×
Ad

ಕನ್ಹಯ್ಯ-ವೇಮುಲಾ ಇಂದಿನ ಭಗತ್ ಸಿಂಗರು: ಜಗಮೋಹನ್ ಸಿಂಗ್

Update: 2016-03-30 22:48 IST

ಹೊಸದಿಲ್ಲಿ, ಮಾ.30: ಕನ್ಹಯ್ಯಕುಮಾರ್, ರೋಹಿತ್ ವೇಮುಲಾ ಹಾಗೂ ದೇಶದ ಸಮಸ್ಯೆಯ ಕುರಿತು ಕಾಳಜಿಯಿರುವ ಹಾಗೂ ಧ್ವನಿಯೆತ್ತುವ ಪ್ರತಿ ಯುವಕನೂ ವರ್ತಮಾನ ಕಾಲದ ಭಗತ್ ಸಿಂಗರಾಗಿದ್ದಾರೆಂದು ಹುತಾತ್ಮನ ಸೋದರ ಸಂಬಂಧಿ ಜಗಮೋಹನ್ ಸಿಂಗ್ ಇಂದಿಲ್ಲಿ ಹೇಳಿದ್ದಾರೆ.

ಅವರೆಲ್ಲರೂ ಭಗತ್ ಸಿಂಗರಾಗಿದ್ದಾರೆ. ಕನ್ಹಯ್ಯಾ, ರೋಹಿತ್ ಹಾಗೂ ದೇಶದ ಬಗ್ಗೆ ಕಾಳಜಿಯಿರುವ ಹಾಗೂ ಸಮಸ್ಯೆಯನ್ನೆತ್ತುವ ಪ್ರತಿ ಯುವಕನೂ ಅವರಿಗೆ ಹೋಲಿಸಲ್ಪಡುವ ಎಲ್ಲ ಹಕ್ಕು ಹೊಂದಿದ್ದಾನೆ. ಇದು ಸರಕಾರವನ್ನು ದಿಗ್ಭ್ರಮೆಗೊಳಿಸಿದೆ ಹಾಗೂ ದನಿಯೆತ್ತುವವರ ವಿರುದ್ಧ ಅವರು ಪ್ರಕರಣಗಳನ್ನು ನಿರ್ಮಿಸುತ್ತಾರೆಂದು ಜೆಎನ್‌ಯುದಲ್ಲಿ ನಡೆದ ಉಪನ್ಯಾಸವೊಂದರ ನೇಪಥ್ಯದಲ್ಲಿ ಅವರು ತಿಳಿಸಿದ್ದಾರೆ.
ಕನ್ಹಯ್ಯನನ್ನು ಭಗತ್‌ಸಿಂಗರಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್‌ರ ಹೇಳಿಕೆ ಹಾಗೂ ಅದು ಸೃಷ್ಟಿಸಿದ ವಿವಾದದ ಕುರಿತು ಪ್ರಶ್ನಿಸಿದಾಗ, ತಾನು ತರೂರ್‌ರೊಂದಿಗೆ ಸಹಮತ ಹೊಂದಿದ್ದೇನೆ. ಕನ್ಹಯ್ಯಿ ಭಗತ್ ಸಿಂಗರ ಸಿದ್ಧಾಂತ ಪಾಲಿಸುತ್ತಿದ್ದಾರೆ. ಸಮಾಜಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೆತ್ತುವ ಮೂಲಕ ಬೌದ್ಧಿಕವಾಗಿ ಹಾಗೂ ರಾಜಕೀಯವಾಗಿ ಒಳ್ಳೆಯ ಸಾಧನೆ ಮಾಡುತ್ತಿದ್ದಾರೆ. ಈ ರೀತಿ ಮಾಡಿ ರೋಹಿತ್ ಸಹ ಹುತಾತ್ಮರಾಗಿದ್ದಾರೆಂದು ಜಗಮೋಹನ್ ಹೇಳಿದ್ದಾರೆ.
ಮಾನವ ಹಕ್ಕು ಕಾರ್ಯಕರ್ತ ಹಾಗೂ ಭಗತ್‌ಸಿಂಗರ ಹೆಚ್ಚಿನ ಬರಹಗಳನ್ನು ಡಿಜಿಟೈಸ್ ಮಾಡಿರುವ ಅವರು, ‘ದೇಶದ್ರೋಹ ಕಾಯ್ದೆ ಹಾಗೂ ಸ್ವಾತಂತ್ರ ಹೋರಾಟ: ಭಗತ್ ಸಿಂಗ್‌ರ ಅಭಿಪ್ರಾಯ’ ಎಂಬ ವಿಷಯದ ಕುರಿತು ಜೆಎನ್‌ಯು ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡುವುದಕ್ಕಾಗಿ ಇಲ್ಲಿಗೆ ಬಂದಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News