×
Ad

ಕೇರಳ: ಆನ್‌ಲೈನ್ ವಂಚನೆಯಲ್ಲಿ ಕಳೆದು ಕೊಂಡ ಹಣವನ್ನು ಸೈಬರ್ ಪೊಲೀಸ್ ಕೊಡಿಸಿತು

Update: 2016-04-07 16:30 IST

ಕೊಲ್ಲಂ, ಎಪ್ರಿಲ್,7: ಆನ್‌ಲೈನ್ ವಂಚನೆಯಲ್ಲಿ ನಷ್ಟವಾದ ಮೊತ್ತವನ್ನು ಸೈಬರ್ ಪೊಲೀಸ್ ಮಧ್ಯಪ್ರವೇಶಿಸಿದ ಕಾರಣದಿಂದ ಮರಳಿದೊರಕಿರುವ ಘಟನೆ ವರದಿಯಾಗಿದೆ. ಕೊಲ್ಲಂ ಅಂಚೆ ಇಲಾಖೆ ಉದ್ಯೋಗಿಗೆ ಆನ್‌ಲೈನ್ ಖರೀದಿಯ ಹೆಸರಲ್ಲಿ ಮೋಸ ಮಾಡಲಾಗಿತ್ತು. ಫೀಡಂ ರಿವಾರ್ಡ್ಸ್‌ಗೆ ಸಂಬಂಧಿಸಿದ ಬ್ಯಾಂಕ್ ಅಧಿಕಾರಿ ಎಂದು ಹೇಳಿ ಮಹಿಳೆಯೊಬ್ಬಳು ಅಂಚೆ ಉದ್ಯೋಗಿಗೆ ಫೋನ್ ಕರೆಮಾಡಿದ್ದಳು. ಡೆಬಿಟ್‌ಕಾರ್ಡ್ ಉಪಯೋಗಿಸಿ ಆನ್‌ಲೈನ್ ಪರ್ಚೇಸ್ ನಡೆಸುವಾಗ ಬೋನಸ್ ಪಾಯಿಂಟ್ ಸಿಗುವುದರ ಕುರಿತು ಅವಳು ವಿವರಿಸಿದ್ದಳು. ಅದರ ಮೂಲಕ ಫೋನ್ ರಿಚಾರ್ಜ್ ಕೂಡಾ ಸಾಧ್ಯವಾಗಲಿದೆ ಎಂದು ಮನದಟ್ಟು ಮಾಡಿದ್ದಳು. ಆನಂತರ ಎಟಿಎಂ ಕಾರ್ಡ್‌ನ ಮುಂಭಾಗ ನಂಬರ್ ಮತ್ತು ಹಿಂದಿನ ಸಿವಿವಿ ನಂಬರ್(ಕ್ರೆಡಿಟ್ ಕಾರ್ಡ್ ವೆರಿಫಿಕೇಶನ್ ವ್ಯಾಲ್ಯೂ) ಕೇಳಿ ಮನವರಿಕೆಮಾಡಿಕೊಂಡಿದ್ದಳು. ನಂಬರ್‌ಗಳನ್ನು ದೃಢಪಡಿಸುವ ವನ್‌ಟೈಂ ಪಾಸ್‌ವರ್ಡ್ ಮೊಬೈಲ್ ಫೋನ್‌ನಲ್ಲಿ ಸಂದೇಶ ತಲುಪಿದೆ ಎಂದು ಹೇಳಿದ್ದಳು.

ಇದರ ನಂತರ ನಂಬರ್ ಕೊಟ್ಟು ಫೋನ್ ಕಟ್‌ಆದಾಗ 39000 ರೂಪಾಯಿ ಆನ್‌ಲೈನ್ ಪರ್ಚೇಸಿಂಗ್ ಈಡುಗೊಳಿಸಿ ಮೊಬೈಲ್ ಸಂದೇಶ ತಲುಪಿತ್ತು. ಇಬೈ ಆನ್‌ಲೈನ್‌ನಿಂದ ಪರ್ಚೇಸಿಂಗ್ ಮೂಲಕ ಹಣ ನಷ್ಟವಾಗಿತ್ತು. ಈ ಸಂದೇಶ ತಲುಪಿದೊಡನೆ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಇ-ಬೈ ಕಸ್ಟಮರ್ ಕೇರ್‌ಗೆ ಸಂಪರ್ಕಿಸಿದಾಗ ದೂರು ನೀಡಿದ ಎಫ್‌ಐಆರ್ ಬೇಕೆಂದು ಬ್ಯಾಂಕ್ ಅಧಿಕಾರಿಗಳು ಹೇಳಿದರು. ಎಫ್‌ಐಆರ್‌ಗೆ ಸಮಯ ಹಿಡಿಯುವುದರಿಂದ ಸಿಟಿ ಪೊಲೀಸ್ ಕಮೀಶನರ್ ಇಮೈಲ್ ಮಾಡಿ ಇಬೈ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ವಂಚನೆ ಮನವರಿಕೆಯಾದ ಕಂಪೆನಿ ವ್ಯವಹಾರವನ್ನು ಸ್ಥಗಿತಗೊಳಿಸಿ ಅಂಚೆ ಇಲಾಖೆಯ ಉದ್ಯೋಗಿಯ ಹಣವನ್ನು ಮರಳಿಸಿದರು. ಆನ್‌ಲೈನ್ ಪರ್ಚೇಸಿಂಗ್ ವಂಚನೆ ಪ್ರತಿದಿವಸವೂ ಹೆಚ್ಚುತ್ತಾ ಸಾಗುತ್ತಿದೆಯೆಂದು ವರದಿಯಾಗಿದೆ. ಬುಧವಾರದಂದು ಗೃಹಿಣಿಯೊಬ್ಬರಿಗೆ ಫೋನ್ ಮಾಡಿ ಎಟಿಎಂ ಕಾರ್ಡ್ ವೆರಿಫಿಕೇಶನ್ ಭಾಗವಾಗಿ ಕಾರ್ಡ್‌ನ ನಂಬರ್‌ಗಳನ್ನು ಕೇಳಿದ್ದು ಸಂದೇಹವಾದ್ದರಿಂದ ಗೃಹಿಣಿ ನಂಬರ್ ನೀಡಿರಲಿಲ್ಲ. ಫೋನ್ ಮುಖಾಂತರ ಬ್ಯಾಂಕ್ ಅಧಿಕೃತರನ್ನು ಪರಿಚಯ ಮಾಡಿಕೊಂಡು ಆನ್‌ಲೈನ್ ಪರ್ಚೇಸಿಂಗ್ ವಂಚನೆ ನಡೆಸುವ ತಂಡಗಳು ಬಿಹಾರ್ ಝಾಕಂಡ್‌ನಿಂದ ಕಾರ್ಯಾಚರಿಸುತ್ತಿವೆ ಎನ್ನಲಾಗಿದೆ. ಒಂದಕ್ಕಿಂತ ಹೆಚ್ಚು ಮಂದಿಗೆ ಬಳಕೆ ಮಾಡಲು ಸಾಧ್ಯವಿರುವ ಕಾನ್ಫೆರೆನ್ಸ್ ಫೋನ್‌ನನ್ನು ಬಳಸುತ್ತಿದ್ದು ಆನ್‌ಲೈನ್ ಪರ್ಚೇಸಿಂಗ್‌ಗೆ ಬಳಕೆದಾರರ ಅಕೌಂಟ್‌ನಿಂದ ಹಣವನ್ನು ದೋಚುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಆನ್‌ಲೈನ್ ಪರ್ಚೇಸಿಂಗ್ ಆಗಿರುವುದರಿಂದ ಕೂಡಲೇ ಸೈಬರ್ ಪೊಲೀಸ್‌ಗೆ ತಿಳಿಸಿದರೆ ಮಾತ್ರ ಪರಿಹಾರ ಸಾಧ್ಯ. ವಂಚಕರು ಬಳಸುವ ಸಿಮ್ ಕಾರ್ಡ್ ನಕಲಿ ವಿಳಾಸದ ಮೂಲಕ ಪಡೆದಿರುವುದಾದ್ದರಿಂದ ವಂಚಕರನ್ನು ಪತ್ತೆಹಚ್ಚುವುದು ಹೆಚ್ಚು ಪ್ರಯಾಸಕರವಾಗಿದೆ. ಆನ್‌ಲೈನ್ ಮಾರಾಟ ಸೈಟ್‌ಗಳಿಂದ ಯಾರು ಖರೀದಿ ನಡೆಸಿರುವುದೆಂದು ಪತ್ತೆಹಚ್ಚಬಹುದು.ಹಣ ಮರಳಿಸಿಕ್ಕವರಿಂದ ದೂರುಗಳು ಇಲ್ಲದಿರುವುದು ಮತ್ತು ಆನ್‌ಲೈನ್ ಕಂಪೆನಿಗಳಿಂದ ವಿಳಾಸ ಸಿಗಲು ವಿಳಂಬವಾಗುವುದು ವಂಚನೆ ಪ್ರಕರಣದಲ್ಲಿ ತನಿಖೆ ಮುಂದುವರಿಯುವುದಿಲ್ಲ. ದೂರುದಾರರು ದೃಢವಾಗಿ ನಿಂತರೆ ವಂಚಕರನ್ನು ಪತ್ತೆಹಚ್ಚಲುಸಾಧ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News