×
Ad

ಜಮ್ಮುಕಾಶ್ಮೀರ: ಮುಖ್ಯಮಂತ್ರಿಯಾಗಿ ಇಂದು ಮೆಹಬೂಬ ಪ್ರಮಾಣ ವಚನ

Update: 2016-04-03 23:56 IST

ಶ್ರೀನಗರ/ಜಮ್ಮು, ಎ.3: ಜಮ್ಮುಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರು ಸೋಮವಾರ ಅಧಿಕಾರವನ್ನು ಸ್ವೀಕರಿಸಲಿದ್ದಾರೆ. ಇದರ ಜೊತೆಗೆ ದೇಶದ ಏಕೈಕ ಮುಸ್ಲಿಮ್ ಬಹುಸಂಖ್ಯಾತ ರಾಜ್ಯದಲ್ಲಿ ಬಿಜೆಪಿಯೊಂದಿಗಿನ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಲಿರುವ ದೇಶದ ಮೊದಲ ಮುಸ್ಲಿಮ್ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯೂ ಅವರದಾಗಲಿದೆ.

 ಬೆಳಗ್ಗೆ 11 ಗಂಟೆಗೆ ಜಮ್ಮುವಿನ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮೆಹಬೂಬ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News