ಮಧ್ಯಪ್ರದೇಶದಲ್ಲಿ ಬಡತನದಿಂದಾಗಿ ಹೆತ್ತವರಿಂದಲೇ ಮಕ್ಕಳ ಮಾರಾಟ!
ಭೋಪಾಲ, ಎಪ್ರಿಲ್.2: ಮಧ್ಯಪ್ರದೇಶದ ಸರಕಾರ ಒಂದು ಕಡೆ ಹೆಪ್ಪಿನೆಸ್ ಸಚಿವಾಲಯ ರೂಪಿಸುವುದಾಗಿ ಘೋಷಿಸುತ್ತಿದೆ. ಇನ್ನೊಂದು ಕಡೆ ಜನರು ತಮ್ಮ ಮಕ್ಕಳನ್ನು ಮಾರಲು ನಿರ್ಬಂಧಿಸಲ್ಪಡುತ್ತಿದ್ದಾರೆ. ಹೀಗೆ ತಮ್ಮ ಮಾರಿದ್ದಲ್ಲಿಂದ ಇಬ್ಬರು ಮಕ್ಕಳು ತಪ್ಪಿಸಿಕೊಂಡು ಉತ್ತರ ಪ್ರದೇಶಕ್ಕೆ ಓಡಿಬಂದಿದ್ದಾರೆ. ಅವರು ಮಧ್ಯಪ್ರದೇಶದ ಶಿವಪುರಿ ಮತ್ತು ಗುಣಾಜಿಲ್ಲೆಯ ನಿವಾಸಿಗಳಾಗಿದ್ದು ಇವರನ್ನು ತಂದೆ ತಾಯಂದಿರೇ ಮೂರು ಸಾವಿರ ರೂಪಾಯಿಗೆ ಗಿರವಿ ಇಟ್ಟಿದ್ದರೆಂದು ವರದಿಗಳು ತಿಳಿಸಿವೆ.
ಗುಣಾ ಜಿಲ್ಲೆಯ ಪಿಪರಿಯ ನಿವಾಸಿ ಕಾಶಿರಾಮ್(12) ಮತ್ತು ಶಿವಪುರಿ ಕನೆರಾ ಚಪರಾ ನಿವಾಸಿಮುಖೇಶ್( 12) ಝಾನ್ಸಿ ಜಿಲ್ಲೆಯ ಸಿಪರಾ ಠಾಣೆ ವ್ಯಾಪ್ತಿಯ ಚಂದ್ರಪುರ ಗ್ರಾಮದಲ್ಲಿ ಅಲೆದಾಡುತ್ತಿದ್ದರು. ಇಬ್ಬರು ಮಕ್ಕಳನ್ನು ನಗರ ನ್ಯಾಯಾಧೀಶ ಆರ್.ಪಿ. ಮಿಶ್ರಾರು ಜಿಲ್ಲಾ ಪ್ರೊಬೇಶನ್ ಅಧಿಕಾರಿ(ಡಿಪಿಒ) ರಾಜೇಶ್ ಶರ್ಮರ ಮೂಲಕ ಚಿಲ್ಡ್ರನ್ ಹೆಲ್ಫ್ ಲೈನ್‌ಗೆ ಒಪ್ಪಿಸಿದ್ದಾರೆ. ಈ ಇಬ್ಬರು ಮಕ್ಕಳನ್ನು ಅವರ ತಂದೆತಾಯಿ ಒಬ್ಬ ದಲ್ಲಾಳಿಯ ಮೂಲಕ ಮೂರು ಸಾವಿರ ರೂಪಾಯಿ ತಿಂಗಳಿಗೆ ನೀಡುವಂತೆ ರಾಜಸ್ಥಾನದ ಒಬ್ಬ ವ್ಯವಹಾರಸ್ಥನಿಗೆ ಮಾರಿದ್ದರು. ಈ ಬಾಲಕರು ಕುರಿಗಾಹಿಗಳಾಗಿ ಕೆಲಸ ಮಾಡುತ್ತಿದ್ದರು.
ಆದರೆ ಅವರಿಗೆ ಸರಿಯಾಗಿ ಊಟಹಾಕುತ್ತಿರಲಿಲ್ಲ. ಆದ್ದರಿಂದ ಅಲ್ಲಿಂದ ತಪ್ಪಿಸಿಕೊಂಡು ಝಾನ್ಸಿಗೆ ಓಡಿ ಬಂದಿದ್ದರೆಂದು ವರದಿಯಾಗಿದೆ. ಮಕ್ಕಳನ್ನು ಪ್ರಶ್ನಿಸಿದಾಗ ಆಶ್ಚರ್ಯಕಾರಿ ಮಾಹಿತಿಗಳು ಲಭಿಸಿದವು. ಮಕ್ಕಳ ತಂದೆತಾಯರನ್ನು ಕರೆಯಿಸಿ ವಿಚಾರಿಸಿದಾಗ ಕಾಶಿರಾಮ್‌ನ ತಂದೆ ಬಡತನದಿಂದಾಗಿ ಇಬ್ಬರ ಮಕ್ಕಳನ್ನು ಮಾರಿದ್ದನ್ನು ಒಪ್ಪಿಕೊಂಡರು ಎಂದು ತಿಳಿದು ಬಂದಿದೆ. ಅವರ ಪುತ್ರ ಕಾಶಿರಾಂ ಪರಾರಿಯಾಗಲು ಯಶಸ್ವಿಯಾದರೂ ಇನ್ನೊಬ್ಬ ಪುತ್ರ ಅಲ್ಲಿ ಈಗಲೂ ಇದ್ದಾನೆ.
ಮುಖೇಶನ ಕತೆ ಕೂಡಾ ಕಾಶಿರಾಂನಂತೆಯೆ ಇದೆ. ಅವನ ತಂದೆ ಅವನನ್ನು ಗಿರವಿ ಇರಿಸಿದ್ದ. ಅವನ ತಂದೆ ಹರಿಸಿಂಗ್ ಕೂಲಿಕೆಲಸ ಮಾಡುವ ಬಡಪಾಯಿಯಾಗಿದ್ದು ಅವು ತನ್ನ ಬಡತನದ ಕುರಿತು ಚೈಲ್ಡ್ ಲೈನ್‌ನೊಡನೆ ಅಲವತ್ತುಕೊಂಡಿದ್ದಾನೆ. ಇಬ್ಬರ ತಂದೆಯಂದಿರು ಅಚೀಚಿನ ಕೆಲವು ಗ್ರಾಮದಲ್ಲಿ ಮಕ್ಕಳನ್ನು ಮೂರು ಸಾವಿರದಿಂದ ಐದು ಸಾವಿರವರೆಗೆ ಪ್ರತಿ ತಿಂಗಳು ನೀಡುವ ಒಡಂಬಡಿಕೆಯಲ್ಲಿ ಕುರಿವ್ಯವಹಾರ ಮಾಡುವವರಿಗೆ ಕೊಟ್ಟು ಬಿಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಒಬ್ಬ ಏಜೆಂಟ್ ಅಲ್ಲಿ ಈ ವ್ಯವಹಾರವನ್ನು ಕುದುರಿಸುತ್ತಾನೆಂದು ಅವರಿಬ್ಬರೂ ಚೈಲ್ಡ್ ಲೈನ್ ಮುಂದೆ ಹೇಳಿದ್ದಾರೆ.
ಇದಕ್ಕೆ ಮೊದಲು ಹರ್ದಾ ಜಿಲ್ಲೆಯಲ್ಲಿ ಇಂತಹ ಇಬ್ಬರು ಮಕ್ಕಳು ದೊರಕಿದ್ದರು. ಅವರನ್ನು ಕೂಡಾ ಅವರ ತಂದೆತಾಯಂದಿರು ಮಾರಿದ್ದರು. ಕುರಿಕಾಯಲಿಕ್ಕಾಗಿ ಅದರ ಮಾಲಕರಿಗೆ ಅವರನ್ನು ಗಿರವಿ ಇಡಲಾಗಿತ್ತು. ಮಧ್ಯಪ್ರದೇಶದಲ್ಲಿ ಮಳೆಯಾಗದಿರುವುದರಿಂದ ಬರಪರಿಸ್ಥಿತಿ ನೆಲೆಸಿದ್ದು ಇಲ್ಲಿನ 43 ಜಿಲ್ಲೆಗಳಲ್ಲಿ 268 ಗ್ರಾಮಗಳು ಬರಗ್ರಸ್ತವಾಗಿದೆಯೆಂದು ಘೋಷಿಸಲಾಗಿದೆ. ಹೊಲ ಬತ್ತಿಹೋಗಿದ್ದು ಕೂಲಿನಾಲಿ ಗೆ ಅವರೀಗ ರೊಟ್ಟಿ ಸಂಪಾದಿಸಲಿಕ್ಕಾಗಿ ತಮ್ಮ ಮಕ್ಕಳನ್ನೇ ಪಕ್ಕದ ರಾಜಸ್ಥಾನ ಮುಂತಾದೆಡೆಗೆ ಮಾರುತ್ತಿದ್ದಾರೆಂದು ವರದಿಗಳು ತಿಳಿಸಿವೆ. ಬುಂದೇಲ್ ಖಂಡ್‌ನ ಹಸಿವು ಸಮಸ್ಯೆಯ ಕುರಿತು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸರಕಾರಕ್ಕೆ ನೋಟಿಸು ಕೂಡ ನೀಡಿದೆ ಎಂದು ವರದಿಯಾಗಿದೆ.