×
Ad

ವಿಸ್‌ಕೋನ್ಸಿನ್: ಕ್ರೂಝ್, ಸ್ಯಾಂಡರ್ಸ್‌ಗೆ ಜಯ

Update: 2016-04-06 23:45 IST

ವಾಶಿಂಗ್ಟನ್, ಎ. 6: ಅಮೆರಿಕದ ವಿಸ್‌ಕೋನ್ಸಿನ್ ರಾಜ್ಯದಲ್ಲಿ ಮಂಗಳವಾರ ನಡೆದ ಅಧ್ಯಕ್ಷೀಯ ಪ್ರೈಮರಿಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಆಕಾಂಕ್ಷಿ ಟೆಡ್ ಕ್ರೂಝ್ ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಆಕಾಂಕ್ಷಿ ಬರ್ನಿ ಸ್ಯಾಂಡರ್ಸ್ ಜಯ ಗಳಿಸಿದ್ದಾರೆ. ಆ ಮೂಲಕ, ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ರಿಪಬ್ಲಿಕನ್ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಹಿಲರಿ ಕ್ಲಿಂಟನ್‌ರಿಗೆ ಆಘಾತ ನೀಡಿದ್ದಾರೆ.
ಟೆಕ್ಸಾಸ್ ಸೆನೆಟರ್ ಕ್ರೂಝ್ 49 ಶೇಕಡ ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಟ್ರಂಪ್ 35 ಶೇಕಡ ಮತಗಳಿಗೆ ತೃಪ್ತಿ ಪಟ್ಟರು.

ಇನ್ನೋರ್ವ ರಿಪಬ್ಲಿಕನ್ ಅಭ್ಯರ್ಥಿ ಓಹಿಯೊ ಗವರ್ನರ್ ಜಾನ್ ಕ್ಯಾಸಿಚ್ 14 ಶೇಕಡ ಮತಗಳನ್ನು ಪಡೆದರು. ಇಲ್ಲಿ ಕ್ರೂಝ್ ಅನುಭವಿಸಿದ ಸೋಲು ಟ್ರಂಪ್‌ಗೆ ತೀವ್ರ ಹಿನ್ನಡೆಯಾಗಿದೆ. ಇದು ರಿಪಬ್ಲಿಕನ್ ಸ್ಪರ್ಧೆಯ ಸಮೀಕರಣವನ್ನೇ ಬದಲಾಯಿಸಬಹುದಾಗಿದೆ. ಡೆಮಾಕ್ರಟಿಕ್ ಪಕ್ಷದಲ್ಲಿ, ವರ್ಮಂಟ್ ಸೆನೆಟರ್ ಸ್ಯಾಂಡರ್ಸ್ 57 ಶೇಕಡ ಮತಗಳನ್ನು ಪಡೆದು ವಿಜಯಿಯಾದರು. ಅವರ ಪ್ರತಿಸ್ಪರ್ಧಿ ಹಿಲರಿಗೆ 43 ಶೇಕಡ ಮತಗಳು ಬಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News