×
Ad

ಬಾಂಗ್ಲಾ: 2 ಕೋಟಿ ಮಂದಿಗೆ ಆರ್ಸೆನಿಕ್ ಮಿಶ್ರಿತ ನೀರೇ ಗತಿ

Update: 2016-04-06 23:40 IST

ಢಾಕಾ, ಎ. 6: ಕುಡಿಯುವ ನೀರಿನಲ್ಲಿ ಆರ್ಸೆನಿಕ್ ಬೆರೆತಿರುವುದನ್ನು ಎರಡು ದಶಕಗಳ ಹಿಂದೆಯೇ ಪತ್ತೆಹಚ್ಚಲಾಗಿದೆಯಾದರೂ, ಸುಮಾರು ಎರಡು ಕೋಟಿ ಬಾಂಗ್ಲಾದೇಶೀಯರು ಈಗಲೂ ಮಾರಕ ವಿಷ ಬೆರೆತ ನೀರನ್ನೇ ಕುಡಿಯುತ್ತಿದ್ದಾರೆ ಎಂದು ಮಾನವಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್’ ಇಂದು ಹೇಳಿದೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮೂಲ ಕ್ರಮಗಳನ್ನೇ ಬಾಂಗ್ಲಾದೇಶ ತೆಗೆದುಕೊಂಡಿಲ್ಲ ಎಂದು ಸಂಘಟನೆ ಪ್ರಕಟಿಸಿದ ನೂತನ ವರದಿ ಹೇಳಿದೆ.
ಆರ್ಸೆನಿಕ್ ಬೆರೆತ ನೀರು ಕುಡಿದು ಪ್ರತಿ ವರ್ಷ ಸುಮಾರು 43,000 ಬಾಂಗ್ಲಾದೇಶೀಯರು ಸಾಯುತ್ತಿದ್ದಾರೆ ಹಾಗೂ ಈ ಪೈಕಿ ಹೆಚ್ಚಿನ ಸಾವುಗಳು ಬಡ ಗ್ರಾಮೀಣ ಪ್ರದೇಶಗಳಲ್ಲಿ ಸಂಭವಿಸುತ್ತಿವೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News