ಬ್ರೆಝಿಲ್: ಮಹಿಳಾ ಜಡ್ಜ್‌ನ್ನು ಜೀವಂತ ಸುಡಲು ಪ್ರಯತ್ನಿಸಿದ ಪತಿ
ಸಾವೊಪಾವ್ಲೊ, ಎಪ್ರಿಲ್.2: ಬ್ರೆಝಿಲ್‌ನ ನಗರವಾದ ಸಾವೊಪಾವ್ಲೊದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿ ಒರ್ವ ಮಹಿಳಾ ನ್ಯಾಯಾಧೀಶೆಯನ್ನು ಒಬ್ಬ ವ್ಯಕ್ತಿ ಕೋರ್ಟ್‌ರೂಮ್‌ನಲ್ಲಿ ಬಂಧಿಯಾಗಿರಿಸಿ ತನ್ನನ್ನು ನಿರ್ದೋಷಿಯೆಂದು ಘೋಷಿಸದಿದ್ದರೆ ಜೀವಂತ ಸುಟ್ಟು ಹಾಕುವುದಾಗಿ ಬೆದರಿಸಿದ್ದಾನೆಂದು ಮಾಧ್ಯಮಗಳಲ್ಲಿ ವರದಿಯಾಗಿವೆ.
ಘಟನೆಗೆ ಸಂಬಂಧಿಸಿದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾದ್ಯಮಗಳ ವರದಿಯ ಪ್ರಕಾರ ಆರೋಪಿಯೊಬ್ಬ ನ್ಯಾಯಾಧೀಶೆಯ ಮೇಲೆ ಪೆಟ್ರೋಲ್ ಸಿಂಪಡಿಸಿದ. ನಂತರ ಲೈಟರ್‌ನ್ನು ಉರಿಸಿ ಜೀವಂತ ಸುಟ್ಟುಹಾಕುವ ಬೆದರಿಕೆಯೊಡ್ಡಿದ್ದಾನೆ. ಮೂವತ್ತಾರು ವರ್ಷದ ಈ ವ್ಯಕ್ತಿಯನ್ನು ಆಲ್ಫ್ರೆಡ್ ಜೋಸ್ ದೋಸ್ ಸೈಟೋಸ್ ಎಂದು ಗುರುತಿಸಲಾಗಿದೆ. ಆತನಿಂದ ಪೀಡನೆಗೀಡಾದ ಮಹಿಳಾ ನ್ಯಾಯಾಧೀಶೆ ಟಾಟಿಯಾನಿ ಮೊರಿರಾ ಲಿಮಾ ಆಗಿದ್ದು ಆರೋಪಿಯ ವಿರುದ್ಧ ಗೃಹ ಹಿಂಸೆ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗಲಿತ್ತು ಎಂದು ವರದಿಗಳು ತಿಳಿಸಿವೆ. ವಿಚಾರಣೆ ಆರಂಭಿಸುವ ಮೊದಲು ಈ ದುಷ್ಕೃತ್ಯಕ್ಕೆ ಕೋರ್ಟ್ ಕೋಣೆಯನ್ನೇ ಬಳಸಿಕೊಂಡ ಎಂದು ವರದಿಯಾಗಿದೆ. ತನ್ನ ಮೊಣಕಾಲಿನಲ್ಲಿ ನ್ಯಾಯಾಧೀಶೆಯನ್ನು ಒತ್ತಿ ಹಿಡಿದು ತನ್ನನ್ನು ನಿರ್ದೋಷಿ ಎಂದು ಘೋಷಿಸಲು ಅತ ಒತ್ತಡ ಹೇರಿದ್ದ ಮತ್ತು ಆತನ ಬೆದರಿಕೆಗೆ ಮಣಿದ ನ್ಯಾಯಾಧೀಶೆ ಆತನನ್ನು ನಿರ್ದೋಷಿ ಎಂದು ಘೋಷಿಸಿದ್ದರು ಎಂದು ವರದಿಗಳು ತಿಳಿಸಿವೆ.
ಈ ಇಡೀ ಘಟನೆ 20 ನಿಮಿಷಗಳ ಕಾಲ ನಡೆದಿತ್ತು. ಘಟನೆಯ ವೀಡಿಯೊವನ್ನು ಕರ್ತವ್ಯದಲ್ಲಿದ್ದ ಪೊಲೀಸನೊಬ್ಬ ಚಿತ್ರೀಕರಿಸಿದ್ದು ನಂತರ ಇತರ ಪೊಲೀಸರು ಸೇರಿ ದುಷ್ಕರ್ಮಿಯನ್ನು ತಮ್ಮ ಹತೋಟಿಗೆ ಪಡೆದರು ಎಂದು ವರದಿಗಳು ವಿವರಿಸಿವೆ. ದುಷ್ಕರ್ಮಿಸೈಟೊಸ್ ಬ್ರಝಿಲ್‌ನ ಮೊದಲ ಸುಸೈಡ್ ದಾಳಿಕಾರನಾಗಲು ಬಯಸುತ್ತಿದ್ದ ಹಾಗೂ ಅವನ ಬ್ಯಾಗ್‌ನಲ್ಲಿ ಜ್ವಲನಶೀಲ (ಉರಿಯುವಂತ) ವಸ್ತುಗಳಿದ್ದವು ಎಂದೂ ವರದಿ ವಿವರಿಸಿವೆ.