ಮ್ಯಾನ್ಮಾರ್: ನೂತನ ಅಧ್ಯಕ್ಷರ ಪ್ರಮಾಣ ವಚನ
Update: 2016-03-30 23:52 IST
ನೇಪ್ಯಿಡೋ (ಮ್ಯಾನ್ಮಾರ್), ಮಾ. 30: ಮ್ಯಾನ್ಮಾರ್‌ನ ಪ್ರಜಾಪ್ರಭುತ್ವ ಹೋರಾಟಗಾರ್ತಿ ಆಂಗ್ ಸಾನ್ ಸೂ ಕಿ ಅವರ ನಿಕಟವರ್ತಿ ಹಟಿನ್ ಕ್ಯಾವ್ ಬುಧವಾರ ಮ್ಯಾನ್ಮಾರ್‌ನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.
ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸೂ ಕಿ ಅವರ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಭಾರೀ ಬಹುಮತದೊಂದಿಗೆ ವಿಜಯಿಯಾಗಿತ್ತು. ಸುದೀರ್ಘ ಪ್ರಕ್ರಿಯೆಯ ಬಳಿಕ ಇದೀಗ ಸೇನಾ ಸರಕಾರ ನೂತನ ಚುನಾಯಿತ ಸರಕಾರಕ್ಕೆ ಅಧಿಕಾರವನ್ನು ಹಸ್ತಾಂತರಿಸಿದೆ.
ಎನ್‌ಎಲ್‌ಡಿಯು ಶೇ.80ರಷ್ಟು ಸ್ಥಾನಗಳನ್ನು ಗೆದ್ದಿದೆ.
ಪಕ್ಷದ ನಾಯಕಿ ಸೂ ಕಿ ಅಧ್ಯಕ್ಷೆಯಾಗದಂತೆ ಸೇನಾ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದಿತ್ತು.
ಹಾಗಾಗಿ, ಈಗ ಸೂ ಕಿ ತನ್ನ ಆಪ್ತನ ಮೂಲಕ ದೇಶವನ್ನು ಆಳಲು ಸಿದ್ಧರಾಗಿದ್ದಾರೆ. ಅವರನ್ನು ಈಗಾಗಲೇ ದೇಶದ ವಿದೇಶ ವ್ಯವಹಾರಗಳ ಸಚಿವೆಯಾಗಿ ನೇಮಸಿಲಾಗಿದೆ.