಾ.28: ಗುಜರಾತ್‌ನಲ್ಲಿರುವ 53 ಸಾವಿರ ಅಂಗನವಾಡಿಗಳ ಪೈಕಿ 4,500ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಹಾಗೂ 5,600 ಅಂಗನವಾಡಿಗಳು ಶೌಚಾಲಯ ಇಲ್ಲದೇ ಕಾರ್ಯನಿರ್ವಹಿಸುತ್ತಿವೆ ಎನ್ನುವುದು ಸರಕಾರಿ ಅಂಕಿ ಅಂಶಗಳಿಂದಲೇ ಬಯಲಾಗಿದೆ.
4,505 ಅಂಗನವಾಡಿಗಳಲ್ಲಿ ಕುಡಿಯುವ ನೀರು ಇಲ್ಲ ಹಾಗೂ 5,600 ಅಂಗನವಾಡಿಗಳು ಶೌಚಾಲಯ ಇಲ್ಲದೇ ಕಾರ್ಯನಿರ್ವಹಿಸುತ್ತಿವೆ ಎಂದು ವಿವರಿಸಲಾಗಿದೆ.