ಜೆಎನ್‌ಯು ಪ್ರೋಫೆಸರ್ ಕರೆದ ಜಾರ್ಖಂಡ್ ಯುನಿವರ್ಸಿಟಿಯ ಮಹಿಳಾ ಪ್ರೊಫೆಸರ್ ಸಸ್ಪೆಂಡ್!

Update: 2016-03-30 09:45 GMT

ಜಾರ್ಖಂಡ್, ಮಾರ್ಚ್.30: ಜಾರ್ಖಂಡ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಎಸೋಸಿಯೇಟೆಡ್ ಪ್ರೊಫೆಸರ್ ಡಾ. ಶ್ರೇಯಾ ಭಟ್ಟಾಚಾರ್ಜಿ ಅವರನ್ನು ಜೆಎನ್‌ಯು ಪ್ರೊಫೆಸರ್ ಒಬ್ಬರನ್ನು ಯುನಿವರ್ಸಿಟಿಯ ಕಾರ್ಯಕ್ರಮಕ್ಕೆ ಕರೆದಿದ್ದಕ್ಕಾಗಿ ಅಮಾನತು ಮಾಡಿರುವ ಘಟನೆ ವರದಿಯಾಗಿದೆ. ಎನ್‌,ಎಂ,ಪಾಣಿನಿ ಎಂಬ ಜೆಎನ್‌ಯು ಪ್ರೊಫೆಸರ್‌ರನ್ನು ಶ್ರೇಯಾ ಕಾರ್ಯಕ್ರಮಕ್ಕಾಗಿ ಕರೆದಿದ್ದರು. ವಿಶ್ವವಿದ್ಯಾನಿಲಯದಲ್ಲಿ ಮಾರ್ಚ್ 17ರಿಂದ 19ರವರೆಗೆ ನಡೆದ ಸರ್ದಾರ್ ವಲಭಬಾಯಿ ಪಟೇಲ್ 140ನೆ ಜನ್ಮದಿನಾಚರಣೆಯ ಕಾರ್ಯಕ್ರಮದ ಹೊಣೆಗಾರಿಕೆಯನ್ನು ಡಾ. ಶ್ರೇಯಾರಿಗೆ ವಹಿಸಿಕೊಡಲಾಗಿತ್ತು. ಮಾರ್ಚ್ ಹತ್ತೊಂಬತ್ತರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜಾರ್ಖಂಡ್ ರಾಜ್ಯಪಾಲರು ಬರಲಿದ್ದರು. ಜೆಎನ್‌ಯು ಪ್ರೊಫೆಸರ್ ಪಾಣಿನಿ ಕರೆದಿರುವ ಸುದಿ ತಿಳಿದು ವಿಶ್ವವಿದ್ಯಾನಿಲಯದ ವರ್ಚಸ್ಸಿಗೆ ಹಾನಿಯಾಗಿದೆ ಮತ್ತು ರಾಜ್ಯಪಾಲರು ಬಂದಿಲ್ಲ ಎಂದು ಡಾ. ಶ್ರೇಯಾರ ಅಮಾನತು ಆದೇಶದಲ್ಲಿ ಸೂಚಿಸಲಾಗಿದೆ.

ಶ್ರೇಯಾ ಭಟ್ಟಾಚಾರ್ಜಿಯವರ ವಿರುದ್ಧ ವಿಶ್ವವಿದ್ಯಾನಿಲಯಕ್ಕೆ ಮಾಹಿತಿ ನೀಡದೆ ಪ್ರೋಫೆಸರ್ ಪಾಣಿನಿಯನ್ನು ಆಹ್ವಾನಿಸಿದರೆಂದು ಆರೋಪಹೊರಿಸಲಾಗಿದೆ. ಅಮಾನತು ಆದೇಶದಲ್ಲಿ ಪ್ರೊಫೆಸರ್ ಪಾಣಿನಿ ಜೆಎನ್‌ಯು ಪರಿಸರದಲ್ಲಿ ಇತ್ತೀಚೆಗೆ ನಡೆದಿರುವ ಘಟನೆಗೆ ಕುಮ್ಮಕ್ಕು ನೀಡಿದವರೆಂದುಸೂಚಿಸಲಾಗಿದೆ. ಪ್ರೊಫೆಸರ್ ಪಾಣಿನಿ ಜೆಎನ್‌ಯು ಕ್ಯಾಂಪಸ್‌ನಲ್ಲಿ ರಾಷ್ಟ್ರದ್ರೋಹಿ ಘಟನಾವಳಿಗಳಲ್ಲಿ ಶಾಮೀಲಾಗಿರವು ವಿದ್ಯಾರ್ಥಿಗಳ ಮೆಂಟರ್ ಎಂದೂ ಸೂಚಿಸಲಾಗಿದೆ. ಡಾ.ಶ್ರೇಯಾ ಪಾಣಿನಿಯವರ ಬಗ್ಗೆ ಅರಿತುಕೊಳ್ಳದೆ ಕರೆದಿದ್ದರು. ಇದಕ್ಕಾಗಿ ನಾಲ್ಕುಕಡೆಯಿಂದಲೂ ಅವರನ್ನು ಟೀಕಿಸಲಾಗಿತ್ತು. 

 ಆದರೆ ಪ್ರೊಫೆಸರ್ ಪಾಣಿನಿ ತನಗೆ ವೈಸ್ ಚಾನ್ಸೆಲರ್ ಕಡೆಯಿಂದಲೂ ಕರೆ ಬಂದಿತ್ತೆಂದು ತಿಳಿಸಿದ್ದಾರೆ. ಈ ಕಾರ್ಯಕ್ರಮ ಕೆಲವು ತಿಂಗಳಿಗೆ ಮೊದಲೆ ಯೋಜಿಸಲಾಗಿತ್ತು. ನಂತರ ಅದು ಮಾರ್ಚ್ ಹತ್ತೊಂಬತ್ತಕ್ಕೆ ನಿಗದಿಗೊಳಿಸಲಾಯಿತು. ಅಂದು ತನಗೆ ಫೋನಾಯಿಸಿದ ವೈಸ್ ಚಾನ್ಸಲರ್ ತನ್ನನ್ನು ಕರೆಯಲಿಕ್ಕೆ ಹರ್ಷವಾಗಿದೆ ಎಂದು ಹೇಳಿದ್ದರೆಂದು ಪಾಣಿನಿ ಬಹಿರಂಗ ಪಡಿಸಿದ್ದಾರೆ. ತಾನು ದಿಲ್ಲಿಯಲ್ಲಿದ್ದುದರಿಂದ ನನ್ನ ಟಿಕೆಟ್ ಬುಕ್ ಮಾಡಲು ತಿಳಿಸಿದ್ದರು. ತಾನು ಟಿಕೆಟ್ ಬುಕ್ ಮಾಡಲು ಹೋದಾಗ ಮತ್ತೆ ಫೋನ್ ಮಾಡಿ ಕಾರ್ಯಕ್ರಮ ರದ್ದಾಗಿರುವುದಾಗಿ ತಿಳಿಸಿದ್ದರು ಎಂದು ಪಾಣಿನಿ ಸ್ಪಷ್ಟ ಪಡಿಸಿದ್ದಾರೆ. ಈಗ ಅಮಾನತು ಗೊಂಡಿರುವ ಡಾ.ಶ್ರೇಯಾ ಭಟ್ಟಾಚಾರ್ಜಿ ಜಾರ್ಖಂಡ್ ಯೂನಿವರ್ಸಿಟಿಯ ಇಂಗ್ಲಿಷ್ ವಿಭಾಗದ ಅಸೋಸಿಯೇಟೆಡ್ ಪ್ರೊಫೆಸರ್ ಹಾಗೂ ಸ್ಕೂಲ್ ಆಫ್ ಲಾಂಗ್ವೆಜ್, ಸ್ಕೂಲ್ ಆಫ್ ಎಜುಕೇಶನ್ ಹಾಗೂ ಸ್ಕೂಪ್ ಆಫ್ ಸ್ಟೂಡೆಂಟ್ಸ್ ವೆಲ್ಫೇರ್ ನ ಡೀನ್ ಆಗಿದ್ದಾರೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News