×
Ad

ಇನ್ನು ವಾಟ್ಸ್‌ಆ್ಯಪ್‌ನಿಂದ ಲ್ಯಾಂಡ್‌ಲೈನ್‌ಗೂ ಕರೆ ಮಾಡಿ

Update: 2016-03-29 23:56 IST

ಹೊಸದಿಲ್ಲಿ, ಮಾ.29: ಜನಪ್ರಿಯ ಇಂಟರ್ನೆಟ್ ಆಪ್‌ಗಳಾದ ಸ್ಕೈಪ್, ವಾಟ್ಸ್‌ಆ್ಯಪ್ ಅಥವಾ ವೈಬರ್ ಮೂಲಕ ಸ್ಥಿರ ದೂರವಾಣಿ (ಲ್ಯಾಂಡ್‌ಲೈನ್) ಹಾಗೂ ಚರ ದೂರವಾಣಿ (ಮೊಬೈಲ್)ಗೂ ಕರೆ ಮಾಡುವ ವ್ಯವಸ್ಥೆ ಇಷ್ಟರಲ್ಲೇ ಜಾರಿಗೆ ಬರಲಿದೆ. ಇಂಟರ್ನೆಟ್ ಸೇವಾ ಸಂಸ್ಥೆಗಳು ಹಾಗೂ ದೂರಸಂಪರ್ಕ ಸೇವಾ ಸಂಸ್ಥೆಗಳ ನಡುವೆ ನಡೆದ ಅಂತರ್ ಸಂಪರ್ಕ ಒಪ್ಪಂದಕ್ಕೆ ಕೇಂದ್ರ ಸರಕಾರದ ಅಂತರ ಸಚಿವಾಲಯ ಸಮಿತಿ ಸೋಮವಾರ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದಾಗಿ ದೂರವಾಣಿ ಕರೆಗಳ ದರ ಗಣನೀಯವಾಗಿ ಕಡಿಮೆಯಾಗಲಿದೆ. ಅಂದರೆ ಡಾಟಾ ಬಳಕೆ ದರದಲ್ಲಿ ದೂರವಾಣಿ ಕರೆಗಳ ದರ ನಿಗದಿಪಡಿಸಲಾಗುವುದು. ಆದರೆ ಇಂಟರ್ನೆಟ್ ನೆಟ್‌ವರ್ಕ್‌ಗಳ ಕಳಪೆ ಗುಣಮಟ್ಟವೇ ಕಿರಿಕಿರಿಗೆ ಕಾರಣವಾಗುವ ಅಂಶ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News