ನೂಡಲ್ಸ್ ಆಯಿಲ್ ಫ್ರೀ ಎಂದು ದಾರಿ ತಪ್ಪಿಸುವ ಜಾಹೀರಾತು ನೀಡಿದ್ದ ರಾಮ್ ದೇವ್ ರ ಪತಂಜಲಿ
ಹೊಸದಿಲ್ಲಿ, ಎ.5: ಭಾರತೀಯ ಜಾಹೀರಾತು ಮಾನದಂಡ ಸಮಿತಿಯ )ಎಎಸ್‌ಸಿಐ) ಗ್ರಾಹಹರ ದೂರು ಸಮಿತಿಯು (ಸಿಸಿಸಿ) ಈ ತಿಂಗಳು 102 ದೂರುಗಳನ್ನು ಪಡೆದಿದೆ. ಶಿಕ್ಷಣ ವರ್ಗದ 14, ಆಹಾರ ಮತ್ತು ಪಾನೀಯ ವರ್ಗದ 12, ಆರೋಗ್ಯ ರಕ್ಷಣೆ ವರ್ಗದ 11 ಹಾಗೂ ಇ-ವಾಣಿಜ್ಯ ವಿಭಾಗದ 6 ದಾರಿ ತಪ್ಪಿಸುವ ಜಾಹೀರಾತುಗಳ ಕುರಿತಾದ ದೂರುಗಳನ್ನು ಅದು ಎತ್ತಿ ಹಿಡಿದಿದೆ.
ಪತಂಜಲಿಯ ಅಟ್ಟಾ ನ್ಯೂಡಲ್ಸ್ ಎಣ್ಣೆ ರಹಿತವೆಂಬ ಅದರ ಪ್ರತಿಪಾದನೆಯನ್ನು ಸಾಬೀತು ಪಡಿಸಲು ವಿಫಲವಾಗಿರುವುದರಿಂದ ಅದರ ಜಾಹೀರಾತು ದಾರಿ ತಪ್ಪಿಸುವಂತಹದೆಂದು ಸಿಸಿಸಿ ಗುರುತಿಸಿದೆ.
ದನದ ಹಾಲಿನಲ್ಲಿರುವ ‘ಕೆರಾಟಿನ್’ ಪ್ರಮಾಣವನ್ನು ತಪ್ಪಾಗಿ ಉಲ್ಲೇಖಿಸಿರುವುದಕ್ಕಾಗಿ ಯೋಗ ಗುರು ರಾಮ್ ದೇವ್‌ರ ಸಂಸ್ಥೆಯ ಪತಂಜಲಿ ದನದ ಶುದ್ಧ ತುಪ್ಪವೂ ತರಾಟೆಗೊಳಗಾಗಿದೆ.
ಕೆರೋಟಿನ್ ಎಂಬ ಪದದ ಕೆರಾಟಿನ್ ಎಂದು ಉಪಯೋಗಿಸಲಾಗಿದೆ. ಹಾಗೂ ವೈಜ್ಞಾನಿಕ ಅಂಶಃ ದನದ ಹಾಲಿನಲ್ಲಿ ಕೆರಾಟಿನ್ ಇದೆಯೆಂಬುದು ಸರಿಯಲ್ಲವೆಂದು ಸಿಸಿಸಿ ಹೇಳಿದೆ.
ಅದೇ ರೀತಿ, ಭಾರ್ತಿ ಏರ್‌ಟೆಲ್‌ನ, ಏರ್‌ಟೆಲ್ ಬ್ರಾಡ್ ಬ್ಯಾಂಡ್‌ನ ಜಾಹೀರಾತು ಕೂಡ ದಾರಿ ತಪ್ಪಿಸುವಂತಹದಾಗಿದೆ. ಬಿಲ್ಲಿಂಗ್ ಆವರ್ತನಕ್ಕೆ ರೂ.615ರ ಬ್ರಾಡ್ ಬ್ಯಾಂಡ್ ಯೋಜನೆಯನ್ನು ಅದರ ವೆಬ್‌ಸೈಟ್ ಉಲ್ಲೇಖಿಸಿದೆ, ಆದರೆ, ಬಿಲ್ಲಿಂಗ್ ಯೋಜನೆಯು ಕೇವಲ ಆರು ತಿಂಗಳ ಮುಂಗಡ ಬಾಡಿಗೆ ಯೋಜನಗಷ್ಟೇ ಲಭಿಸುತ್ತದೆ.
ಕೋಕಾಕೋಲಾ ಇಂಡಿಯಾವೂ ತನ್ನ ಕೋಕಾಕೋಲಾ ಝೀರೊಗೆ ಎಎಸ್‌ಸಿಐ ಮಾರ್ಗಸೂತ್ರ ನಿಗದಿ ಪಡಿಸಿರುವ ಗಾತ್ರದಲ್ಲಿ ವಿಶೇಷ ಸೂಚನೆಯನ್ನು ಪ್ರಕಟಿಸದೆ ನಿಯಮ ಉಲ್ಲಂಘಿಸಿದೆ.
ಫೇಸ್‌ಬುಕ್ ಫ್ರೀ ಬೇಸಿಕ್‌ಗಾಗಿ ಉಚಿತ ಅಂತರ್ಜಾಲದ ಲಾಭದ ಬಗ್ಗೆ ನೀಡಿರುವ ಜಾಹೀರಾತಿನ ಮೂಲಕ, ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ಕೂಡ ತಪ್ಪುಗಾರನಾಗಿದೆ.
ಫ್ರೀ ಬೇಸಿಕ್ಸ್ ನಿಷೇಧಿಸಲ್ಪಡುವ ಅಪಾಯವಿದೆ ಎಂಬ ಅದರ ಜಾಹೀರಾತಿನ ಪ್ರತಿಪಾದನೆ. ‘ಅತಿಶಯೋಕ್ತಿಯಿಂದಾಗಿ’ ದಾರಿ ತಪ್ಪಿಸುತ್ತಿದೆಯೆಂದು ಕಾವಲು ಸಂಸ್ಥೆ ಹೇಳಿದೆ.
ಅಡ್ರಾಕ್ಸ್ ಕ್ರಾಸ್ಮನ್ ರೂಫ್ ಪ್ರಿಸಂ ಬೈನಾಕ್ಯುಲರ್‌ನ ಪೊಟ್ಟಣ ಹಾಗೂ ಪೋರ್ಟಲ್‌ನಲ್ಲಿ ಘೋಷಿಸಿರುವ ವಿವರಣೆಗಳ ನಡುವೆ ವ್ಯತ್ಯಾಸ ಇರುವುದಕ್ಕಾಗಿ ಇ-ರಿಟೇಲಿಂಗ್ ಸಂಸ್ಥೆ ಅಮೇಜಾನ್ ಕೂಡ ತರಾಟೆಗೊಳಗಾಗಿದೆ.
ಶಾಪರ್ಸ್ ಸ್ಟಾಪ್‌ನ ಜಾಹೀರಾತು ಸಹ ದಾರಿ ತಪ್ಪಿಸುವಂತಹದೆಂದು ಸಿಸಿಸಿ ಹೇಳಿದೆ.
ವೊಡಾಫೋನ್‌ನ ಸೂಪರ್ ಫಾಸ್ಟ್ ವೊಡಾಫೋನ್ ನೆಟ್‌ವರ್ಕ್, ಚಾಕ್ಲೆಟ್ ಹಾಗೂ ಚೂಯಿಂಗ್ ಗಮ್ ತಯಾರಿಸುವ ಪರ್ಫೆಟಿ ವಾನ್ ಮೆಲ್ಲೆ ಇಂಡಿಯಾದ ಹಣ್ಣಿನ ಪರಿಮಳದ ಗಮ್‌ನ ಜಾಹೀರಾತುಗಳು ಸಹ ಗ್ರಾಹಕರ ದಾರಿ ತಪ್ಪಿಸುವವುಗಳೆಂದು ಅದು ನಿರ್ಧರಿಸಿದೆ.