×
Ad

ಏಷ್ಯಾದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನೀತಾ ಅಂಬಾನಿಗೆ ಅಗ್ರಸ್ಥಾನ

Update: 2016-04-07 14:10 IST

ನ್ಯೂಯಾರ್ಕ್ , ಎ.7:  ಫೋರ್ಬ್ಸ್‌ ಪ್ರಕಟಿಸಿರುವ ಏಷ್ಯಾದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ರಿಲಾಯನ್ಸ್‌ ಫೌಂಡೇಷನ್‌ ಮುಖ್ಯಸ್ಥೆ ನೀತಾ ಮುಕೇಶ್ ಅಂಬಾನಿ ಅವರು ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

2016ನೇ ಸಾಲಿನ ಏಷ್ಯಾದ 50 ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಫೋರ್ಬ್ಸ್‌ ಪ್ರಕಟಿಸಿದ್ದು, ಭಾರತದ ಎಂಟು ಮಹಿಳೆಯರು  ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.ಭಾರತೀಯ ಸ್ಟೇಟ್ ಬ್ಯಾಂಕ್‌ನ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಅರುಂಧತಿ ಭಟ್ಟಾಚಾರ್ಯ್ ಅವರು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

 ಮು ಸಿಗ್ಮಾ ಸಿಇಒ ಅಂಬಿಗಾ ಧೀರಜ್(14ನೇ ಸ್ಥಾನ) ವೆಲ್‌ಸ್ಪನ್‌ ಇಂಡಿಯಾ ಸಿಇಒ ದೀಪಾಲಿ ಗೋಯೆಂಕಾ (16), ಲುಪಿನ್ ಸಿಇಒ ವಿನಿತಾ ಗುಪ್ತಾ(18), ಐಸಿಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಸಿಇಒ ಚಂದಾ ಕೊಚ್ಚರ್ (22), ವಿಎಲ್‌ಸಿಸಿ  ಹೆಲ್ತ್‌ಕೇರ್‌ ಸಂಸ್ಥಾಪಕಿ ವಂದನಾ ಲುಥ್ರಾ(26) ಹಾಗೂ ಬಕೊಕಾನ್‌ನ ಕಿರಣ್ ಮುಜುಂದಾರ್ ಷಾ(28) ಅವರು ಪಟ್ಟಿಯಲ್ಲಿ ಸ್ಥಾನ ಪಡೆದ ಇತರ ಭಾರತೀಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News