×
Ad

ದಾಖಲೆ ನಿರ್ಮಿಸುವತ್ತ ಇಸ್ರೊ : ಒಂದೇ ರಾಕೆಟ್‌ನಲ್ಲಿ 22 ಉಪಗ್ರಹ ಉಡಾವಣೆ

Update: 2016-03-29 22:00 IST

ತಿರುವನಂತಪುರ, ಮಾ.29: ಭಾರತ ದಾಖಲೆಯೊಂದನ್ನು ಬರೆಯಲು ಸರ್ವ ಸನ್ನದ್ಧವವಾಗಿದೆ. ಅದು, ಮುಂದಿನ ಮೇಯಲ್ಲಿ ಒಂದೇ ರಾಕೆಟ್‌ನ ಮೂಲಕ ದಾಖಲೆಯ 22 ಉಪಗ್ರಹಗಳನ್ನು ಅಂತರಿಕ್ಷಕ್ಕೇರಿಸಲಿದೆ. ಅವುಗಳಲ್ಲಿ ವಿದೇಶಗಳ ಮೈಕ್ರೊ ಹಾಗೂ ನ್ಯಾನೊ ಉಪಗ್ರಹಗಳೂ ಸೇರಿರುತ್ತವೆ.

ಭಾರತದ ಕಾರ್ಟೊಸ್ಯಾಟ್ 2ಸಿ ಉಪಗ್ರಹವನ್ನು ಒಯ್ಯಲಿರುವ ಇಸ್ರೊದ ಪಿಎಸ್‌ಎಲ್‌ವಿ-ಸಿ34 ಧ್ರುವ ರಾಕೆಟ್, ಅಮೆರಿಕ,ಕೆನಡ, ಇಂಡೋನೇಶ್ಯ ಹಾಗೂ ಜರ್ಮನಿ ಸಹಿತ ವಿದೇಶಗಳ 21 ಇತರ ಉಪಗ್ರಹಗಳನ್ನು ಸಹ-ಪ್ರಯಾಣಿಕರನ್ನಾಗಿ ಒಯ್ಯಲಿದೆಯೆಂದು ಇಸ್ರೊದ ಹಿರಿಯಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಡಾವಣೆ ನಡೆಯಲಿದೆ. 2008ರಲ್ಲಿ ಒಂದೇ ಅಭಿಯಾನದಲ್ಲಿ 10 ಉಪಗ್ರಹಗಳನ್ನು ಕಕ್ಷೆಗಳಲ್ಲಿರಿಸಿದ್ದ ಇಸ್ರೊ ಈ ಬಾರಿ ಗರಿಷ್ಠ ಸಂಖ್ಯೆಯ (22) ಉಪಗ್ರಹಗಳನ್ನು ಹಾರಿಸಲಿದೆ.

2013ರಲ್ಲಿ ನಾಸಾ, ಒಂದೇ ರಾಕೆಟ್‌ನಲ್ಲಿ 29 ಉಪಗ್ರಹಗಳನ್ನು ಅಂತರಿಕ್ಷದಲ್ಲಿರಿಸಿದ್ದುದು, ಈ ವರೆಗಿನ ವಿಶ್ವ ದಾಖಲೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News