ಮಾಧ್ಯಮಗಳಿಂದ ಟ್ರಂಪ್‌ಗೆ ಅತಿ ಪ್ರಚಾರ: ಒಬಾಮ ಪರೋಕ್ಷ ಟೀಕೆ
ವಾಶಿಂಗ್ಟನ್, ಮಾ.29: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್‌ಗೆ ಮಾಧ್ಯಮಗಳು ಅತಿಯಾಗಿ ಪ್ರಚಾರ ನೀಡುತ್ತಿರುವುದನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಪರೋಕ್ಷವಾಗಿ ಟೀಕಿಸಿದ್ದಾರೆ. ಸುಳ್ಳು ಹೇಳುವ ಹಾಗೂ ತರ್ಕರಹಿತ ಮಾತುಗಳನ್ನಾಡುವ ಅಭ್ಯರ್ಥಿಗಳನ್ನು ಮಾಧ್ಯಮಗಳು ತರಾಟೆಗೆ ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ವಾಶಿಂಗ್ಟನ್‌ನಲ್ಲಿ ಸೋಮವಾರ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಚುನಾವಣಾ ಪಚಾರದಲ್ಲ್ಲಿ ಡೊನಾಲ್ಡ್ ಟ್ರಂಪ್ ಅವರ ಪ್ರಚೋದನಾಕಾರಿ ಹೇಳಿಕೆಗಳು ಹಾಗೂ ಅವುಗಳಿಗೆ ಮಾಧ್ಯಮಗಳು ನೀಡುವ ಪ್ರಚಾರವನ್ನು ಪರೋಕ್ಷವಾಗಿ ಟೀಕಿಸಿದರು.
‘‘ನಾವೀಗ ನೋಡುತ್ತಿರುವುದು ನಮ್ಮ ಪ್ರಜಾಪ್ರಭುತ್ವ ಹಾಗೂ ಸಮಾಜದ ಘೋರ ವಿಡಂಬನೆಯಾಗಿದೆ’’ ಎಂದು ಒಬಾಮ ಅಮೆರಿಕದ ಪ್ರೈಮರಿ ಚುನಾವಣೆಗಳು ಕೆಳಮಟ್ಟಕ್ಕಿಳಿದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.