ಗೂಗಲ್ ನಮ್ಮನ್ನು ಎಪ್ರಿಲ್ ಫೂಲ್ ಮಾಡಿತೇ?
ನ್ಯೂಯಾರ್ಕ್ :ಇಂಟರ್ನೆಟ್ ದೈತ್ಯ ಗೂಗಲ್ ಕೂಡ ತನ್ನ ಬಳಕೆದಾರರನ್ನು ಎಪ್ರಿಲ್ ಫೂಲ್ ಗೊಳಿಸುವಲ್ಲಿ ಯಶಸ್ವಿಯಾಯಿತೇ? ಹಾಗೊಂದು ಪ್ರಶ್ನೆ ಈಗ ಎದ್ದಿದೆ.
ಇಂದು ಬೆಳಿಗ್ಗೆ ಗೂಗಲ್ ಮೇಲ್ ಮುಖಾಂತರ ಮೇಲ್ ಕಳುಹಿಸಲು ತಯಾರಾದವರಿಗೆಲ್ಲಾ ಒಂದು ಆಶ್ಚರ್ಯ ಕಾದಿತ್ತು. ಅದೇನೆಂದರೆ ಸೆಂಡ್ ಚಿಹ್ನೆಯ ಬಳಿ ಇನ್ನೊಂದು ಕೇಸರಿ ಬಣ್ಣದ ಚಿಹ್ನೆಯಿತ್ತು. ಅದರಲ್ಲಿ ‘ಸೆಂಡ್ + ಡ್ರಾಪ್ ದಿ ಮೈಕ್’ ಎಂದು ಬರೆದಿತ್ತು.ಇದೇನೆಂದರೆ ಅನಗತ್ಯ ಸಂದೇಶಗಳು ಮತ್ತೆ ಬರದಂತೆ ತಡೆಯುವ ಫೀಚರ್. ಆದರೆ ನೆಕ್ಸ್ಟ್ ವೆಬ್ ಪ್ರಕಾರ ಇದು ಎಪ್ರಿಲ್ ಫೂಲ್ ದಿನದ ತಮಾಷೆಯಲ್ಲದೆ ಮತ್ತಿನ್ನೇನಲ್ಲ.
‘‘ಈ ವರ್ಷ ನಾವು ನಮ್ಮನ್ನೇ ಫೂಲ್ ಮಾಡಿಕೊಂಡೆವೇನೋ ಎಂದೆನಿಸುತ್ತದೆ. ಒಂದು ಬಗ್ ನಿಂದಾಗಿ ಮೈಕ್ ಡ್ರಾಪ್ ಫೀಚರ್ ಚೆನ್ನಾಗಿ ಕೆಲಸ ಮಾಡದೆ ತಲೆ ನೋವು ತಂದಿತು. ಇದಕ್ಕಾಗಿ ನಾವು ವಿಷಾದಿಸುತ್ತೇವೆ. ಈ ಫೀಚರನ್ನು ತೆಗೆದು ಃಆಖಲಾಗಿದೆ.ನೀವು ಇನ್ನೂ ನಿಮ್ಮ ಜಿಮೇಲ್ ಪೇಜಿನಲ್ಲಿ ಈ ಫೀಚರನ್ನು ಇನ್ನೂ ನೋಡುತ್ತಿದ್ದೀರಾದರೆ ಪೇಜನ್ನು ರಿಲೋಡ್ ಮಾಡಿ,’’ಎಂದು ಕಂಪೆನಿ ತನ್ನ ಅಧಿಕೃತ ಬ್ಲಾಗಿನಲ್ಲಿ ಹೇಳಿಕೊಂಡಿದೆ.
ಜಿಮೇಲ್ ಮೈಕ್ ಡ್ರಾಪ್ ಫೀಚರನ್ನು ಗೂಗಲ್ ಮೊದಲು ವೆಬ್‌ನಲ್ಲಿ ಪ್ರಸ್ತುತ ಪಡಿಸುವ ಇರಾದೆ ಹೊಂದಿದ್ದರೂ ಮೊಬೈಲ್ ಅಪ್‌ಡೇಟುಗಳು ಸದ್ಯದಲ್ಲಿಯೇ ಲಭ್ಯವಾಗಲಿವೆ.