×
Ad

ಮುಸ್ಲಿಂ ಕುಟುಂಬವನ್ನು ವಿಮಾನದಿಂದ ಕೆಳಗಿಳಿಸಿದ ಯುನೈಟೆಡ್ ಏರ್‌ಲೈನ್ಸ್ ಪೈಲಟ್

Update: 2016-04-02 13:53 IST

ನ್ಯೂಯಾರ್ಕ್ : ‘ಸುರಕ್ಷಾ’ ಕಾರಣಗಳಿಗಾಗಿಐದು ಮಂದಿ ಸದಸ್ಯರ ಮುಸ್ಲಿಂ ಕುಟುಂಬವೊಂದನ್ನು ಯುನೈಟೆಡ್ ಏರ್‌ಲೈನ್ಸಿನ ಪೈಲಟ್ ವಿಮಾನದಿಂದ ಕೆಳಗಿಳಿಯುವಂತೆ ಹೇಳಿದ ಘಟನೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಚಿಕಾಗೋ ವಿಮಾನ ನಿಲ್ದಾಣದಿಂದ ವಾಷಿಂಗ್ಟನ್ ನಗರಕ್ಕೆ ತೆರಳಲಿದ್ದ ಯುನೈಟೆಡ್ ಏರ್‌ಲೈನ್ಸ್ ವಿಮಾನವೇರಿದ್ದ ಈಮಾನ್-ಏಮಿ ಸಾದ್ ಶೆಬ್ಲೀ, ಆಕೆಯ ಪತಿ ಹಾಗೂ ಮೂವರುಚಿಕ್ಕ ಮಕ್ಕಳನ್ನು ಆ ಕುಟುಂಬವಿಮಾನ ಪರಿಚಾರಿಕೆಯ ಹತ್ತಿರ ಐದು ಪಾಯಿಂಟಿನಸೇಫ್ಟಿ ಸೀಟನ್ನು ತಮ್ಮ ಮಕ್ಕಳಿಗಾಗಿ ಕೇಳಿದ ನಂತರಪೈಟ್ ಅವರನ್ನು ವಿಮಾನದಿಂದ ಕೆಳಗಿಳಿಯುವಂತೆ ಹೇಳಿದನೆನ್ನಲಾಗಿದೆ.ಈ ಬಗ್ಗೆ ಶೆಬ್ಲೀ ಚಿತ್ರೀಕರಿಸಿದ ಎರಡು ವೀಡಿಯೋಗಳು ಒಂದರಲ್ಲಿ ವಿಮಾನ ಪರಿಚಾರಿಕೆ ಹಾಗೂ ಇನ್ನೊಂದರಲ್ಲಿ ಪೈಲಟ್ ಅವರನ್ನು ಕೆಳಗಿಳಿಯಲು ಸೂಚಿಸುವುದನ್ನು ತೋರಿಸುತ್ತಿದೆ.

ಶೆಬ್ಲೀ ಈ ಬಗ್ಗೆ ಫೇಸ್‌ಬುಕ್‌ನಲ್ಲೂ ಹೇಳಿಕೊಂಡಿದ್ದು ಇದು ನಾಚಿಕೆಗೇಡಿನ ವಿಷಯವೆಂದಿದ್ದಾರೆ.

ಶೆಬ್ಲೀಪೈಲಟ್‌ನಲ್ಲಿ ಇದು ‘ತಾರತಮ್ಯದ’ ನಿರ್ಧಾರವೇ ಎಂದು ಕೇಳಿದಾಗಆತ ‘ಇದು ವಿಮಾನ ಸುರಕ್ಷತಾ ವಿಷಯ’ ಎಂದು ಹೇಳಿದನೆನ್ನಲಾಗಿದೆ. ವಿಮಾನ ಸಿಬ್ಬಂದಿ ವಿರುದ್ಧಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿಕೌನ್ಸಿಲ್ ಆನ್ ಅಮೆರಿಕನ್ -ಇಸ್ಲಾಮಿಕ್ ರಿಲೇಶನ್ಸ್ ಯುನೈಟೆಡ್ ಏರ್‌ಲೈನ್ಸ್‌ಗೆ ಪತ್ರ ಬರೆದಿದ್ದು ‘ಮುಸ್ಲಿಮರಂತೆ ಕಾಣುವ ಪ್ರಯಾಣಿಕರನ್ನು ಕ್ಷುಲ್ಲಕ ಕಾರಣಗಳಿಗಾಗಿ ವಿಮಾಣಗಳಿಂದ ‘ಸುರಕ್ಷಾ’ ಕಾರಣಗಳಿಗಾಗಿ ಕೆಳಗಿಳಿಸುವುದುನ್ನುಕೇಳಿ ಸಾಕಾಗಿ ಹೋಗಿದೆ,’’ಎಂದು ಕೌನ್ಸಿಲ್ಲಿನ ಕಾರ್ಯನಿರ್ವಾಹಕ ನಿರ್ದೇಶಕಅಹಮದ್ ರೆಹಾಬ್ ತಿಳಿಸಿದ್ದಾರೆ.

ಫೆಡರಲ್ ಸುರಕ್ಷಾ ನಿಯಮಾವಳಿಗೆ ಅನುಗುಣವಾಗಿ ಮಕ್ಕಳ ಸುರಕ್ಷಾ ಸೀಟುಗಳಿಲ್ಲದ ಕಾರಣದಿಂದ ಮಕ್ಕಳ ಸುರಕ್ಷಾ ದೃಷ್ಟಿಯಿಂದ ಕುಟುಂಬವನ್ನು ಬೇರೊಂದು ವಿಮಾನದಲ್ಲಿ ನಂತರ ಕಳುಹಿ ಸಲಾಯಿತೆಂದು ಬರ್ ಫೀಡ್ ನ್ಯೂಸ್‌ಗೆ ನೀಡಿದ ಹೇಳಿಕೆಯೊಂದರಲ್ಲಿ ಯುನೈಟೆಡ್ ಏರ್‌ಲೈನ್ಸ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News