ಹಾಕ್ ಬೇ ಹಾಕಿ ಕಪ್: ಭಾರತ ಮಹಿಳಾ ತಂಡಕ್ಕೆ ಹ್ಯಾಟ್ರಿಕ್ ಸೋಲು
Update: 2016-04-05 23:41 IST
ಹೇಸ್ಟಿಂಗ್ಸ್ (ನ್ಯೂಝಿಲೆಂಡ್), ಎ.5: ಹಾಕ್ ಬೇ ಕಪ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಕಳಪೆ ಪ್ರದರ್ಶನ ಮುಂದುವರಿದಿದ್ದು, ಸತತ ಮೂರನೆ ಸೋಲು ಕಂಡಿದೆ.
ಮಂಗಳವಾರ ಇಲ್ಲಿ ನಡೆದ ಬಿ ಗುಂಪಿನ 3ನೆ ಪಂದ್ಯದಲ್ಲಿ ಭಾರತ ತಂಡ ವಿಶ್ವದ ನಂ.5ನೆ ತಂಡವಾದ ಚೀನಾದ ವಿರುದ್ಧ 1-2 ಗೋಲುಗಳ ಅಂತರದಿಂದ ಸೋತಿದೆ.
ಆರಂಭದ ಅವಧಿಯಲ್ಲಿ ಗೋಲು ಬಾರಿಸಲು ವಿಫಲವಾದ ಭಾರತಕ್ಕೆ 19ನೆ ನಿಮಿಷದಲ್ಲಿ ರಾಣಿ ಮುನ್ನಡೆ ಒದಗಿಸಿಕೊಟ್ಟರು. ಆದರೆ, ಚೀನಾದ ಯೂ ಕ್ಷಿಯಾನ್ ಗೋಲು ಬಾರಿಸಿ ಸ್ಕೋರನ್ನು ಸರಿಗಟ್ಟಿದರು. ಕೊನೆಯ ಕ್ವಾರ್ಟರ್‌ನಲ್ಲಿ ಗೋಲು ಬಾರಿಸಿದ ವಾಂಗ್ ಮೆಂಗ್‌ಯೂ ಚೀನಾಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಮೊದಲೆರಡು ಪಂದ್ಯಗಳಲ್ಲಿ ನ್ಯೂಝಿಲೆಂಡ್ ಹಾಜಖಿ ಐರ್ಲೆಂಡ್ ವಿರುದ್ಧ ಸೋತಿರುವ ಭಾರತ ಇದೀಗ ಹ್ಯಾಟ್ರಿಕ್ ಸೋಲು ಕಂಡಿದೆ. ಎ.7 ರಂದು ನಡೆಯಲಿರುವ ತನ್ನ 4ನೆ ಪಂದ್ಯದಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.