ಇನ್ನು ನಿಮ್ಮ ಸ್ಮಾರ್ಟ್‌ಫೋನೇ ಪಾಸ್‌ಪೋರ್ಟ್

Update: 2016-03-30 14:19 GMT

ಲಂಡನ್, ಮಾ. 30: ಗಡಿಬಿಡಿಯಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುವಾಗ ಪಾಸ್‌ಪೋರ್ಟ್ ಮರೆತುಬಿಟ್ಟಿದೀರೇ? ಚಿಂತಿಸಬೇಡಿ. ಬ್ರಿಟನ್‌ನ ವಾಣಿಜ್ಯ ಬ್ಯಾಂಕ್ ನೋಟ್ ಮುದ್ರಕ ಹಾಗೂ ಪಾಸ್‌ಪೋರ್ಟ್ ತಯಾರಕ ಸಂಸ್ಥೆ ಡಿ ಲಾ ರ್ಯೂ ನೂತನ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸುತ್ತಿದೆ. ಈ ತಂತ್ರಜ್ಞಾನದ ಸಹಾಯದಿಂದ ‘‘ಕಾಗದರಹಿತ ಪಾಸ್‌ಪೋರ್ಟ್’’ಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಶೇಖರಿಸಬಹುದಾಗಿದೆ.

ಈ ತಂತ್ರಜ್ಞಾನವು ಪುಸ್ತಕ ರೂಪದ ಪಾಸ್‌ಪೋರ್ಟ್‌ಗಳನ್ನು ಹಿಡಿದುಕೊಂಡು ಪ್ರಯಾಣಿಸುವ ಅನಿವಾರ್ಯತೆಯಿಂದ ಪ್ರಯಾಣಿಕರಿಗೆ ಮುಕ್ತಿ ನೀಡಲಿದೆ. ಬದಲಿಗೆ ಪಾಸ್‌ಪೋರ್ಟ್‌ಗಳನ್ನು ‘ಕಾಗದರಹಿತ ಪಾಸ್‌ಪೋರ್ಟ್’ಗಳನ್ನಾಗಿ ಪರಿವರ್ತಿಸಿ ಯಾವುದೇ ದಾಖಲೆಗಳನ್ನು ಹೊಂದದೆ ವಿಮಾನ ನಿಲ್ದಾಣಗಳಿಗೆ ಹೋಗಲು ಅವಕಾಶ ಮಾಡಿಕೊಡಲಿದೆ.

‘‘ನಾವು ಈಗ ಪರಿಶೀಲನೆ ನಡೆಸುತ್ತಿರುವ ಹಲವಾರು ಉಪಕ್ರಮಗಳಲ್ಲಿ ಕಾಗದರಹಿತ ಪಾಸ್‌ಪೋರ್ಟ್ ಒಂದು. ಆದರೆ, ಈ ಹಂತದಲ್ಲಿ ಅದು ಕಲ್ಪನೆಯಾಗಿದೆ ಹಾಗೂ ಅಭಿವೃದ್ಧಿಯ ಆರಂಭಿಕ ಹಂತದಲ್ಲಿದೆ’’ ಎಂದು ಕಂಪೆನಿಯ ವಕ್ತಾರರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News