ಆಸ್ತಿ ತೆರಿಗೆ ಪಾವತಿಸಲು ಸೂಚನೆ

Update: 2016-04-02 19:00 GMT

ಉಡುಪಿ, ಎ.2: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಟ್ಟಡಗಳ ಮತ್ತು ಕೃಷಿಯೇತರ ನಿವೇಶನಗಳ ಮಾಲಕರು/ ಅನುಭೋಗದಾರರು 2016-17ನೆ ಸಾಲಿನ ಆಸ್ತಿ ತೆರಿಗೆಯನ್ನು ಎ.30ರೊಳಗೆ ಪಾವತಿಸಿದಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಂತೆ ಶೇ.5 ರಿಯಾಯಿತಿ ಲಭಿಸಲಿದೆ. ಎಲ್ಲಾ ತೆರಿಗೆದಾರರು ನಿಗದಿತ ಅವಧಿಯೊಳಗೆ ಆಸ್ತಿ ತೆರಿಗೆ ಪಾವತಿಸಿ ರಿಯಾಯಿತಿ ಪಡೆಯುವಂತೆ ಹಾಗೂ 2015-16ನೆ ಸಾಲಿನವರೆಗೆ ಪಾವತಿಸದೆ ಬಾಕಿ ಇರುವವರು ದಂಡ ಸಮೇತ ಕೂಡಲೇ ತೆರಿಗೆ ಪಾವತಿಸುವಂತೆ ಉಡುಪಿ ನಗರಸಭಾ ಪೌರಾಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News