×
Ad

ಸಾಕ್ಷಿ ಸಾವು: ಆಸಾರಾಂ ಸಹಚರರಿಗೆ ಜಾಮೀನು ರಹಿತ ವಾರಂಟ್

Update: 2016-03-30 23:54 IST

ಶಹಜಹಾನ್‌ಪುರ (ಉತ್ತರಪ್ರದೇಶ), ಮಾ.30: ಸ್ವಯಂಘೋಷಿತ ದೇವಮಾನವ ಅಸಾರಾಂಜಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಮುಖ್ಯ ಸಾಕ್ಷಿಯಾಗಿದ್ದ ವ್ಯಕ್ತಿಯ ಹತ್ಯೆ ಸಂಬಂಧ ಅಸಾರಾಂ ಅವರ ಇಬ್ಬರು ಸಹಚರರಿಗೆ ಇಲ್ಲಿನ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಸಂಜಯ್ ಮಿಶ್ರಾ ಅವರು ಅಹ್ಮದಾಬಾದ್‌ನ ಅರ್ಜುನ್ ಮೂಲಚಾಂದನಿ ಮತ್ತು ರಾಹುಲ್ ಎಂಬವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ಪೊಲೀಸ್ ಅಧೀಕ್ಷಕ ಮನೋಜ್ ಕುಮಾರ್ ಹೇಳಿದ್ದಾರೆ. ಅಸಾರಾಂ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಕೃಪಾಲ್ ಸಿಂಗ್ ಅವರ ಮೇಲೆ ಕಳೆದ ವರ್ಷದ ಜುಲೈ 10ರಂದು ಗುಂಡಿನ ದಾಳಿ ನಡೆಸಲಾಗಿತ್ತು. ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದರು.
ಶಹಜಹಾನ್‌ಪುರ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸಿ, ಅಸಾರಾಂ ಅವರ ಹತ್ತು ಮಂದಿ ಸಹಚರರ ಕೈವಾಡವಿದೆ ಎಂದು ಹೇಳಿದ್ದರು. ಜೈಲಿನಲ್ಲಿರುವ ಅಸಾರಾಂಜಿಯವರ ಹಣಕಾಸು ನಿರ್ವಹಿಸುತ್ತಿದ್ದ ಮೂಲಚಾಂದನಿ ಅವರು ಸಿಂಗ್ ಹತ್ಯೆಗೆ ಕಾರ್ತಿಕ್ ಹಲ್ದಾರ್ ಎಂಬಾತನಿಗೆ 15 ಲಕ್ಷ ರೂಪಾಯಿ ಕೊಟ್ಟಿದ್ದ ಎಂದು ಎಸ್ಪಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News