ಲಾಹೋರ್ ಸ್ಪೋಟ: 5,000ಕ್ಕೂ ಅಧಿಕ ಬಂಧನ

Update: 2016-03-30 16:03 GMT

ಲಾಹೋರ್, ಮಾ. 30: ಲಾಹೋರ್‌ನಲ್ಲಿ ನಡೆದ ಈಸ್ಟರ್ ಸಂಡೇ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ, ಎರಡು ದಿನಗಳಲ್ಲಿ 5,000ಕ್ಕೂ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ರಾಜ್ಯದ ಕಾನೂನು ಸಚಿವ ರಾಣಾ ಸನಾವುಲ್ಲ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದ್ದಾರೆ. ಅವರ ಪೈಕಿ 200ಕ್ಕೂ ಅಧಿಕ ಮಂದಿ ಈಗಲೂ ಪೊಲೀಸ್ ವಶದಲ್ಲಿದ್ದಾರೆ.

‘‘ಪಂಜಾಬ್‌ನ ವಿವಿಧ ಭಾಗಗಳಿಂದ 5,221 ಮಂದಿಯನ್ನು ಆರಂಭದಲ್ಲಿ ವಶಕ್ಕೆ ಪಡೆಯಲಾಗಿತ್ತು. ಆ ಪೈಕಿ ವಿಚಾರಣೆಯ ಬಳಿಕ 5,005 ಮಂದಿಯನ್ನು ಬಿಡುಗಡೆ ಮಾಡಲಾಗಿದೆ’’ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News