×
Ad

ಬಸ್ ನಿಂದ ಹಣದ ಬ್ಯಾಗ್ ಅಪಹರಿಸಿದ್ದ ಕಳ್ಳನ ಸೆರೆ

Update: 2016-04-05 15:42 IST

ಹುಬ್ಬಳ್ಳಿ, ಎ.5: ಬಸ್‌ನಲ್ಲಿ ಮುಂಬೈಗೆ ಚಿನ್ನ ಖರೀದಲು ಹೊರಟಿದ್ದ ಮಂಗಳೂರಿನ ವ್ಯಾಪಾರಿ ರವೀಂದ್ರ ಖದಂ ಎಂಬವರ 35 ಲಕ್ಷ ರೂ. ಹಣವಿದ್ದ  ಬ್ಯಾಗನ್ನು ಎಗರಿಸಿ ಪರಾರಿಯಾಗಿದ್ದ ಉತ್ತರ ಪ್ರದೇಶದ ಮುಹಮ್ಮದ್‌ ಶಫೀಕ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ರವೀಂದ್ರ ಖದಂ  ಅವರ ಹಣ ತುಂಬಿದ ಬ್ಯಾಗನ್ನು ಮುಹಮ್ಮದ್‌ ಶಫೀಕ್‌  ಬಸ್‌ ಬೆಳಗಾವಿಯ ಕಿತ್ತೂರು ಬಳಿ ತಲುಪುವಷ್ಟರಲ್ಲಿ ಎತ್ತಿಕೊಂಡು ಪರಾರಿಯಾಗಿದ್ದನು. ಶಫೀಕ್‌  ಹಣದ ತುಂಬಿದ ಬ್ಯಾಗನ್ನು ಕೊಂಡೊಯ್ಯುವುದು  ಸಿಸಿಟಿವಿಯಲ್ಲಿ ದಾಖಲಾಗಿತ್ತು.
ಹಣದ ಬ್ಯಾಗನ್ನು ಕಳೆದುಕೊಂಡಿದ್ದ ರವೀಂದ್ರ ಖದಂ ಅವರು ಈ ಸಂಬಂಧ ಹುಬ್ಬಳ್ಳಿ ಪೊಲೀಸರಿಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News