×
Ad

ವಿದೇಶದಲ್ಲಿ ತಂದೆಯ ಹಣ ಕ್ಯಾಮರೂನ್‌ಗೆ ಹೆಚ್ಚಿದ ಒತ್ತಡ

Update: 2016-04-06 23:45 IST

ಲಂಡನ್, ಎ. 6: ತನ್ನ ದಿವಂಗತ ತಂದೆ ಇಯಾನ್ ಕ್ಯಾಮರೂನ್ ತೆರಿಗೆ ತಪ್ಪಿಸಿ ಬಹಾಮಸ್ ದೇಶದಲ್ಲಿ ಹಣ ಹೂಡಿದ್ದಾರೆ ಎನ್ನುವುದು ಪನಾಮ ದಾಖಲೆಗಳಿಂದ ಬಯಲಾಗಿರುವ ಹಿನ್ನೆಲೆಯಲ್ಲಿ, ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಈ ದಾಖಲೆಗಳು ಕ್ಯಾಮರೂನ್‌ರ ಕುಟುಂಬದ ಹಣಕಾಸು ವ್ಯವಹಾರಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿವೆ.
ವಿದೇಶಗಳಲ್ಲಿ ತನ್ನ ವೈಯಕ್ತಿಕ ಹಣವಿಲ್ಲ ಎಂದು ಮಂಗಳವಾರ ಅವರು ಹೇಳಿಕೆ ನೀಡಿದ್ದಾರೆ. ‘‘ನಾನು ಶೇರುಗಳನ್ನು ಹೊಂದಿಲ್ಲ, ವಿದೇಶಿ ಟ್ರಸ್ಟ್‌ಗಳನ್ನು ಹೊಂದಿಲ್ಲ, ವಿದೇಶಗಳಲ್ಲಿ ಹೂಡಿಕೆಗಳನ್ನು ಹೊಂದಿಲ್ಲ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News