ಅಳಕೆಮಜಲು: ಬುರ್ದಾ ಮಜ್ಲಿಸ್ ಹಾಗೂ ಮತ ಪ್ರಭಾಷಣ

Update: 2016-04-03 18:40 GMT

ವಿಟ್ಲ, ಎ.3: ಇಲ್ಲಿಗೆ ಸಮೀಪದ ಅಳಕೆಮಜಲು ಖ್ವಾಜಾ ಗರೀಬ್ ನವಾಝ್ ಮಿಲಾದ್ ಸಮಿತಿಯ ದಶಮಾನೋತ್ಸವದ ಪ್ರಯುಕ್ತ ಬುರ್ದಾ ಮಜ್ಲಿಸ್ ಹಾಗೂ ಮತ ಪ್ರಭಾಷಣ ಕಾರ್ಯಕ್ರಮವು ಅಳಕೆಮಜಲು ಜಂಕ್ಷನ್ ಬಳಿ ನಡೆಯಿತು.

ಕಾರ್ಯಕ್ರಮವನ್ನು ಅಳಕೆ ಮಜಲು ಐಎಂಐಎ ಅಧ್ಯಕ್ಷ ಹಾಜಿ ಮುಹಮ್ಮದ್ ಮುಸ್ಲಿಯಾರ್ ಅಲ್-ಖಾಸಿಮಿ ಉದ್ಘಾಟಿಸಿದರು. ಅಳಕೆ ಮಜಲು ಜುಮಾ ಮಸೀದಿ ಖತೀಬ್ ಎಸ್.ವೈ. ಮುಹಮ್ಮದ್ ಶರೀಫ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಕೇರಳ ಕೊಲ್ಲಂನ ಅಬ್ದುಲ್ ವಹಾಬ್ ನಹೀಮಿ ಮುಖ್ಯ ಭಾಷಣಗೈದರು. ಸೈಯದ್ ತ್ವಾಹಾ ಬಾಪಖಿ ತಂಙಳ್ ದುಆಶಿರ್ವಚನಗೈದರು.

ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್, ಎಸ್‌ಡಿಪಿಐ ಪುತ್ತೂರು ವಿಧಾನಸಬಾ ಕ್ಷೇತ್ರಾಧ್ಯಕ್ಷ ಕೆ.ಎ. ಸಿದ್ದೀಕ್ ಅಳಕೆಮಜಲು, ಮಾಜಿ ಖತೀಬ್ ಮುಹಮ್ಮದಲಿ ಕಾಮಿಲ್ ಸಖಾಫಿ ಮಾತನಾಡಿದರು. ಕೋಲ್ಪೆ ಮಸೀದಿ ಮುದರ್ರಿಸ್ ಅಬ್ದುರ್ರಹ್ಮಾನ್ ಸಅದಿ, ಮುಹಮ್ಮದ್ ತಂಙಳ್ ಕಬಕ, ಅಬ್ದುಲ್ ಖಾದರ್ ಮುಸ್ಲಿಯಾರ್ ಅಳಕೆಮಜಲು, ಸಲೀಂ ಸಅದಿ ಕಾರ್ಯಾಡಿ, ಅಝರ್ ಪಾಳಿಲಿ ಅಳಕೆಮಜಲು, ಕೊಳಂಬೆ ಮುದರ್ರಿಸ್ ಕಾಸಿಂ ಸಖಾಫಿ, ಪೇರಮೊಗರು ಮುದ ರ್ರಿಸ್ ಅಝೀಝ್ ಬಾಖವಿ, ಅಳಕೆ ಮಜಲು ಮಾಜಿ ಖತೀಬ್ ಸಅದಿ, ಮದ್ರಸ ಮುಖ್ಯ ಶಿಕ್ಷಕ ದಾವೂದ್ ಅಶ್ರಫಿ, ಶಿಕ್ಷಕರಾದ ಉಮ ರುಲ್ ಫಾರೂಕ್ ಹಿಮಾಮಿ, ರಫೀಕ್ ಸಅದಿ, ರವೂಫ್ ಸಖಾಫಿ, ಅಬ್ದುಲ್ ಖಾದರ್ ಝುಹ್‌ರಿ, ಮಸೀದಿ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಮಸ್ಕತ್, ಉಪಾಧ್ಯಕ್ಷ ರಝಾಕ್ ಹಾಜಿ, ಕಾರ್ಯದರ್ಶಿ ಅಶ್ರಫ್ ಕೆಜಿಎನ್, ಕೋಶಾಧಿಕಾರಿ ಕುಂಞಿ ಹಾಜಿ ಅರಿಪಕಟ್ಟೆ, ಮಾಜಿ ಅಧ್ಯಕ್ಷರಾದ ಎ. ಮುಹಮ್ಮದ್ ಕುಂಞಿ, ಇಸ್ಮಾಯೀಲ್ ಹಾಜಿ, ಮಾಜಿ ಕಾರ್ಯದರ್ಶಿ ಅಬ್ದು ರ್ರಹ್ಮಾನ್ ಹಾಜಿ, ಜೆಡಿಎಸ್ ಮುಖಂಡ ಕೆ.ಎಸ್. ಹಮೀದ್ ಕಂಬಳಬೆಟ್ಟು, ಅಬೂಬಕರ್ ನಡುಮಜಲು, ಅಬ್ದು ರ್ರಝಾಕ್ ಅರಿಪಕಟ್ಟೆ, ಇಸ್ಮಾಯೀಲ್ ಕೋಣಿಮಾರ್, ಅಬೂಬಕರ್ ಕೊಳಂಬೆ, ಹಮೀದ್ ವೌಲಾ ಕಬಕ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಿಲಾದ್ ಸಮಿತಿ ಸಂಚಾಲಕ ರಾದ ಶಾಕಿರ್ ಅಳಕೆಮಜಲು ಸ್ವಾಗತಿಸಿ, ಹನೀಫ್ ಬಗ್ಗುಮೂಲೆ ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News