ಉತ್ತರ ಪ್ರದೇಶ: ನಮ್ಮ ಘೋಷಣೆ ಜೈಭೀಮ್ -ಜೈಮೀಮ್ ಎಂದ ಅಸದುದ್ದೀನ್ ಉವೈಸಿ
ಲಕ್ನೊ, ಮಾರ್ಚ್.29: ಎಐಎಂಐಎಂ ಅಧ್ಯಕ್ಷ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಸೋಮವಾರ ಲಕ್ನೋ ಪ್ರವಾಸದಲ್ಲಿ ಹಿಂದೂಸ್ಥಾನ್ ಜಿಂದಾಬಾದ್ ಮತ್ತು ಜೈ ಹಿಂದ್ ಘೋಷಣೆ ಕೂಗಿದ್ದಾರೆ. ಸಮಾಜವಾದಿ ಪಾರ್ಟಿ ಬಿಜೆಪಿಯೊಂದಿಗೆ ಕೈಜೋಡಿಸಿರುವುದಾಗಿ ಉವೈಸಿ ಆರೋಪಿಸಿದ್ದಾರೆ. ಈ ಹೇಳಿಕೆಯನ್ನು ವಿರೋಧಿಸಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಉವೈಸಿ ವಿರುದ್ಧ ಕರಿಪತಾಕೆ ತೋರಿಸಿರುವುದಾಗಿ ವರದಿಯಾಗಿದೆ. ಉವೈಸಿ ವಾಪಸ್ ಹೋಗಿ ಘೋಷಣೆಯನ್ನೂ ಅವರು ಕೂಗಿದರು. ಲಕ್ನೋದಲ್ಲಿ ಉವೈಸಿ ದೇವಾಶರೀಫ್‌ಗೆ ಭೇಟಿ ನೀಡಿದರು. ಅಲ್ಲಿ ಬಾರಬಂಕಿ ಹಾಜಿ ವಾರಿಸ್ ಅಲಿ ಶಾಹ ದರ್ಗಾಕ್ಕೆ ಚದ್ದರವನ್ನು ಹೊದಿಸಿದರು. ಲಕ್ನೊದಲ್ಲಿ ಅವರು ನದ್ವತುಲ್ ಉಲೂಮ್‌ನ ಮೌಲಾನ ರಾಬೆ ಹಸನ್ ನದ್ವಿಯವರೊಂದಿಗೆ ಮಾತುಕತೆ ನಡೆಸಿದರು. ಆನಂತರ ಶಿಯ ಮೌಲಾನ ಕಲ್ಬೆ ಜವಾದ್‌ರನ್ನೂ ಭೇಟಿಯಾದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಉವೈಸಿ ನಮಗೆ ದೇಶಭಕ್ತರಾಗಿರುವುದಕ್ಕೆ ಪ್ರಮಾಣ ಪತ್ರದ ಅಗತ್ಯವಿಲ್ಲ. ನಮಗೆ ಯಾವುದೇ ಫ್ರೋಪ್‌ನ ಅಗತ್ಯವಿಲ್ಲ. ನಮ್ಮ ಮೇಲೆ ಯಾರು ದೇಶಭಕ್ತಿಯ ಪ್ರಶ್ನೆಎಸೆಯುತ್ತಿದ್ದಾರೋ ಅವರು ವಂಚಕರಾಗಿದ್ದಾರೆ. 1857ರ ಸ್ವಾತಂತ್ರ್ಯದವರೆಗೆ ಈ ಜನರ ಯಾವುದೇ ಅಸ್ತಿತ್ವ ಇರಲಿಲ್ಲ,ಆಗ ನಾವು ರಕ್ತ ಹರಿಸಿದ್ದೇವೆ. ನಮ್ಮನ್ನು ಇಂಗ್ಲಿಷರು ಗಲ್ಲಿಗೇರಿಸಿದರು. ನಾವೆಂದೂ ಶಿಕ್ಷೆಯನ್ನು ಕ್ಷಮಿಸಬೇಕೆಂದು ಮನವಿ ಮಾಡಲಿಲ್ಲ. ಜೈ ಹಿಂದ್, ಹಿಂದುಸ್ತಾನ್ ಜಿಂದಾಬದ್ ನಾವು ಈ ದೇಶಕ್ಕಾಗಿ ನಮ್ಮ ರಕ್ತವನ್ನು ಸುರಿಸಿದ್ದೇವೆ" ಎಂದು ಉವೈಸಿ ಹೇಳಿದರು. ಅಖಿಲೇಶ್ ಯಾದವ್ ಸರಕಾರವನ್ನು ಟೀಕಿಸುತ್ತಾ ಉವೈಸಿ ಬಿಜೆಪಿ ಸಮಾಜವಾದಿ ಪಕ್ಷಗಳು ಒಂದೆ ನಾಣ್ಯದ ಎರಡು ಮುಖಗಳೆಂಬುದು ಎಲ್ಲರಿಗೂ ಗೊತ್ತಿದೆ. ಮೋಹನ್ ಭಾಗವತ್‌ರಿಗೆ ಯಾವುದೇ ವಿರೋಧವಿಲ್ಲ. ಆದರೆ ನಮ್ಮ ಮೇಲೆ ನಿಷೇಧ ಹೇರಲಾಗುತ್ತಿದೆ. ವಾಸ್ತವದಲ್ಲಿ ಸಮಾಜವಾದಿ ಸರಕಾರ ನಮಗೆ ಹೆದರಿದೆ. ಇತ್ತೀಚೆಗಿನ ಬೀಕಾಪುರ್ ಉಪಚುನಾವಣೆ ಉತ್ತರ ಪ್ರದೇಶ ಮುಸ್ಲಿಮರ ನಿಲುವನ್ನು ಪ್ರತಿನಿಧಿಸಿದೆ. ಸಮಾಜವಾದಿ ಪಕ್ಷ ಎಂದೂ ಮುಸ್ಲಿಮರ ಹಿತವನ್ನು ಯೋಚಿಸುವುದಿಲ್ಲ" ಎಂದು ಟೀಕಿಸಿದ್ದಾರೆ.
ಉವೈಸಿ ತನ್ನ ಕಾರ್ಯಕರ್ತರಿಗೆ ಮುಂದಿನ ವಿಧಾನಸಭಾಚುನಾವಣೆಯ ಟಿಪ್ಸ್‌ನ್ನು ಕೂಡ ನೀಡಿದ್ದಾರೆ. ನಮ್ಮ ಬಳಿ ಚುನಾವಣೆಗೆ ತಯಾರಿ ನಡೆಸುವಷ್ಟು ತಾಕತ್ತಿಲ್ಲ. ನಮಗೆ ಉತ್ತಮ ಸೀಟುಗಳು ದೊರೆಯಲಿವೆ. ನಮ್ಮ ಮುಖ್ಯ ಘೋಷಣೆ ಜೈಭೀಮ್-ಜೈಮೀಮ್ ಆಗಿರಲಿದೆ. ಎಎಂಐಎಂ ಶೇ 10ರಷ್ಟು ಜನರಿಂದ ಚುನಾವಣೆಯಲ್ಲಿ ಹೋರಾಡಲಿದೆ.ಯಾಕೆಂದರೆ 90 ಶೇಕಡಾ ಜನರು ನಮ್ಮೊಂದಿಗಿದ್ದಾರೆ. ಮುಝಫ್ಫರ್‌ನಗರ್ ದಂಗೆಯಲ್ಲಿ ಕೇವಲ ಇಬ್ಬರು ಕಾರಣ ಎನ್ನಲಾಗುತ್ತಿದೆ. ನನಗೆ ಈ ದಂಗೆ ರಾಜ್ಯಸರಕಾರ ಹೊಣೆಯೆಂದು ಅನಿಸುತ್ತಿದೆ. ನಮ್ಮ ಹೋರಾಟ ಸಮಾಜವಾದಿ ಪಕ್ಷ ಮತ್ತು ಬಿಜೆಪಿ ವಿರುದ್ಧವಾಗಿದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿವೆ.