ನೈಜೀರಿಯಾದ ಪುಟ್ಟ ಮಗುವೊಂದರ ಪವಾಡಸದೃಶ ಚೇತರಿಕೆ

Update: 2016-04-01 12:28 GMT

ನೈಜೀರಿಯಾ : ಜನವರಿ ತಿಂಗಳಲ್ಲಿ ನೈಜೀರಿಯಾದ ರಸ್ತೆಗಳಲ್ಲಿ ಅಲೆಯುತ್ತಿದ್ದ ಎರಡು ವರ್ಷದ ಪುಟ್ಟ ಮಗುವೊಂದರ ದೇಹ ಅದೆಷ್ಟು ಕೃಶವಾಗಿತ್ತೆಂದರೆ ಆತನ ಮೈಯಲ್ಲಿ ಹುಳಗಳೆದಿದ್ದವು. ಈ ಮಗು ಒಬ್ಬ ಮಾಟಗಾರನೆಂದು ಬಗೆದ ಹೆತ್ತವರು ಅದನ್ನು ರಸ್ತೆಯಲ್ಲಿ ಸಾಯಲು ಬಿಟ್ಟಿದ್ದರು. ಆದರೆ ಆ ಮಗುವಿನ ಅದೃಷ್ಟ ಚೆನ್ನಾಗಿತ್ತು.

ಆತನನ್ನು ಜನವರಿ 31ರಂದು ದಯನೀಯ ಸ್ಥಿತಿಯಲ್ಲಿ ನೋಡಿದ ಆಫ್ರಿಕಾದಲ್ಲಿ ವಾಸಿಸುವ ಡೆನ್ಮಾರ್ಕಿನ ಸಮಾಜ ಸೇವಾ ಕಾರ್ಯಕರ್ತೆ ಅಂಜಾ ರಿಂಗ್ರೆನ್ ಲೋವೆನ್ ಮಗುವನ್ನು ರಕ್ಷಿಸಿ ಕರೆದುಕೊಂಡು ಹೋಗಿದ್ದರು. ಕೆಲವೇ ಕೆಲವು ವಾರಗಳಲ್ಲಿ ಮಗು ಅದೆಷ್ಟು ಚೇತರಿಸಿಕೊಂಡಿತೆಂದರೆ ಈಗ ಆತ ದಷ್ಟಪುಷ್ಟವಾಗಿ ಬೆಳೆದು ಬಿಟ್ಟಿದ್ದಾನೆ.

ಆತನಿಗೊಂದು ಒಳ್ಳೆಯ ಹೆಸರನ್ನೂ ನೀಡಲಾಗಿದೆ ‘ಹೋಪ್.’ ಜನವರಿಯಲ್ಲಿ ಈ ಕೃಶ ದೇಹದ ಮಗುವಿಗೆ ತಾನು ನೀರುಣಿಸುತ್ತಿರುವ ಫೊಟೋವೊಂದನ್ನು ಬಿಡುಗಡೆ ಮಾಡಿದ್ದ ಅಂಜಾ ಈಗ ಸಂಪೂರ್ಣವಾಗಿ ಚೇತರಿಸಿ ಆರೋಗ್ಯದಿಂದಿರುವ ಮಗುವಿನ ಭಾವಚಿತ್ರವನ್ನು ಶೇರ್ ಮಾಡಿ ‘ಆತ ಜೀವನವನ್ನು ಆಸ್ವಾದಿಸುತ್ತಿದ್ದಾನೆ’ ಎಂದು ಹೇಳಿದ್ದಾರೆ.

 

 
 

Courtesy : Daily Mail

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News