ಇಂದು ಮಳ್‌ಹರ್ ಸ್ವಲಾತ್ ಮಜ್ಲಿಸ್

Update: 2016-03-30 18:59 GMT

ಮಂಜೇಶ್ವರ, ಮಾ.30: ಮಳ್‌ಹರ್ ನೂರುಲ್ ಇಸ್ಲಾಮಿತ್ತಅ್ಲೀಮಿಯ ಅಧೀನದಲ್ಲಿ ನಡೆಯುವ ಮಾಸಿಕ ಸ್ವಲಾತ್ ಮಜ್ಲಿಸ್ ಮಾ.31ರಂದು ಮಗ್ರಿಬ್ ನಮಾಝಿನ ಬಳಿಕ ಮಳ್‌ಹರ್ ಅಲ್-ಬುಖಾರಿ ಕಾಂಪೌಂಡಿನಲ್ಲಿ ನಡೆಯಲಿದೆ. ಸೈಯದ್ ಅಬ್ದುರಹ್ಮಾನ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿ, ಸೈಯದ್ ಅಬ್ದುರಹ್ಮಾನ್ ಶಹೀರ್ ಅಲ್ ಬುಖಾರಿ ಕಡಲುಂಡಿ ನೇತೃತ್ವದಲ್ಲಿ ಮುಳ್ಳೂರ್‌ಕರ ಮುಹಮ್ಮದಲಿ ಸಖಾಫಿ ಮುಖ್ಯಭಾಷಣ ಮಾಡುವರು. ಅಪರಾಹ್ನ ಮಹಿಳಾ ತರಬೇತಿ ಹಾಗೂ ಅತ್ಮೀಯ ಸಂಗಮ ನಡೆಯಲಿದೆ.
ಶರಫುಲ್ ಉಲಮಾ ಮಂಜನಾಡಿ ಅಬ್ಬಾಸ್ ಉಸ್ತಾದರಿಗೆ ಗೌರವ ಸಮರ್ಪಣೆ ನಡೆಯಲಿದೆ. ಸೈಯದ್ ಅಹ್ಮದ್ ಜಲಾಲು ದ್ದೀನ್ ಸಅದಿ ಅಲ್ ಬುಖಾರಿ, ಸೈಯದ್ ಅಲವಿ ಜಲಾಲುದ್ದೀನ್ ಅಲ್ ಹಾದಿ ಉಜಿರೆ, ಮುಹಮ್ಮದ್ ಸ್ವಾಲಿಹ್ ಸಅದಿ ತಳಿಪರಂಬು, ಬಿ.ಎಸ್. ಅಬ್ದುಲ್ಲ ಕುಂಞಿ ಫೈಝಿ, ಸಿ.ಅಬ್ದುಲ್ಲ ಮುಸ್ಲಿಯಾರ್ ಉಪ್ಪಳ, ಪಲ್ಲಂಗೋಡು ಅಬ್ದುಲ್ ಖಾದಿರ್ ಮದನಿ, ಮೂಸಲ್ ಮದನಿ ಅಲ್‌ಬಿಶಾರ, ಮುಹಮ್ಮದ್ ಸಖಾಫಿ ಪಾತೂರು, ಉಸ್ಮಾನ್ ಹಾಜಿ ಮಳ್‌ಹರ್, ಹಸನ್ ಸಅದಿ ಅಲ್ ಅಫ್‌ಳಲಿ, ಅನಸ್ ಸಿದ್ದೀಖಿ ಅಲ್ ಕಾಮಿಲಿ ಸಿರಿಯಾ, ಕೆ.ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಅಬೂಬಕರ್ ಸಿದ್ದೀಕ್ ಸಅದಿ ತೌಡುಗೋಳಿ, ಇಬ್ರಾಹೀಂ ಖಲೀಲ್ ಅಹ್‌ಸನಿ, ಹಸನ್ ಕುಂಞಿ ಭಾಗವಹಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News